Saturday, July 27, 2024

 ಅಂಬೇಡ್ಕರ್ ತತ್ವ ಆದರ್ಶಗಳನ್ನ ಮೈಗೂಡಿಸಿಕೊಂಡು ಸ್ವಾಭಿಮಾನದಿಂದ ಬದುಕಿ: ಶಾಸಕ ನಿಂಬಣ್ಣವರ

ಕಲಘಟಗಿ : ಬಾಬ ಸಾಹೇಬ ಅಂಬೇಡ್ಕರ್ ಆದರ್ಶ ತತ್ವಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಅವರ ದಾರಿಯಲ್ಲಿ ಮುನ್ನಡೆಯಬೇಕೇಂದು ಶಾಸಕ ಸಿಎಂ ನಿಂಬಣ್ಣವರ ಹೇಳಿದರು

ಅವರು ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ತಾಲೂಕ ಆಡಳಿತ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಡಾ ಬಿ ಆರ್ ಅಂಬೇಡ್ಕರ್ ಅವರ 131 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದಿನ ದಲಿತರ ಆಶಾ ಕಿರಣ ದಲಿತರು ಹಿಂದುಳಿದವರು ತುಳಿತಕ್ಕೆ ಒಳಗಾದವರ ದ್ವನಿಯಾಗಿ ಅಂಬೇಡ್ಕರ್ ಹೋರಾಟ ಮಾಡಿದ್ದಾರೆ ಶಿಕ್ಷಣ ಸಂಘಟನೆ ಹೋರಾಟ ದ ಮೂಲಕ ಬಂದವರು ಜ್ಞಾನಕ್ಕೆ ಕೊನೆಯಿಲ್ಲ ಸ್ವತಂತ್ರ ಭಾರತದ ಮೊದಲ ಕಾನೂನ ಮಂತ್ರಿ ಸಂವಿಧಾನದ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು

ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕಬೇಕು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಶಿಕ್ಷಣವಂತರನ್ನಾಗಿ ಮಾಡಿದರುಪಟ್ಟಣದಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಸ್ಥಾಪನೆ ಮಾಡುವ ಬಗ್ಗೆ ಅಧಿಕಾಗಳ ಜೊತೆ ಚರ್ಚಿಸುವುದಾಗಿ ಹೇಳಿದರು ಈಗ ಆಗಲೇ ತಾಲೂಕಿನಲ್ಲಿ 4 ಅಂಬೇಡ್ಕರ್ ಭವನಗಳು ನಿರ್ಮಾಣ ಹಂತದಲ್ಲಿವೆ ಎಂದರು.

ತಾಲೂಕ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ ಜಗತ್ತಿಗೆ ಸಂವಿಧಾನದ ಕೂಡುಗೆ ನೀಡಿದ್ದಾರೆ ಜಗತ್ತಿನ ಅತಿ ಹೆಚ್ಚು ಪುಸ್ತಕಗಳನ್ನು ಓದಿದವರು 60 ಪದವಿಗಳನ್ನ ಪಡೆದವರು ಭಾರತ ದೇಶಕ್ಕೆ ಸಂವಿಧಾನ ಗ್ರಂಥ ನೀಡಿದ್ದಾರೆ .

ಸಮಾಜದಲ್ಲಿ ನಮ್ಮ ಹಕ್ಕುಗಳ ಬಗ್ಗೆ ದ್ವನಿ ಎತ್ತಬೇಕು ಶಿಕ್ಷಣ ಸಂಘಟನೆ ಹೋರಾಟ ಮನೋಭಾವನೆಯನ್ನು ಬೆಳೆಸಿಕೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಸಮಾಜ ವ್ಯಕ್ತಿ ಪೂಜೆ ಕಡೆ ನಡೆದಿರುವುದು ನೋವಿನ ಸಂಗತಿ ಮೂಢನಂಬಿಕೆ ಹೋಗಲಾಡಿಸಬೇಕು ಸಮಾಜವನ್ನು ತಿದ್ದುವ ಕೆಲಸ ಆಗಬೇಕಿದೆ ಎಂದರು.

ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಮಲ್ಲಿಕಾರ್ಜುನ ಪುರದನಗೌಡರ ಇಂದಿನ ಯುವ ಜನತೆ ದುಶ್ಚಟಗಳಿಗೆ ದಾಸರಾಗಿ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಅಂಬೇಡ್ಕರ್ ತತ್ವ ಸಿದ್ಧಾಂತ ಗಳನ್ನ ಅಳವಡಿಸಿಕೊಂಡು ಜೀವನ ನಡಿಸಬೇಕಿದೆ ಎಂದರು ಎಸ್ ಎಸ್ ಎಲ್ ಸಿ, ಹಾಗೂ ಪಿಯುಸಿಯಲ್ಲಿ, ಹೆಚ್ಚಾಗಿ ಅಂಕ ಪರಿಶಿಷ್ಟ ಜಾತಿ ಪಂಗಡದ ಮತ್ತು ಇತರೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು

ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯಕ ನಿರ್ದೇಶಕರಾದ ಎ ಜೆ ಯೋಗಪ್ಪನವರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಪುತ್ರ ಮಠಪತಿ ಪಪಂ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ ಸಿಪಿಐ ಪ್ರಭು ಸೂರಿನ ಬಸವರಾಜ ಕಟ್ಟೀಮನಿ ಪಕ್ಕೀರಗೌಡ ದೊಡ್ಡಮನಿ ರಮೇಶ ಸೋಲಾರಗೋಪ್ಪ ಚಂದ್ರು ನಡುವಿನಮನಿ ಶರೀಪ ಹರಿಜನ ಶಶಿಕುಮಾರ್ ಕಟ್ಟಿಮನಿ ಬಸವರಾಜ ಮಾದರ ಯಲ್ಲಪ್ಪ ಹುಲಮನಿ ಮಂಜುನಾಥ ಮಾದರ ಅಜಾದ ಮಲ್ಲಿಕನವರ ಯಲ್ಲಪ್ಪ ಮೇಲಿನಮನಿ ಹಮಮಂತ ಹರಿಜನ ಶಿವಾಜಿ ವಡ್ಡರ ಮಂಜು ದೀಪಸಾಗರ ಗಣಪತಿ ಮೋತೆನವರ ಪುಟ್ಟಪ್ಪ ಭಜಂತ್ರಿ ರಾಜಶೇಖರ ಕುಂಬಾರ ಕರಿಬಸವ ರೇವಡಿಹಾಳ ಮಂಗಲಪ್ಪ ಲಮಾಣೆ ಸೇರಿದಂತೆ ತಾಲೂಕ ಪರಿಶಿಷ್ಟ ಜಾತಿ ಪಂಗಡದ ತಾಲೂಕ ಅಧ್ಯಕ್ಷರು ತಾಲೂಕಿನ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥರಿದ್ದರು.

ವರದಿ: ಶಶಿಕುಮಾರ್ ಕಟ್ಟಿಮನಿ

ಜಿಲ್ಲೆ

ರಾಜ್ಯ

error: Content is protected !!