Saturday, July 20, 2024

ಯೋಗ ಬದುಕಿನ ಭಾಗವಾಗಲಿ – ಯೋಗಗುರು ಗಿರಿಮಲ್ಲಪ್ಪ ಬೆಳವಡಿ

ಬೈಲಹೊಂಗಲ: ಮನಸ್ಸಿನ ಏಕಾಗ್ರತೆಗೆ ಸಹಕಾರಿಯಾದ ಯೋಗ ಬದುಕಿನ ಭಾಗವಾಗಲಿ ಎಂದು ದೊಡವಾಡ ಗ್ರಾಮದ ಯೋಗ ಗುರುಗಳಾದ ಗಿರಿಮಲ್ಲಪ್ಪ ಬೆಳವಡಿ ಹೇಳಿದರು. ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನದ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಅವರು ಮಾತನಾಡಿದರು.ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಅನೇಕ ರೋಗಗಳನ್ನು ದೂರ ಮಾಡಬಹುದಲ್ಲದೇ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಯೋಗಕ್ಕೆ ತನ್ನದೇ ಆದ ಅದ್ಭುತ ಶಕ್ತಿಯಿದೆ ಎಂದು ಅವರು ಅಭಿಪ್ರಾಯಪಟ್ಟರು. ಯೋಗದ ಜೊತೆಗೆ ಉತ್ತಮ ಆಹಾರ ಕ್ರಮ ಕೂಡ ಆರೋಗ್ಯ ಕಾಪಾಡವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕರಾದ ಎನ್.ಆರ್. ಠಕ್ಕಾಯಿ ಮಾತನಾಡಿ ಯೋಗ, ಧ್ಯಾನ, ಮೌನಗಳಿಂದ ದೇಹ ಹಾಗೂ ಮನಸ್ಸನ್ನು ಸದೃಢವಾಗಿಸಬಹುದು ಎಂದರು. ಯೋಗ ಸಾಧನೆಗೆ ಸತತ ಪರಿಶ್ರಮ, ನಿರಂತರ ಪ್ರಯತ್ನ ಹಾಗೂ ತಾಳ್ಮೆ ಬಹಳ ಮುಖ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ವಿದ್ಯಾರ್ಥಿಗಳಿಗೆ ಪ್ರಾಣಾಯಾಮ, ಒಂಕಾರ, ಯೋಗಮಂತ್ರ, ಸೂರ್ಯ ನಮಸ್ಕಾರ, ವಜ್ರಾಸನ, ಚಕ್ರಾಸನ ಮುಂತಾದ ಯೋಗಾಸನಗಳನ್ನು ಹೇಳಿಕೊಡುತ್ತ ವಿಶ್ವಯೋಗ ದಿನದ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಟ್ಟರು.

 

ದೊಡವಾಡ ಗ್ರಾಮದ ಯೋಗಪಟುಗಳಾದ ತನುಶ್ರೀ ಸಂಗೊಳ್ಳಿ, ಲಕ್ಷ್ಮೀ ಕುಡವಕ್ಕಲಗಿ, ವೈಷ್ಣವಿ ನಾನನ್ನವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶಿಷ್ಟ ಶೈಲಿಯಲ್ಲಿ ಯೋಗಾಸನಗಳನ್ನು ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ತಾಲೂಕಾ ಪಂಚಾಯತಿ ಮಾಜಿ ಸದಸ್ಯ ಜನಕರಾಜ ಪಾಟೀಲ, ಪ್ರದಾನ ಗುರುಗಳಾದ ಎಂ.ಜಿ. ಚರಂತಿಮಠ, ಶಿಕ್ಷಕರಾದ ಜಗದೀಶ ನರಿ, ಶಿವಾನಂದ ಬಳಿಗಾರ, ಶ್ರೀಪಾಲ ಚೌಗಲಾ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ವಿರೇಂದ್ರ ಪಾಟೀಲ, ಮೂಗಬಸಪ್ಪ ಹೊಂಗಲ, ದುಂಡಪ್ಪ ಕೆಂಪೂರ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಶ್ವರ್ಯ ಕುಲಕರ್ಣಿ ಸ್ವಾಗತಿಸಿದರು. ಚೈತ್ರಾ ಸೊಗಲದ ನಿರೂಪಿಸಿದರು. ಶಿಕ್ಷಕರಾದ ಸುನೀಲ ಭಜಂತ್ರಿ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!