Monday, April 15, 2024

ಉತ್ತಮ ಸೇವೆಗಾಗಿ ರೆಡಿಯಾಲಾಜಿ ಇಮೇಜಿಂಗ್ ಆಪೀಸರ್ ಆಕಾಶ ಥಬಾಜಗೆ ಪ್ರಶಸ್ತಿ

ಬೆಳಗಾವಿ : ‌ಜೆ.ಎನ್.ಎಮ್.ಸಿ. ಆವರಣದ ಡಾ: ಬಿ ಎಸ್‌ ಕೊಡಕಿಣಿ ಸಭಾಭವನದಲ್ಲಿ ಸನ್ 2021-22 ನೇ ಸಾಲಿನಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಜರಗಿತ್ತು. ಈ ವೇಳೆ ಆರೋಗ್ಯ ಇಲಾಖೆಯ ರೆಡಿಯಾಲಾಜಿ ವಿಭಾಗದಲ್ಲಿ ಅತ್ಯುತ್ತಮ ಸೇವೆ ಹಾಗೂ ಉತ್ತಮ ಕರ್ತವ್ಯ ನಿರ್ವಹಿಸಿದ್ದ ಹಿರೇಬಾಗೇವಾಡಿ ಸಮುದಾಯ ಆರೋಗ್ಯ ಕೇಂದ್ರದ  ರೆಡಿಯಾಲಾಜಿ ಇಮೇಜಿಂಗ್ ಆಪೀಸರ್ ಆಕಾಶ್ ಅರವಿಂದ ಥಬಾಜ ಅವರು ಉತ್ತಮ ರೆಡಿಯಾಲಾಜಿ ಇಮೇಜಿಂಗ್ ಆಪೀಸರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ್, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಕರ‍್ಯಕ್ರಮದಲ್ಲಿ ಆಕಾಶ ಥಬಾಜ ರವರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಪ್ರಶಸ್ತಿ ನೀಡಲಾಯಿತು.

ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಶಾಸಕ ಅನೀಲ ಬೆನಕೆ, ಡಿ.ಹೆಚ್.ಓ ಡಾ. ಶಶಿಕಾಂತ ಮುನ್ಯಾಳ, ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ, ಬೆಳಗಾವಿ ಜಿಲ್ಲಾ ಸರ್ವೇಕ್ಷಾನಾಧಿಕಾರಿ ಡಾ. ಬಿ.ಎನ್.ತುಕ್ಕಾರ ಒಳಗೊಂಡಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!