Monday, April 15, 2024

ಟ್ರಾಫಿಕ್ ಕಿರಿಕ್ ಆಗದಂತೆ ಬೀದಿ ಬದಿಯ ವ್ಯಾಪಾರ ಮಾಡಿ: ಪಿಎಸ್ಐ ಪ್ರಕಾಶ ಡಂಬಳ

ಮುದಗಲ್ಲ: ಪುರಸಭೆ ಕಾರ್ಯಾಲಯದ ವತಿಯಿಂದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಜಿಲ್ಲಾ ಕೌಶಲ್ಯ ಮಿಷನ್, ರಾಯಚೂರು ಹಾಗೂ ಪುರಸಭೆ ಕಾರ್ಯಾಲಯ ಮುದಗಲ್ಲ ಸಹಯೋಗದೊಂದಿಗೆ ಡೇನಲ್ಮ್ಅಭಿಯಾನದಡಿ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಉಪಘಟಕದಡಿ
ಬೀದಿ ಬದಿ ವ್ಯಾಪಾರಿಗಳಿಗೆ 2 ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ನಡೆಯಿತು..

ಬೀದಿ ಬದಿ ವ್ಯಾಪಾರಿಗಳು ಸಾರ್ವಜನಿಕರಿಗೆ ಹಾಗೂ ಟ್ರಾಫಿಕ್ ತೊಂದರೆಯಾಗದಂತೆ ವ್ಯವಸ್ಥಿತವಾಗಿ ವ್ಯಾಪಾರ ಮಾಡಬೇಕು ನಿರಂತರವಾಗಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಪುರಸಭೆಯ ವಾಹನಗಳಲ್ಲಿಯೇ ಕಸ ಹಾಕಬೇಕು ಎಂದು ಕೆಲವು ಬೀದಿ ಬದಿ ವ್ಯಾಪಾರಿಗಳು ರಸ್ತೆ ಮುಂಭಾಗದಲ್ಲಿ ವ್ಯಾಪಾರ ಮಾಡುವುದರಿಂದ ಟ್ರಾಫಿಕ್ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ವ್ಯಾಪಾರಸ್ಥರು ನಿಗದಿತ ಸ್ಥಳದಲ್ಲಿಯೇ ವ್ಯಾಪಾರ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗೂ ಕೆಲವು ನಿಯಮಗಳಿದ್ದು, ನೀವೂ ಕೂಡ ಆ ನಿಯಮಗಳನ್ನು ಪಾಲಿಸಬೇಕು.ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಗುರುತಿನ ಚೀಟಿಗಾಗಿ ಹಣ ನೀಡಬಾರದು ಹಾಗೂ ಸರಕಾರಿ ಸ್ಥಳದಲ್ಲಿ ಬಾಡಿಗೆ ವಸೂಲಿ ಮಾಡಿದಲ್ಲಿ ಕಂಡು ಬಂದರೆ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಎಸ್ಐ ಪ್ರಕಾಶ ಡಂಬಳ ಅವರು ಕಿವಿಮಾತು ಹೇಳಿದರು.

ವ್ಯಾಪಾರ ಮಾಡುವ ಸ್ಥಳ ಸ್ವಚ್ಛತೆಯಿಂದ ಕೂಡಿದ್ದರೆ ಗ್ರಾಹಕರು ಆಕರ್ಷಿತರಾಗುವದರ ಜೊತೆಗೆ ಹೆಚ್ಚಿನ ವ್ಯವಹಾರ ಆಗುತ್ತದೆ. ಪಿಎಸ್ಐ ಪ್ರಕಾಶ ಡಂಬಳ ಅವರು ಕಿವಿಮಾತು ಹೇಳಿದರು.

ಈ ವೇಳೆ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ಮರಿಲಿಂಗಪ್ಪ ಬೀದಿ ಬೀದಿಯ ವ್ಯಾಪಾರಿಗಳು ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡೆದು ಉತ್ತಮವಾದ ಲಾಭ ವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವ್ಯಾಪಾರ ಸಂಘಟನಾ ಅಧಿಕಾರಿ ರಾಜಶೇಖರ್ ಪಾಟೀಲ್ ಮಾತನಾಡಿ
ಬೀದಿ ಬದಿ ವ್ಯಾಪಾರಿಗಳು ತಮ್ಮ ಜೀವನೋಪಯೋಗಕ್ಕಾಗಿ ಮಾತ್ರವಲ್ಲದೇ ಸಾರ್ವಜನಿಕರ ಸಹಾಯಕ್ಕಾಗಿ ವ್ಯಾಪಾರ ವೃತ್ತಿಯಲ್ಲಿ ತೊಡಗಿದ್ದಾರೆ. ವ್ಯಾಪಾರಸ್ಥರು ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆಯಿಂದ ಕೂಡಿರುವ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಜೊತೆಗೆ ತಾವುಗಳು ಆರೋಗ್ಯದ ಕಾಳಜಿಗೆ ಗಮನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಅಮೀನ ಬೇಗಂ,ಸೈಯದ್ ಸಾಬ ಜೆಇ,ಯಾದ ಮಹೇಂದ್ರ ಬಡಿಗೇರ್, ಚನ್ನಮ್ಮ ದಳವಾಯಿ ಮಠ ,ಸಮುದಾಯ ಸಂಘಟನಾ ಅಧಿಕಾರಿ,ರಾಜಶೇಖರ್ ಪಾಟೀಲ್,ಸಂಘಟನಾ ಅಧಿಕಾರಿ, ಪಟ್ಟಣದ ವ್ಯಾಪಾರಸ್ಥರಾದ ಶಾಮೀದ್ ಸಾಬ, ರೇಖಾ,ನೀಲಮ್ಮ,ಲಿಂಗಮ್ಮ,ಹಾಗೂ ಬೀದಿ ಬದಿಯ ವ್ಯಾಪರಸ್ಥರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!