Friday, September 20, 2024

ಮುಖ್ಯಮಂತ್ರಿಗಳ ನೀರಾವರಿ ಕಳಕಳಿ ಅಭಿನಂದನೀಯ: ಸಂಗಮೇಶ ನಿರಾಣಿ.

ಸುದ್ದಿ ಸದ್ದು ನ್ಯೂಸ್

ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ         ಅವರು ಚಾಲನೆ: ಉತ್ತರ ಕರ್ನಾಟಕ ನೀರಾವರಿ ಸಮೀತಿ ಸ್ವಾಗತ.

ಬಾಗಲಕೋಟ: ಬಾಗಲಕೋಟ ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಕೆರೂರ, ಮಂಟೂರ ಹಾಗೂ ಸಸಾಲಟ್ಟಿ ಯೋಜನೆಗೆ ಭೂಮಿಪೂಜೆ ಮಾಡಿದ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನತೆ ವತಿಯಿಂದ ಅಭಿನಂದನೆಗಳು ಎಂದು ಉತ್ತರ ರ‍್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ ಅಧ್ಯಕ್ಷ ಸಂಗಮೇಶ ಆರ್. ನಿರಾಣಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ತಿಳಿಸಿರುವ ಅವರು ಈ ಮೂರು ಮಹತ್ವಾಕಾಂಕ್ಷೆಯ ಯೋಜನೆಗಳ ಮೂಲಕ ಬಾದಾಮಿ, ಬೀಳಗಿ, ಮುಧೋಳ ತಾಲೂಕಿನ ರೈತರಿಗೆ ಬಹುದೊಡ್ಡ ಅನುಕೂಲವಾಗುತ್ತದೆ. ಅಲ್ಲದೇ ಕೆರೆ ತುಂಬುವ ಮೂಲಕ ಮೂಲಕ ಅಂತರ್ಜಲ ಸಮೃದ್ದವಾಗಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಜಿ.ಆರ್.ಬಿ.ಸಿ.ಅಚ್ಚುಕಟ್ಟು ಪ್ರದೇಶದ ನೀರಾವರಿ ವಂಚಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಅನವಾಲ ಲಿಫ್ಟ್ ಇರಿಗೇಶನ್ ಹಾಗೂ ಬಜೇಟ್ ನಲ್ಲಿ ಘೋಷಿಸಿದ ಕಾಳಿ ನದಿ ಜೋಡಣೆಯನ್ನು ಆದಷ್ಟು ಬೇಗ ಮುಖ್ಯಮಂತ್ರಿಗಳು ಕಾರ್ಯರೂಪಕ್ಕೆ ತರಬೇಕು ಆದಷ್ಟು ಬೇಗ ಕಾರ್ಯರೂಪಕ್ಕೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಸಂಗಮೇಶ ನಿರಾಣಿ ತಿಳಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!