Saturday, July 27, 2024

ಹೊಸತನದ ಹುಡುಕಾಟದಲ್ಲಿ ಕವಿ ಮನಸ್ಸು ಸದಾ ಜಾಗೃತವಾಗಿರಬೇಕು–  ಈರಯ್ಯ ಕಿಲ್ಲೇದಾರ

ಬೈಲಹೊಂಗಲ: ಕವಿತೆ ಯಾವಾಗಲೂ ಓದುಗರ ಹೃದಯ ಅರಳಿಸಬೇಕು. ಹೊಸತನದ ಹುಡುಕಾಟದಲ್ಲಿ ಕವಿ ಮನಸ್ಸು ಸದಾ ಜಾಗೃತವಾಗಿರಬೇಕು ಎಂದು ಗುಡಿಕಟ್ಟಿಯ ಸಾಹಿತಿ ಈರಯ್ಯ ಕಿಲ್ಲೇದಾರ ‘ಈನಿಂಕಿ’ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು, ಬೈಲಹೊಂಗಲ ತಾಲೂಕು ಘಟಕ ಹಾಗೂ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದಲ್ಲಿ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ರವಿವಾರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕವನ ಏಕೆ ಬರೆಯುತ್ತಿದ್ದೇನೆ ಎಂಬ ಅರಿವು ಕವಿಗೆ ಇರಬೇಕು. ಕನ್ನಡ ಕಾವ್ಯ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಉದಯೋನ್ಮುಖ ಕವಿಗಳು ತಮ್ಮ ಕಾವ್ಯ ಕೃಷಿ ನಡೆಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಆಶಯ ನುಡಿಗಳನ್ನಾಡಿದ ಸವದತ್ತಿಯ ಕವಿ, ವಿಮರ್ಶಕರಾದ ನಾಗೇಶ ಜೆ. ನಾಯಕ ಅವರು ಕವಿತೆ ಕಟ್ಟಕಡೆಯ ಸಾಮಾನ್ಯ ಓದುಗನಿಗೆ ತಲುಪಿದಾಗ ಕವಿಯ ಅಶಯ ಸಾರ್ಥಕವಾದಂತೆ ಎಂದು ಹೇಳಿದರು. ಅರಮನೆಯ ಮೆತ್ತನೆಯ ಹಾಸಿಗೆಯಲ್ಲಿ ಹುಟ್ಟಿದ ಕವಿತೆಗಿಂತ ಗುಡಿಸಲಿನಲ್ಲಿ ಜನಿಸಿದ ಕವನ ಹೆಚ್ಚು ಕಾಲ ಬದುಕಬಲ್ಲದು ಎಂದರು. ಕವಿತೆ ಓದುಗರನ್ನು ಕಾಡಬೇಕು, ಕವಿ ತನ್ನ ಕಾವ್ಯವನ್ನು ಸ್ವ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ಕವಿಗಳಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬೈಲಹೊಂಗಲದ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ. ಅಶೋಕ ಎಂ. ದೊಡವಾಡ ಮಾತನಾಡಿ ಧಾವಂತದ ಬದುಕಿನಲ್ಲಿ ಓದಿನಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು. ಖ್ಯಾತ ಆಕಾಶವಾಣಿ-ದೂರದರ್ಶನ ಕಲಾವಿದರಾದ ಸಿ.ಕೆ ಮೆಕ್ಕೇದ ಮಾತನಾಡಿ ಕವಿ ತನ್ನ ಅನುಭವಗಳಿಂದ ಉತ್ತಮ ಕವಿತೆಗಳನ್ನು ರಚಿಸಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡಬೇಕು ಎಂದರು.

ಕವಿಗಳಿಗೆ ಗೌರವ ಸನ್ಮಾನ ಮಾಡಿದ ಭಾವಚಿತ್ರ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಉತ್ತಮ ರೀತಿಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಿ ನಾಡಿನ ಬೇರೆ ಬೇರೆ ಕಡೆಗಳಿಂದ ಕವಿಗಳನ್ನು ಒಂದೆಡೆ ಸೇರಿಸಿದ್ದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾ ಅಧ್ಯಕ್ಷ ಎನ್.ಆರ್. ಠಕ್ಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ ಕವಿತೆ ಮೊದಲು ಕವಿಯ ಮನಸ್ಸನ್ನು ಅರಳಿಸಿ ವ್ಯಕ್ತಿತ್ವವನ್ನು ವಿಕಸಿತಗೊಳಿಸಬೇಕು ಎಂದು ಹೇಳಿದರು. ಅರ್ಥಗರ್ಭಿತ ಪದಗಳೊಂದಿಗೆ ವಿನೂತನ ಶೈಲಿಯಲ್ಲಿ ಭಾಷೆಯನ್ನು ಬಳಸುವ ಹಾಗೂ ಭಾವವನ್ನು ಸದಾ ಜೀವಂತವಾಗಿರಿಸುವ ಜಾಣ್ಮೆ ಕವಿಗೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ಡಾ. ಫಕೀರನಾಯ್ಕ ಗಡ್ಡಿಗೌಡರ, ಮೀನಾಕ್ಷಿ ಸೂಡಿ, ಎಸ್.ಬಿ. ಜಹಾಗೀರದಾರ, ಸಿದ್ದಪ್ಪ ಗೊಡಚಿ, ಶಿವಾನಂದ ಬೇವಿನಕೊಪ್ಪ, ಸ್ನೇಹಾ ವೆಂಕಣ್ಣವರ, ಶಿವಾನಂದ ಪಟ್ಟಿಹಾಳ, ಡಾ. ಮಲ್ಲಿಕಾರ್ಜುನ ಛಬ್ಬಿ, ಅಣ್ಣಯ್ಯಸ್ವಾಮಿ ಸಂಬಾಳಿಮಠ, ಸಿದ್ದು ನೇಸರಗಿ, ಕಿರಣ ಗಣಾಚಾರಿ, ಸದಾಶಿವ ಭಜಂತ್ರಿ, ಉಮಾ ಅಂಗಡಿ, ಶ್ರೀಶೈಲ ಹೆಬ್ಬಳ್ಳಿ, ರಾಧಿಕಾ ಮಾದಾರ, ಎಂ.ಆರ್.ಪಾಟೀಲ, ಡಾ. ಸುನೀಲ ಪರೀಟ, ಗೋದಾವರಿ ಪಾಟೀಲ, ಆನಂದ ಹಕ್ಕೆನ್ನವರ, ಸಂಗೀತಾ ಲಚ್ಚಪ್ಪನವರ, ವಸುಧಾ ಕಾಮತ, ಬಿ.ಬಿ.ಇಟ್ಟನ್ನವರ, ಬಿ.ವಿ.ಪತ್ತಾರ, ವಿರುಪಾಕ್ಷ ಕಮತೆ, ಉಮೇಶ ತಿಗಡಿ, ಸೌಮ್ಯ ಕೋಟಗಿ, ಅವಿನಾಶ ಸೆರೆಮನಿ, ಚಿದಾನಂದ ಭಜಂತ್ರಿ, ಈರಣ್ಣ ಗೋದಳ್ಳಿ, ಅರ್ಪಿತಾ ಹೂಗಾರ, ತಿಪ್ಪಣ್ಣ ಶಹಾಪೂರ, ನಾಗರಾಜ ಹಂಪಸಾಗರ, ಮಹಾಂತೇಶ ಹೊಂಗಲ, ಸಂಗಮೇಶ ಭಸ್ಮ, ತನುಜಾ ಬಡಿಗೇರ, ಡಾ. ಶಿವಕುಮಾರ ಸೂರ್ಯವಂಶ, ಸಾಕ್ಷಿ ಹಿರೇಮಠ, ಮಾರುತಿ ದೇಸಾಯಿ, ಜಾನಕಿ ಭದ್ರಣ್ಣವರ, ಸದ್ದಾಂ ತಗ್ಗಹಳ್ಳಿ, ಸವಿತಾ ಪಾಟೀಲ, ಸಂಗಮೇಶ ಕುಲಕರ್ಣಿ, ಎಚ್.ಎಂ. ಅರವಟ್ಟಿಮಠ, ಸರಸ್ವತಿ ಬನ್ನಿಗಿಡದ, ಸಣಗೌಡ ಸಂಗನಗೌಡರ, ಲಲಿತಾ ಸಾಲಿಮಠ ಕವನ ವಾಚಿಸಿದರು.

ಕಾರ್ಯಕ್ರಮದಲ್ಲಿ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನವಜಾತ ಶಿಶು ಹಾಗೂ ಚಿಕ್ಕಮಕ್ಕಳ ತಜ್ಞರಾದ ಡಾ. ಶರಣಕುಮಾರ ಬಿ. ಅಂಗಡಿ, ಬೈಲಹೊಂಗಲ ಕಸಾಪ ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೇಮಾ ಅಂಗಡಿ, ಶಶಿಕಲಾ ಯಲಿಗಾರ, ಅನಿಲಕುಮಾರ ರಾಜಣ್ಣವರ, ಶ್ರೀಕಾಂತ ಉಳ್ಳೇಗಡ್ಡಿ, ಸಂತೋಷ ಹಡಪದ, ಲಕ್ಷ್ಮೀ ಮುಗಡ್ಲಿಮಠ, ದುಂಡಪ್ಪ ಗರಗದ, ಸಂತೋಷ ಪಾಟೀಲ ಉಪಸ್ಥಿತರಿದ್ದರು. ಕವಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಮಾರ ಕಡೇಮನಿ ಕನ್ನಡ ಗೀತೆಗಳನ್ನು ಹಾಡಿದರು. ಎನ್.ಆರ್ ಠಕ್ಕಾಯಿ ಸ್ವಾಗತಿಸಿದರು. ಶೈಲಜಾ ಭಟ್ಟ ಪ್ರಾರ್ಥಿಸಿದರು. ರಾಜು ಹಕ್ಕಿ ನಿರೂಪಿಸಿ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!