Tuesday, May 28, 2024

ಕನ್ನಡ ಸಾಹಿತ್ಯ ಬೆಳೆಯಬೇಕಾದರೆ ಓದುವ ಹವ್ಯಾಸವನ್ನು ಬೆಳಸಬೇಕು” ; ಬಸವರಾಜ ಬಿದರಿ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರ: ಕನ್ನಡ ಸಾಹಿತ್ಯವನ್ನು ಬೆಳಸಬೇಕಾದರೆ ಪ್ರಮುಖವಾಗಿ ನಾವು ಪುಸ್ತಕ ಹಾಗೂ ಗ್ರಂಥಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಮಾತ್ರ ನಮ್ಮ ಸಾಹಿತ್ಯ ವೃದ್ಧಿಗೊಳ್ಳಲು ಸಾಧ್ಯವೆಂದು ಹಿರೇನಂದಿಹಳ್ಳಿ ಸರಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಬಸವರಾಜ ಬಿದರಿ ಕರೆನೀಡಿದರು.

ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇಯ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಮುಖ್ಯಾಧ್ಯಾಪಕ ಬಸವರಾಜ ಬಿದರಿ, ಕನ್ನಡ ನಾಡು, ನುಡಿ, ಸಾಹಿತ್ಯ ಬೆಳವಣಿಗೆಗಾಗಿ ಕನ್ನಡ ನಾಡಿ ಅನೇಕ ಜನ ಹಿರಿಯ ಸಾಹಿತಿಗಳು ಸಾಕಷ್ಟು ಸಾಹಿತ್ಯವನ್ನು ರಚಿಸಿದ್ದಾರೆ. ಆದರೆ ಅವುಗಳನ್ನು ಓದುವವರ ಸಂಖ್ಯೆ ಗಣನಿಯವಾಗಿ ಕ್ಷಿಣಿಸುತ್ತೀದ್ದು ಸಾಹಿತ್ಯವನ್ನು ರಚಿಸುವುದು ಮುಖ್ಯವಲ್ಲ ಆದರೆ ಆ ಸಾಹಿತ್ಯವನ್ನು ಓದಿ ಅದನ್ನು ಅರ್ಥೈಸಿಕೊಂಡು ಇನ್ನೂ ಉತ್ತಮವಾದ ಸಾಹಿತ್ಯವನ್ನು ರಚಿಸಲು ಸಾಧ್ಯ. ಆದ್ದರಿಂದ ನಾವು ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೇಳಸಿಕೊಳ್ಳಬೇಕು ಎಂದು ಹೇಳಿದರು.

ಇನ್ನೋರ್ವ ಉಪನ್ಯಾಸಕರಾದ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಕಾರ್ಯದರ್ಶಿಗಳು ಹಾಗೂ ಬೈಲೂರ ಪ್ರೌಢ ಶಾಲೆ ಸಹಶಿಕ್ಷಕರಾದ ಮಂಜುನಾಥ ಕಳಸಣ್ಣವರ, ಕನ್ನಡ ಸಾಹಿತ್ಯ ವಿಶಾಲವಾಗಿದ್ದು ಅದರಲ್ಲಿ ಇನ್ನೂ ಅನೇಕ ಹೊಸ ಹೊಸ ಸಾಹಿತ್ಯ ರಚನೆಗೊಳ್ಳಬೇಕಾಗಿದೆ. ಕನ್ನಡದ ಉಳುವಿಗಾಗಿ ಕನ್ನಡ ನಾಡಿನ ಧೀಮಂತ ಸಾಹಿತಿಗಳೂ ಒಗ್ಗೂಡಿ ರಚಿಸಿದ ಈ ಕನ್ನಡ ಸಾಹಿತ್ಯ ಪರಿಷತ್ತು ಇಂದು ವಿಶ್ವಾಧ್ಯಂತ ತಮ್ಮ ಘಟಕಗಳನ್ನು ಸ್ಥಾಪಿಸಿ ವಿಶ್ವಾಧ್ಯಂತ ಕನ್ನಡ ಕಂಪನ್ನು ಬೀರುತ್ತೀದೆ ಎಂದು ಹೇಳಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಕಿತ್ತೂರ ತಾಲೂಕ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್.ಟಿ.ಬಳಿಗಾರ, ಶಾಲೆಗಳಲ್ಲಿ ವಿವಿಧಿ ಬಗೆಯ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಓದಬೇಕು ಎಂಬ ಜಿಜ್ಞಾಸೆ ಹುಟ್ಟುತ್ತದೆ ಇದರಿಂದ ವಿದ್ಯಾರ್ಥಿಗಳು ಓದುವ ಹಾಗೂ ಬರೆಯುವ ಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಾಗುತ್ತದೆ ಹಾಗೂ ಅವರ ಜ್ಞಾಪಕಶಕ್ತಿ ವೃದ್ಧಿಯಾಗಲು ಸಹಕಾರಿಯಾಗಲಿದೆ. ತಾಲೂಕಿನಾಧ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಇರುವ ಆಸಕ್ತಿ ಹಾಗೂ ಸಾಹಿತ್ಯದ ಒಲವನ್ನು ತೋರಿಸುತ್ತದೆ ಎಂದರು.

ಆಶಯ ನುಡಿಗಳನ್ನಾಡಿದ ಕಸಾಪ ಕಿತ್ತೂರ ತಾಲೂಕ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಶೇಖರ ಹಲಸಗಿ, ಕಸಾಪ ಗೆ ಇಂದು ೧೦೮ನೇ ಸಂಸ್ಥಾಪನಾ ವರ್ಷವಾಗಿದ್ದು ಕನ್ನಡದ ರಕ್ಷಣಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಾ ಕೇವಲ ಬೆರಳೇಣಿಕೆ ವ್ಯಕ್ತಿಗಳಿಂದ ಆರಂಭಗೊAಡ ಸಂಸ್ಥೆ ಇಂದು ವಿಶ್ವಾಧ್ಯಂತ ತನ್ನ ಘಟಕಗಳನ್ನು ಹೊಂದಿದ್ದು. ವಿಶ್ವಾಧ್ಯಂತ ಪಸರಿಸಿರುವ ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತೀದ್ದು ಇಂದು ಸುಮಾರು ಮೂರು ಲಕ್ಷಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದೆ. ಕನ್ನಡದ ಸಾಹಿತ್ಯದ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಸದಾಕಾರ್ಯಪ್ರವೃತ್ತವಾಗಿದೆ ಎಂದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಮಾರಿ ಸಾಕ್ಷಿ ಕಲಭಾಂವಿ ಹಾಗೂ ಕುಮಾರ ರಾಕೇಶ ನಡುವಿ ಕನ್ನಡ ಸಾಹಿತ್ಯ ಹಾಗೂ ಮಾತೃ ಭಾಷೆಯ ಕುರಿತು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇಯ ಸಂಸ್ಥಾಪನಾ ದಿನಾಚರಣೆಯನ್ನು ತಾಯಿ ಭುವನೇಶ್ವರಿ ದೇವಿಗೆ ಪೂಜೆಸಲ್ಲಿಸಿ, ವಿದ್ಯಾರ್ಥಿಗಳ ಕೈಯಿಂದ ಸಸಿಗೆ ನೀರೆರೆಯುವ ಮೂಲಕ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್.ಟಿ.ಬಳಿಗಾರ, ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ಎಸ್.ಬಿ.ದಳವಾಯಿ, ನಿಕಟಪೂರ್ವ ಅಧ್ಯಕ್ಷ ಡಾ. ಶೇಖರ ಹಲಸಗಿ, ಗೌರವ ಕಾರ್ಯದರ್ಶಿ ವ್ಹಿ.ಎಸ್.ನಂದೀಹಳ್ಳಿ ಉದ್ಘಾಟಿಸಿದರು. ನಂತರ ತಾಲೂಕಿನಾಧ್ಯಂತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ” ಕುರಿತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ ಪ್ರೌಢ ಶಾಲಾ ವಿಭಾಗದಲ್ಲಿ ಕುಮಾರಿ ಸಾಕ್ಷಿ ಕಲಭಾಂವಿ ಪ್ರಥಮ, ಸಂಗೀತಾ ಪಾಟೀಲ ದ್ವಿತೀಯ, ರಚನಾ ಪೂಜೇರಿ ತೃತೀಯ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುಮಾರ ರಾಕೇಶ ನಡುವಿ ಪ್ರಥಮ, ಕುಮಾರಿ ಚಿನ್ನು ಬಿದರಿ ದ್ವಿತೀಯ, ಕುಮಾರ ರವೀಶ ಪೂಜೇರ ತೃತೀಯ ಸ್ಥಾನವನ್ನು ಪಡೆದರು. ವಿಶೇಷವೆಂದರು ರಸಪ್ರಶ್ನೆಯಲ್ಲಿ ಸುಮಾರು ೨೫ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನುಗಳಿಸಿದ್ದರು. ಎಲ್ಲರಿಗೂ ಪುಸಕ್ತವನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಲಾಯಿತು.

ಕಿನಾವಿವ ಸಂಘದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಕೆ.ಭೂಮನಗೌಡರ, ಹಿರಿಯ ಉಪನ್ಯಾಸಕರಾದ ಜಿ.ಎಸ್.ಪ್ರಭಯ್ಯನವರಮಠ, ಡಾ. ಕೆ.ಆರ್.ಮೆಳವಂಕಿ, ರವಿ ಹವಿನಾಳೆ, ಪ್ರೌಢ ಶಾಲೆಗಳ ಶಿಕ್ಷಕಿಯರಾದ ಪ್ರಭಾವತಿ ಲದ್ದಿಮಠ, ಮೀನಾಕ್ಷಿ ಸೂಡಿ, ಪ್ರಾಚ್ಯವಸ್ತು ಸಂಗ್ರಹಾಲಯದ ಕ್ಯೂರೇಟರ್ ರಾಘವೇಂದ್ರ, ಶಿವಮೂರ್ತಿ ಕುರಗುಂದ, ದಾನೇಶ್ವರ ಸಾಣಿಕೊಪ್ಪ, ಶ್ರೀ ಹನಮಸಾಗರ, ನಾಗಯ್ಯ ಹುಲೆಪ್ಪನವರಮಠ, ಎನ್.ಜಿ.ಪಾಟೀಲ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಭಾವತಿ ಲದ್ದಿಮಠ, ಮೀನಾಕ್ಷಿ ಸೂಡಿ ನಾಡಗೀತೆಯನ್ನು ಹೇಳಿದರು, ತಾಲೂಕು ಕಸಾಪ ಅಧ್ಯಕ್ಷ ಡಾ. ಎಸ್.ಬಿ.ದಳವಾಯಿ ಸ್ವಾಗತಿಸಿದರು, ರಮೇಶ ಶಹಾಪೂರ ವಂದಿಸಿದರು, ತಾಲೂಕ ಕಸಾಪ ಗೌರವ ಕಾರ್ಯದರ್ಶಿ ವ್ಹಿ.ಎಸ್.ನಂದಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

 

ಪೋಟೊ: ೧. ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇಯ ಸಂಸ್ಥಾಪನಾ ದಿನಾಚರಣೆಯನ್ನು ವಿದ್ಯಾರ್ಥಿಗಳ ಕೈಯಿಂದ ಸಸಿಗೆ ನೀರೆರೆಯುವ ಮೂಲಕ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್.ಟಿ.ಬಳಿಗಾರ, ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ಎಸ್.ಬಿ.ದಳವಾಯಿ, ನಿಕಟಪೂರ್ವ ಅಧ್ಯಕ್ಷ ಡಾ. ಶೇಖರ ಹಲಸಗಿ, ಗೌರವ ಕಾರ್ಯದರ್ಶಿ ವ್ಹಿ.ಎಸ್.ನಂದೀಹಳ್ಳಿ ಉದ್ಘಾಟಿಸಿದರು. ಡಾ.ಕೆ.ಆರ್.ಮೆಳವಂಕಿ, ಪಿ.ಬಿ.ಹೊನ್ನಪ್ಪನವರ, ಎನ್.ಜಿ.ಪಾಟೀಲ ಇತರರು ಚಿತ್ರದಲ್ಲಿದ್ದಾರೆ.

೨. ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇಯ ಸಂಸ್ಥಾಪನಾ ದಿನಾಚರಣೆಯನ್ನು ಅಂಗವಾಗಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆರ್.ಟಿ.ಬಳಿಗಾರ, ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ಎಸ್.ಬಿ.ದಳವಾಯಿ, ನಿಕಟಪೂರ್ವ ಅಧ್ಯಕ್ಷ ಡಾ. ಶೇಖರ ಹಲಸಗಿ, ಗೌರವ ಕಾರ್ಯದರ್ಶಿ ವ್ಹಿ.ಎಸ್.ನಂದೀಹಳ್ಳಿ ವಿತರಿಸಿದರು.

ಜಿಲ್ಲೆ

ರಾಜ್ಯ

error: Content is protected !!