Tuesday, September 17, 2024

ಪ್ರಿಯಕರನಿಗೆ ಗಂಡನ ಕೊಲೆ ಮಾಡಲು ಸುಪಾರಿ ಕೊಟ್ಟ ಹೆಂಡತಿ! ಕೊಲೆ ಆಗಬೇಕಾದ ಗಂಡ ಮನೆಗೆ ವಾಪಸ್;ಪ್ರಿಯಕರ ಸೂಸೈಡ್

ಬೆಂಗಳೂರು: ಪ್ರಿಯಕರನ ಜೊತೆಗೂಡಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟ ಹೆಂಡತಿ. ಸುಪಾರಿ ಪಡೆದ ಹಂತಕರು ಗಂಡನ ಕಿಡ್ನಾಪ್ ಮಾಡಿ, ಕೊಲ್ಲೋದಕ್ಕೂ ಟ್ರೈ ಮಾಡಿದ್ರು. ಅಂದ್ರೆ ಕೊಲೆ ಆಗಬೇಕಾದ ಗಂಡ ವಾಪಸ್ ಮನೆಗೆ ಬಂದ. ಕೊಲೆ ಮಾಡಲು ಸುಪಾರಿ ಕೊಟ್ಟ ಪ್ರಿಯಕರ ಸೂಸೈಡ್ ಮಾಡಿಕೊಂಡ!

 ಹೌದು ಇದೊಂಥರಾ ವಿಚಿತ್ರ ಕೇಸ್: ಬೆಂಗಳೂರು ನಗರದ ಪೀಣ್ಯಾ ಸಮೀಪದ ದೊಡ್ಡಬಿದರಕಲ್ಲು ನಿವಾಸಿಗಳಾದ ನವೀನ್ ಕುಮಾರ್ ಹಾಗೂ ಅನುಪಲ್ಲವಿ ಮದುವೆಯಾಗಿ ಸುಖವಾಗಿ ಸಂಸಾರ ಸಾಗಿಸುತ್ತಿದ್ದರು. ಈ ನಡುವೆ ಅನುಪಲ್ಲವಿಗೆ ಹಿಮಂತ್ ಕುಮಾರ್ ಎಂಬಾತನ ಪರಿಚಯವಾಗಿದೆ. ಇಬ್ಬರ ನಡುವೆ ಸಲುಗೆ ಬೆಳೆದು, ಅದು ಪ್ರೇಮಕ್ಕೆ ತಿರುಗಿ, ಅನೈತಿಕ ಸಂಬಂಧಕ್ಕೂ ದಾರಿ ಮಾಡಿಕೊಟ್ಟಿದೆ.

ಹಿಮಂತ್ ಹಾಗೂ ಅನುಪಲ್ಲವಿ ನಡುವಿನ ಸಂಬಂಧಕ್ಕೆ ಆಕೆಯ ಪತಿ ನವೀನ್ ಕುಮಾರ್ ಅಡ್ಡಿಯಾಗಿದ್ದಾನೆ. ಪತಿ ನವೀನ್​ನನ್ನೇ ಮುಗಿಸಲು ಇವರಿಬ್ಬರೂ ಪ್ಲಾನ್​ ಮಾಡಿದ್ದರು. ಅದರಂತೆ ಅನುಪಲ್ಲವಿ, ಗಂಡನನ್ನು ಕೊಲೆ ಮಾಡಲು ಪ್ರಿಯಕರ ಹಿಮಂತನಿಗೆ ಕೊಲೆ ಮಾಡಲು ಒಂದು ಲಕ್ಷ ರೂಪಾಯಿ ಸುಪಾರಿ ನೀಡಿದ್ದಳು.

ಸುಪಾರಿ ಪಡೆದ ಹಿಮಂತ, ತನ್ನ ಇಬ್ಬರು ಸ್ನೇಹಿತರಾದ ಹರೀಶ್ ಹಾಗೂ ನಾಗರಾಜ್ ಎಂಬುವರಿಗೆ ಹಣ ಕೊಟ್ಟು, ನವೀನ್ ಕುಮಾರ್‌ನನ್ನು ಕೊಲ್ಲುವ ಪ್ಲಾನ್ ಮಾಡಿದ್ದ. ಹರೀಶ್ ಹಾಗೂ ನಾಗರಾಜ್ ಎಂಬಿಬ್ಬರು ನವೀನ್‌ನನ್ನು ಜುಲೈ 23ರಂದು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿ ತಮಿಳುನಾಡಿನ ವಿರೂದ್ ನಗರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೊಲೆ ಮಾಡಲು ತಮಿಳುನಾಡಿನ ಮುಗಿಲನ್ ಹಾಗು ಕಣ್ಣನ್ ಎಂಬುವರನ್ನು ಕರೆಸಿಕೊಂಡಿದ್ದರು.

ಆರೋಪಿಗಳು

ವಿಚಿತ್ರ ಅಂದ್ರೆ ಈ ವೇಳೆ ಯಾರು ತನ್ನನ್ನು ಕಿಡ್ನಾಪ್ ಮಾಡಿದ್ದರೋ ಅವರೊಂದಿಗೆ ನವೀನ್ ಕುಮಾರ್ ಸ್ನೇಹ ಬೆಳಸಿಕೊಂಡು,ಅವರೊಂದಿಗೆ ಪಾರ್ಟಿ ಮಾಡಿ ನಂಬಿಕೆ ಗಳಸಿದ್ದಾನೆ. ಕೊನೆಗೆ ಆತನನ್ನು ಕೊಲೆ ಮಾಡುವ ಪ್ಲಾನ್ ಅನ್ನೇ ಹಂತಕರು ಚೇಂಜ್ ಮಾಡಿದ್ದಾರೆ.

ನವೀನ್ ಕುಮಾರನನ್ನು ಕೊಲೆ ಮಾಡಿದಂತೆ ನಾಟಕ ಮಾಡಿ , ಆತನ ಮೈಮೇಲೆ ಟೊಮೇಟೋ ಕೆಚಪ್ ಹಾಕಿ, ರಕ್ತ ಎನ್ನುವಂತೆ ಬಿಂಬಿಸಿದ್ದಾರೆ. ಆ ಫೋಟೋಗಳನ್ನು ತೆಗೆದು ಬೆಂಗಳೂರಿನಲ್ಲಿದ್ದ ಹಿಮಂತ್ ಹಾಗೂ ಅನುಪಲ್ಲವಿಗೆ ಕಳಿಸಿದ್ದಾರೆ. 

ಆ ಫೋಟೋ ನೋಡಿ ಗಾಬರಿಗೊಂಡ ಹಿಮಂತ, ನವೀನ್ ಕೊಲೆಯಾದ ಎಂದು ಪೊಲೀಸರಿಗೆ ಹೆದರಿ ಆ.1ರಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಈ ಆತ್ಮಹತ್ಯೆ ಬಗ್ಗೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಘಟನೆ ನಡೆದಾಗ ಆತ್ಮಹತ್ಯೆ ಬಗ್ಗೆ ಕಾರಣ, ಸುಳಿವು ಪತ್ತೆಯಾಗಿರಲಿಲ್ಲ. ಸದ್ಯ ಈ ಸುಪಾರಿ ಪ್ರಕರಣದ ಬಳಿಕವೇ ಆತ್ಮಹತ್ಯೆ ಕಾರಣ ಬಯಲಾಗಿದೆ.

ಇನ್ನು ಪ್ರಿಯಕರನ ಮೂಲಕ ಗಂಡನ ಕೊಲ್ಲಲು ಸುಪಾರಿ ನೀಡಿದ ಅರ್ಧಾಂಗಿ ಜೈಲುಪಾಲಾಗಿದ್ದಾಳೆ. ಘಟನೆ ಸಂಬಂಧ ಅನುಪಲ್ಲವಿ ಮತ್ತು ಆಕೆಯ ತಾಯಿ ಅಮುಜಮ್ಮ ಹಾಗೂ ಸಹಚರರಾದ ಪೀಣ್ಯ ಬಡಾವಣೆಯ ಹರೀಶ್, ನಾಗರಾಜು ಮತ್ತು ಮುಗಿಲನ್ ಎಂಬುವರನ್ನು ಬಂಧಿಸಲಾಗಿದೆ. ಕೊಲೆಯಾಗಬೇಕಿದ್ದ ನವೀನ್ ಕುಮಾರ್ ಅದೃಷ್ಟವಶಾತ್ ಮನೆಗೆ ವಾಪಸ್ಸಾಗಿದ್ದಾನೆ.

 

 

 

 

 

 

 

 

ಜಿಲ್ಲೆ

ರಾಜ್ಯ

error: Content is protected !!