Friday, July 26, 2024

ಬೆಳಗಾವಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹಡಪದ ಸಮಾಜ ಸಂಘಟನೆಯ ಸಭೆ ಜರುಗಿತು.

ರಾಮದುರ್ಗ ಸುದ್ದಿ: ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ  ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ,ರಾಮದುರ್ಗ ತಾಲ್ಲೂಕು ಹಾಗೂ ಸಾಲಹಳ್ಳಿ ಹೂಬಳಿ ಘಟಕದ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹಡಪದ ಸಮಾಜ ಸಂಘಟನೆಯ ಸಭೆ ಜರುಗಿತು.

ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ  ಮಾತನಾಡಿ 12 ಶತಮಾನದಲ್ಲಿ ಬಸವಣ್ಣನವರ ಆಪ್ತ ಸಲಹೆಗಾರರಾಗಿದ್ದ ನಿಜಸುಖಿ ಹಡಪದ ಅಪ್ಪಣ್ಣ, ತಾಯಿ ಲಿಂಗಮ್ಮನ್ನವರ ಕೊಡುಗೆ ಈ ನಾಡಿಗೆ ಅಪಾರವಾಗಿದೆ,ಸಂಘಟನೆಯಿಂದ ಮಾತ್ರ ನಮ್ಮ ಸಮಾಜದ ಅಭಿವೃದ್ಧಿ ಸಾದ್ಯ ಪ್ರತಿಯೊಬ್ಬರು ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕು ಅಂದಾಗ ಮಾತ್ರ ಸಮಾಜ ಉನ್ನತಿಯತ್ತ ಸಾಗುತ್ತದೆ,ಸರಕಾರ ಹಲುವಾರು ಸ್ವತ್ತುಗಳನ್ನು ನೀಡುತ್ತಿದೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿವುದರ ಮೂಲಕ ಸಮಾಜದ ಭಾಂದವರಿಗೆ ಮನವರಿಕೆ ಮಾಡಿದರು,

ಜಿಲ್ಲಾಧ್ಯಕ್ಷ  ಸುರೇಶ್ ಹಡಪದ ಮಾತನಾಡಿ ನಮ್ಮ ಸಮಾಜ ತೀರ ಹಿಂದುಳಿದ ಸಮಾಜ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ,ಮನ ಮನೆಗಳಲ್ಲಿ ಹಡಪದ ಅಪ್ಪಣ್ಣನ್ನವರ ವಿಚಾರಧಾರೆಯನ್ನು ತಿಳಿಸಬೇಕಾಗಿದೆ ಅಲ್ಲದೆ ಗ್ರಾಮ ಮಟ್ಟದಿಂದ ಸಂಘಟನೆ ಮಾಡಿದಾಗ ಮಾತ್ರ ನಾವೆಲ್ಲರೂ ಒಂದಾಗಲೂ ಸಾದ್ಯ ಎಂದು ಹೇಳಿದರು, ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಕಾರ್ಯಧ್ಯಕ್ಷ ಬಸವರಾಜ ಹಡಪದ ಮಾತನಾಡಿ ಇಂದಿನ ನಮ್ಮ ಯುವ ಪೀಳಿಗೆ ಹಡಪದ ಅಪ್ಪಣ್ಣನವರ ವಚನಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮವಾದ ಜೀವನವನ್ನು ನಡೆಸಬೇಕೆಂದು ತಿಳಿಸಿದರು ಈ ಒಂದು ಸಂಘಟನಾ ಸಭೆಯಲ್ಲಿ ಶ್ರೀ ಅಡವಿಸಿದ್ದೇಶ್ವರ ದೇವಸ್ಥಾನದ ಅಧ್ಯಕ್ಷರು ಶ್ರೀ ಸೋಮನಿಂಗ ಯಾದವಾಡ,ಶಿವಪ್ಪಾ ಪಟಾತ, ನಾಗಯ್ಯ ಮದ್ದಾನಿಮಠ ಇವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು ,ರಾಮದುರ್ಗ ತಾಲ್ಲೂಕಾಧ್ಯಕ್ಷರು ಶ್ರೀ ಬಸ್ಸಪ್ಪ ಹಡಪದ,ಸಾಲಹಳ್ಳಿ ಗ್ರಾಮದ ಅಧ್ಯಕ್ಷರು ಶ್ರೀ ಸಿದ್ದು ನಾವಿ ಜಿಲ್ಲಾ ಉಪಾಧ್ಯಕ್ಷರು ಆನಂದ ಕುರ್ಲಿ,ಶಿವಾನಂದ ಹುನ್ನೂರ,ಮಲ್ಲೇಶ ನಾವಿ,ಸುರೇಶ್,ರಾಜು ನಾವಿ ಮಾದಲಭಾವಿ, ಶಿಬೋದ ಉದಗಟ್ಟಿ,ಪ್ರಧಾನ ಕಾರ್ಯದರ್ಶಿ ನಾಗಪ್ಪ ಹಡಪದ ,ಮಹಾಂತೇಶ ಹಂಪಣ್ಣವರ,ಶಿವಬಸ್ಸು ಸುನದೋಳಿ,ಸಂಘಪ್ಪ ಹಡಪದ,ಬಸವರಾಜ ಹಡಪದ ಹಾಗೂ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು ಸಾತಗೌಡ ನಾವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು,ಆನಂದ ಹಂಪಣ್ಣವರ ನಿರೂಪಿಸಿದರು.

ಜಿಲ್ಲೆ

ರಾಜ್ಯ

error: Content is protected !!