Saturday, September 21, 2024

ನಾಳೆ ಬೆಳಗಾವಿಯಲ್ಲಿ ನಡೆಯುವ ಎನ್.ಇ. ಪಿ ಕಾರ್ಯಾಗಾರ – MLC ಚುನಾವಣಾ ತಂತ್ರವೇ?

ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ ಬೆಳಗಾವಿಯ ಗಾಂಧಿ ಭವನದಲ್ಲಿ ನಾಳೆ ಬುಧವಾರ ಮಧ್ಯಾಹ್ನ ಜರುಗಲಿದೆ. ಈ ಕಾರ್ಯಾಗಾರವನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಉದ್ಘಾಟಿಸಲಿದ್ದಾರೆ.

ಇದು ರಾಷ್ಟ್ರೀಯ ಶಿಕ್ಷಣ ನೀತಿ ನೆಪದಲ್ಲಿ ಶಿಕ್ಷಕರನ್ನು,ಅಧಿಕಾರಿಗಳನ್ನು ಪರಿಷತ್ತಿನ ಚುಣಾವಣಾ ತಯಾರಿಗೆ ಬಳಸಿಕೋಳ್ಳುವ ತಂತ್ರವೇ?

ಇದೀಗ ತಾನೇ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗದಿದ್ದು, ಕೆಲವೇ ದಿನಗಳಲ್ಲಿ ಮೌಲ್ಯ ಮಾಪನ ಪ್ರಾರಂಭವಾಗಲಿದ್ದು ಶಿಕ್ಷಕರು ಹಾಗೂ ಅಧಿಕಾರಿಗಳು ಒತ್ತಡದಲ್ಲಿ ಇದ್ದು ಇಂತಹ ಪರಿಸ್ಥಿತಿಯಲ್ಲಿ ಕಾರ್ಯಾಗಾರವು ಅಗತ್ಯವಿತ್ತೇ? ಎಂದು ‌ಒಳಗೊಳಗೆ ಕುದಿಯುತ್ತಿದ್ದಾರೆ.

ಈಗಾಗಲೇ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರಿಗೆ ಎರಡು ಬಾರಿ ಎನ್.ಇ.ಪಿ. ವಿಷಯದ ಕುರಿತು ಕಾರ್ಯಾಗಾರ ಜರುಗಿವೆ.

ಪ್ರಾಥಮಿಕ ಮತ್ತು ಪದವಿ ಪೂರ್ವ ಶಿಕ್ಷಣಕ್ಕೆ ಇಲ್ಲದ ಎನ್.ಇ.ಪಿ ಕಾರ್ಯಾಗಾರಗಳು ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಪದೇ ಪದೇ ನಡೆಸುತ್ತಿರುವುದು ಏಕೆ ಎಂಬ ಜಿಜ್ಞಾಸೆ ಶಿಕ್ಷಕರರಲ್ಲಿ ಮೂಡಿದೆ.

ನೂತನ ಶಿಕ್ಷಣ ನೀತಿ ಹೆಸರಿನಲ್ಲಿ ಪದವಿಧರ ಹಾಗೂ ಶಿಕ್ಷಕರ ವಿಧಾನ ಪರಿಷತ್ ಚುಣಾವಣಾ ಮತಕ್ಷೇತ್ರದ ಚುನಾವಣೆಗೆ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಶಿಕ್ಷಕರು ಶಿಕ್ಷಕ ವರ್ಗ ಇತರಿಂದ ಬೇಸತ್ತು ಆಕ್ರೋಶ ಹೊರಹಾಕುತ್ತಿದ್ದಾರೆ.ಮದ್ಯಾಹ್ನದ ಬಿರುಬಿಸಲಿನಲ್ಲಿ ಬರುವ ಶಿಕ್ಷಕರ ಸ್ಥಿತಿಗತಿ ಬಗ್ಗೆ ಏಂದಾದರು ಜನಪ್ರತಿನಿಧಿಗಳು ಚಿಂತಿಸಿದ್ದಾರೆಯೆ?

ಕಳೆದ 12 ವರ್ಷಗಳಿಂದ ಶಿಕ್ಷಕ ಮತಕ್ಷೇತ್ರದಿಂದ ಆಯ್ಕೆ ಆಗಿರುವ ಅರುಣ್ ಶಹಾಪುರ ಅವರ ನಾಯಕತ್ವವನ್ನು ದಿಕ್ಕರಿಸಿ ಪರ್ಯಾಯ ನಾಯಕತ್ವಕ್ಕಾಗಿ ಸಮಾನ ಮನಸ್ಕರ ತಂಡ ಹುಟ್ಟಿಕೊಂಡು ಹದಿನಾಲ್ಕು ನೂರಕ್ಕೂ ಹೆಚ್ಚು ಶಿಕ್ಷಕರು ಸಭೆ ಮಾಡಿರುವುದು ಅರುಣ ಶಹಾಪುರ ಮತ್ತು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಕೆಲವೇ ತಿಂಗಳುಗಳಲ್ಲಿ ವಿಧಾನ ಪರಿಷತ್ ಚುಣಾವಣೆ ಏದುರಾಗುವ ಕಾರಣ ಪರಿಷತ್ ಚುಣಾವಣೆಗಳನ್ನು ಸೆಮಿ ಪೈನಲ್ ಪಂದ್ಯ ಎಂದು ಶಿಕ್ಷಕರು ಪರಿಗಣಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಕಣ್ಣಿಗೆ ರಾಚುವಂತೆ ಧಗಧಗಿಸುವ ಸಮಸ್ಯೆ ಮತ್ತು ಬೇಡಿಕೆಗಳು ಸಾಕಷ್ಟಿದ್ದು ಅವುಗಳ ಕಡೆ ಗಮನ ಹರಿಸದ ಶಾಸಕನೆಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಶಿಕ್ಷಕರ ಬೇಡಿಕೆಗಳಾದ ಅವೈಜ್ಞಾನಿಕ ವರ್ಗಾವಣೆ ಕಾಯ್ದೆ, ಹೆಚ್ಚುವರಿ ಶಿಕ್ಷಕರ ಸಮಸ್ಯೆ, ಕಾಲ್ಪನಿಕ ವೇತನ ಬಡ್ತಿ , ಖಾಲಿ ಹುದ್ದೆಗಳ ಭರ್ತಿ, ಇಲಾಖೆಯಲ್ಲಿ ಭ್ರಷ್ಟಾಚಾರ, ಮೂಖ್ಯೋಪಾಧ್ಯಯ ಹುದ್ದೆಗೆ ಬಡ್ತಿ, ಹಳೆ ಪಿಂಚಣಿ ಯೋಜನೆ, ಅವೈಜ್ಞಾನಿಕ ಶಾಲಾ ಪ್ರಾರಂಭದ ವೇಳಾಪತ್ರೀಕೆ,ವಿಧ್ಯಾರ್ಥಿಗಳ ಅನುಪಾತದಲ್ಲಿ ಭೇದಭಾವ, ಈ ರೀತಿ ಇನ್ನೂ ಹಲವಾರು ಸಮಸ್ಯೆ ಮತ್ತು ಬೇಡಿಕೆಗಳು ಹಾಸಿ ಹೊತ್ತುಕೊಂಡು ಮಲಗುವಷ್ಟು ಇದ್ದರೂ ಇವುಗಳ ಕಡೆ ಗಮನ ಹರಿಸದೆ ಇರುವ ಶಿಕ್ಷಕರ ಪ್ರತಿನಿಧಿ ಅರುಣ್ ಶಹಾಪುರ ಬಗ್ಗೆ ವಿಶೇಷ ಕಾಳಜಿ ವಯಿಸಿರುವ ಶಿಕ್ಷಣ ಮಂತ್ರಿಗಳ ನಡೆ ವಿಷಾದನೀಯವಾಗಿದೆ.

ಕೋವಿಡ್ ಸಂದರ್ಭದಲ್ಲಿ ಹಲವಾರು ಶಿಕ್ಷಕರು ಕಷ್ಟ ನಷ್ಟ , ಸಾವು ನೋವುಗಳಿಗೆ ತುತ್ತಾದರೂ ಶಾಸಕದ್ವಯರು ಮರಳಿ ನೋಡದೆ ತಮ್ಮ ಸ್ವಾರ್ಥ ರಾಜಕಾರಣದ ನಡೆಗೆ ತಕ್ಕ ಉತ್ತರ ಕೂಡಲು ಈ ಬಾರಿ ಶಿಕ್ಷಕ ಮತದಾರರು ಸನ್ನದ್ದರಾಗಿದ್ದಾರೆ.

 

 

ರಾಮು ಗುಗವಾಡ      ಪ್ರಧಾನ ಕಾರ್ಯದರ್ಶಿ ಪ್ರೌಢಶಾಲಾ ಸ.ಶಿ.ಸಂಘ ಬೆಂಗಳೂರು

ರಾಷ್ಟ್ರೀಯ ಶಿಕ್ಷಣ ನೀತಿ ಸ್ವಾಗತರ್ಹ. ಕಾರ್ಯಾಗಾರ ಸಮಯ ಸಂದರ್ಭ ನೋಡಿ ಮಾಡಬೇಕಾಗಿತ್ತು. ರಜೆಯ ಸಮಯದಲ್ಲಿ ಕಾರ್ಯಾಗಾರ ನಡೆಸುತ್ತಿರುವುದು ವಿಪರ್ಯಾಸ. ಅಲ್ಲದೆ ಸಂಬಳವನ್ನು ನಂಬಿ ಬದುಕು ನಡೆಸುವ ಶಿಕ್ಷಕರಿಗೆ ಆರ್ಥಿಕ ಹೊರೆಯಾಗಿದ್ದು, ಪ್ರವಾಸ ಭತ್ಯೆ ಹಾಗೂ ದಿನ ಭತ್ಯೆ ನೀಡಬೇಕೆಂದು ಆಗ್ರಹಿಸಿದ್ದಾರೆ

 

 

 

 

ಜಿಲ್ಲೆ

ರಾಜ್ಯ

error: Content is protected !!