Saturday, June 15, 2024

ಹನ್ನೆರಡನೆಯ ಶತಮಾನದ ಶರಣರ ವಚನಗಳಲ್ಲಿ ಅಪಾರ ಶಕ್ತಿ ಅಡಗಿದೆ :-ಪ್ರೇಮಕ್ಕ ಅಂಗಡಿ

ಬೆಳಗಾವಿ: ಕಾಲ ಕರ್ಮಗಳನ್ನು ಗೆದ್ದು ಬದುಕನ್ನು ಕಂಡುಕೊಂಡವರು ನಮ್ಮ ಹನ್ನೆರಡನೆಯ ಶತಮಾನದ ಶರಣರು. ಜೋಳಿವಾಳಯ್ಯ ನಾನಲ್ಲ,ಒಡೆಯನ ಋಣದಲ್ಲಿ ಇರದ ಬಸವಣ್ಣನವರು ಇಡೀ ವಿಶ್ವವನ್ನೇ ಮಹಾಮನೆಯೆಂದು ತಿಳಿದು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದಂತವರು ಶರಣರಲ್ಲಿ ಸ್ತಿತಪ್ರಜ್ಞೆ ಇತ್ತು ಮಹಾನವಮಿ ಸಮಯದಲ್ಲಿ ಕಲ್ಯಾಣ ಕ್ರಾಂತಿ ಯಾಯಿತು.

ಹಲವಾರುಶರಣರನ್ನು ಆನೆಕಾಲಿಗೆ ಕಟ್ಟಿ ಎಳೆಹೂಟ ಶಿಕ್ಷೆ ಕೊಟ್ಟರೂ ಸಹಿತ ಸ್ಥಿತಪ್ರಜ್ಞರಾಗಿ ಹರಹರ ಮಹಾದೇವ ಘೋಷಣೆ ಮಾಡಿ,ಮರಣವೆ ಶರಣರಿಗೆ ಮಹಾನವಮಿ ಎಂದು ಸಾರಿದವರು ಶರಣರು. ಅಂತ ರಂಗದ ಶಕ್ತಿಯ ಬಳಸಿಕೊಂಡು ನವಲಿಂಗಗಳಲ್ಲಿ ಭಗವಂತನ ಸಾಕ್ಷಾತ್ಕಾರ ಪಡೆದ ಶರಣರ ಜೀವನ ನಮಗೆ ದಾರಿದೀಪ.

ಶರಣರ ಮಾರ್ಗದಲ್ಲಿ ಡೆದು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ಶರಣೆ ಪ್ರೇಮಕ್ಕ ಅಂಗಡಿ ಯವರು ಇಂದು ಮಹಾಂತೇಶ ನಗರದ ಮಹಾಂತಭವನದಲ್ಲಿ ಜರುಗಿದ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಾಸಿಕ ಅನುಭಾವ ಸತ್ಸಂಗದಲ್ಲಿ ಕರೆಕೊಟ್ಟರು.

ಸಾನಿದ್ಯ ವಹಿಸಿದ್ದ ಪ.ಪೂ.ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿ ಮಠ ನಾಗನೂರ ಬೆಳಗಾವಿ ಇವರು ಮಾತನಾಡಿದರು ಪ.ಪೂ ಡಾ. ಶಿವಬಸವ ಮಹಾಸ್ವಾಮಿಗಳು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತ,ಮಹಾಸ್ವಾಮಿಗಳ ಕನ್ನಡ ಸೇವೆ ಅನನ್ಯವಾದುದು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶರಣ ಬಸವರಾಜ ರೊಟ್ಟಿ ಯವರು ಮಾತನಾಡುತ್ತಾ, ನೂತನವಾಗಿ ನಿರ್ಮಾಣವಾಗತ್ತಿರುವ ವಿಸ್ತಾ ಪಾರ್ಲಿಮೆಂಟ್ ಭವನಕ್ಕೆ ವಿಶ್ವ ಗುರು ಬಸವಣ್ಣನವರ ಹೆಸರನ್ನು ಇಡಬೇಕು ಹಾಗೂ ಬೆಳಗಾವಿ ರೈಲು ನಿಲ್ದಾಣಕ್ಕೆ ಡಾ.ಶಿವಬಸವ ಮಹಾಸ್ವಾಮಿಗಳ ಹೆಸರನ್ನು ಇಡಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಬೆಳಗಾವಿ ಮಹಾನಗರಪಾಲಿಕೆಗೆ ನೂತನ ವಾಗಿ ಆಯ್ಕೆಯಾದ ರಾಜಶೇಖರ ಡೋಣಿ, ಹನುಮಂತ ಕೊಂಗಾಲಿ , ಸವಿತಾ ಪಾಟೀಲ , ಅಸ್ಮಿತಾ ಪಾಟೀಲ , ರೇಖಾ ಹೂಗಾರ ಶ್ರೀ ಮತಿವೀಣಾ ಬಿಜಾಪುರ ಹಾಗೂ ಶಂಕರ ಗೌಡ ಪಾಟೀಲ ಅವರನ್ನು ಸತ್ಕರಿಸಲಾಯಿತು. ಪ್ರಾರಂಭದಲ್ಲಿ ಅಗಲಿದ ವ್ಯಕ್ತಿಗಳಿಗೆ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.
ನ್ಯಾಯವಾದಿಗಳಾದ ಬಸವರಾಜ ಸುಲ್ತಾನಪುರ, ಆನಂದ ಕರ್ಕಿ, ವಿದ್ಯಾ ಕರ್ಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಂಕರ ಗುಡಸ್ ಸ್ವಾಗತಿಸಿದರು. ಶರಣ ಚಂದ್ರಪ್ಪ ಬೂದಿಹಾಳ ಶರಣು ಸಮರ್ಪಣೆ ಸಲ್ಲಿಸಿದರು. ಅಶೋಕ ಮಳಗಲಿ ನಿರೂಪಿಸಿದರು. ಹಲವಾರು ಬಸವ ಅನುಯಾಯಿಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!