Thursday, July 25, 2024

ಕೇಂದ್ರ ಸರ್ಕಾರದಿಂದ ಯುಗಾದಿ ಆಫರ್, ಸುಮಾರು 850 ಔಷಧಿಗಳ ಬೆಲೆಯಲ್ಲಿ ಹೆಚ್ಚಳ

ನವದೆಹಲಿ: ತೈಲ ಬೆಲೆ ಏರಿಕೆಯ ಬಳಿಕ ಬೆಲೆ ಏರಿಕೆ ಬರೆ ಕೆಲವು ಔಷಧಕ್ಕೂ ತಟ್ಟಿದೆ. ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಸುಮಾರು 850 ಕ್ಕೂ ಅಧಿಕ ಔಷಧಗಳ ಬೆಲೆ ಶೇಕಡ 10.8 ರಷ್ಟು ತುಟ್ಟಿಯಾಗಲಿದ್ದು ಬರುವ ಏಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ

2021ರ ಕ್ಯಾಲೆಂಡರ್ ವರ್ಷಕ್ಕೆ ಸಗಟು ಬೆಲೆ ಸೂಚ್ಯಂಕದಲ್ಲಿ WHOLESALE PRICE INDEX (WPI) ಶೇ.10.8 ಬದಲಾವಣೆ ಮಾಡಲಾಗುವುದೆಂದು ಭಾರತ ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ National Pharmaceutical Pricing Authority (NPPA) ಇತ್ತೀಚೆಗೆ ಪ್ರಕಟಿಸಿದೆ. 

ಈ ಪ್ರಕಟನೆಯ ಫಲವಾಗಿ ಸುಮಾರು 850 ಕ್ಕೂ ಹೆಚ್ಚು ಔಷಧಗಳ ಬೆಲೆ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. ಇದರಿಂದ ಸಾಮಾನ್ಯ ಜನರು ಸಾಮಾನ್ಯ ಖಾಯಿಲೆಗಳಿಗೆ ಬಳಸುವ ಔಷಧಗಳು ತುಟ್ಟಿಯಾಗಲಿವೆ. ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಆರ್ಥಿಕ ಸಲಹೆಗಾರರು ಒದಗಿಸಿದ Wholesale Price Index (WPI) ಆಧಾರದಲ್ಲಿ ಈ ಏರಿಕೆಗೆ National Pharmaceutical Pricing Authority (NPPA) ಅನುಮೋದನೆ ನೀಡಿದೆ ಈ ಕಾರಣದಿಂದ ಅಗತ್ಯಔಷಧಿಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ  ಪ್ರಮುಖವಾಗಿ ಅಲರ್ಜಿ, ಸೋಂಕು, ಜ್ವರ, ಚರ್ಮ ರೋಗ, ಹೃದ್ರೋಗ, ರಕ್ತಹೀನತೆ, ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಬಳಸುವ ಔಷಧಿಗಳ ಬೆಲೆಗಳು ಗಗನಕ್ಕೆರಲಿವೆ.

ಬೆಲೆ ಏರಿಕೆಯಾಗುವ ಔಷಧಗಳ ಪಟ್ಟಿಯಲ್ಲಿ, ಅಜಿಥೋಮೈಸಿನ್, ಸಿಪ್ರೊಫೋಕ್ಸಾಸಿನ್ ಹೈಡ್ರೋಕ್ಲೋರೈಡ್, ಮೆಟ್ರೋನಿಡಜೋಲ್, ಪ್ಯಾರಾಸಿಟಮೋಲ್, ಫೆನೋಬಾರ್ಬಿಟೋನ್ ಮತ್ತು ಫೆನಿಟೋಯಿನ್ ಸೋಡಿಯಂನಂತಹ ಔಷಧಗಳೂ ಸೇರಿವೆ ಎಂದು ಹೇಳಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!