Sunday, September 8, 2024

2024ರ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ, ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ: ಅಮಿತ್​ ಶಾ

ಗುಜರಾತ (ಅ.09): ಗಾಂಧಿನಗರದ ಪಾನ್ಸಾರ್​​​ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್​ 7ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸೇವೆಗೆ ಕಾಲಿಟ್ಟು 20ವರ್ಷವಾಯಿತು. ಜಗತ್ತಿನ ಇನ್ಯಾವ ನಾಯಕನೂ ಹೀಗೆ  20 ವರ್ಷಗಳ ಕಾಲ ಬ್ರೇಕ್​ ಇಲ್ಲದೆ, ನಿರಂತರವಾಗಿ ಜನರ ಸೇವೆ ಮಾಡಿದ ಉದಾಹರಣೆಯಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದು ಕಷ್ಟ. ಅಂಥದ್ದರಲ್ಲಿ ನರೇಂದ್ರ ಮೋದಿಯವರನ್ನು ಜನರು ಮೆಚ್ಚಿ ಆಯ್ಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.  ಇನ್ನು, ನರೇಂದ್ರ ಮೋದಿ 2001ರ ಅಕ್ಟೋಬರ್​ 7ರಂದು ಗುಜರಾತ್​ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2014ರಲ್ಲಿ ಪ್ರಧಾನಮಂತ್ರಿಯಾದರು. 2024ರಲ್ಲಿಯೂ ಅವರೇ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!