Thursday, July 25, 2024

ಮುದಗಲ್ಲ ರಾಮಲಿಂಗಶ್ವೇರ ಜಾತ್ರೆ ಸಂಪನ್ನ!ಶ್ರೀಶೈಲ ಪಾದಯಾತ್ರೆ ಹೋಗುತ್ತಿರುವ ಭಕ್ತರಿಗೆ ಅನ್ನ ದಾಸೋಹ

ಮುದಗಲ್ಲ: ಪಟ್ಟಣದ ಕಿಲ್ಲಾದಲ್ಲಿ ಇರುವ ರಾಮಲಿಂಗಶ್ವೇರ ಜಾತ್ರೆ ಹಾಗೂ ಶ್ರೀಶೈಲ ಪಾದಯಾತ್ರೆ ಹೋಗುತ್ತಿರುವ ಭಕ್ತರಿಗೆ ಅನ್ನ ದಾಸೋಹ ಅಂಗವಾಗಿ ಕಳಸ ಕುಂಭಗಳ ಮೆರವಣಿಗೆ ನಡೆಯಿತು.

ಪಟ್ಟಣದ ಕುಂಬಾರಪೇಟಿಯ ಬಸವೇಶ್ವರ ದೇವಸ್ಥಾನ ದಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ ರಾಮಲಿಂಗಶ್ವೇರ ದೇವರ ಕಳಿಸವನ್ನು ಕುಂಭ ಜಾನಪದ ಕಲೆಗಳಾದ ಮಸ್ಕಿ ತಾಲ್ಲೂಕಿನ ಹಸಮಕಲ್ ಅಮರೇಶ ಹಸಮಕಲ್ ಕಲಾ ತಂಡದಿಂದ ಹಗಲು ವೇಷ ಕಲೆ ಕಲಾ ಪ್ರದರ್ಶನ, ಸಿಂಧನೂರು ರತ್ನಮ್ಮ, ಯಲ್ಲಮ್ಮ ಅವರಿಂದ ಜೋಗತಿ ನೃತ್ಯ, ಹುನಗುಂದ ತಾಲೂಕಿನ ಅಮೀನಗಡ ಕರಡಿ ಮಜಲು ವಾದ್ಯ, ಮೇಗಳಪೇಟೆ ಕಲಾವಿದರಿಂದ ಡೊಳ್ಳು ಕುಣಿತ, ಗೊಂಬೆ ಕುಣಿತನದೊಂದಿಗೆ ಕಳಸ ಮೆರವಣಿಗೆಯೊಂದಿಗೆ ಕಿಲ್ಲಾದ ರಾಮಲಿಂಗೇಶ್ವರ ದೇವಸ್ಥಾನವರೆಗೆ ವಿವಿಧ ವಾದ್ಯಮೇಳ ಸಮೇತ ಸಂಭ್ರಮದ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಮೆರವಣಿಗೆಯಲ್ಲಿ 251 ಕಳಸ, 251 ಕುಂಭ ಹೊತ್ತು ಮೆರವಣಿಗೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ರಾಮಲಿಂಗೇಶ್ವರ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ, ಸಂತೆಕೆಲ್ಲೂರು ಘನಮಠೇಶ್ವರ ಮಠದ ಸ್ವಾಮೀಜಿ, ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ, ಮುಖಂಡ ಗುರುಬಸಪ್ಪ ಸಜ್ಜನ್, ಸಿದ್ದಯ್ಯ ಸಾಲಿಮಠ, ಅನೀಲ ಕುಮಾರ ಅವರು ಮಾತನಾಡಿದರು.

ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರಿನ ಲೋಕೋತ್ಸವ ಪ್ರಶಸ್ತಿ ವಿಜೇತ ಜಂಬಣ್ಣ ಶಂಕರಪ್ಪ ಹಸಮಕಲ್, ಸಿಂಧನೂರು ಕಲಾವಿದೆ ರತ್ನಮ್ಮ, ಅಮೀನಗಡ ಕಲಾವಿದ ಕೃಷ್ಣ ಅವರಿಗೆ ಸನ್ಮಾನಿಸಿದರು.ರಾಮಲಿಂಗೇಶ್ವರ ದೇವಾಲಯ ಸಮಿತಿಯಿಂದ ಲಕ್ಷಾಂತರ ಶ್ರೀಶೈಲ ಪಾದಯಾತ್ರೆ ಅನ್ನ ದಾಸೋಹ, ವೈದ್ಯಕೀಯ ಸೇವೆ ನೆರವೇರಿಸಿದರು.

ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ಅಶೋಕಗೌಡ ಪಾಟೀಲ್, ಸುರೇಂದ್ರ ಗೌಡ ಪಾಟೀಲ ಆದಾಪುರ, ಲಿಂಗಸುಗೂರು ಪಿ.ಐ ಮಹಾಂತೇಶ ಸಜ್ಜನ್, ಪುರಸಭೆ ಸದಸ್ಯ ಶ್ರೀಕಾಂತ ಪಾಟೀಲ ಆದಾಪುರ, ವೀರೇಶ ವಡ್ಡರ್, ರಾಘವೇಂದ್ರ ದೇಶಪಾಂಡೆ, ತಮ್ಮಣ್ಣ ಗುತ್ತೇದಾರ, ಅಜ್ಮೀರ್ ಬೆಳ್ಳಿಕಟ್ಟಿ, ವಿಶ್ವನಾಥ ದೇಸಾಯಿ, ಮಹೇಶ ವಸ್ತ್ರದ, ರಾಜು ಮಾಲೀ ಪಾಟೀಲ, ಜಹವರಲಾಲ್ ಸೇಠ್ ಸೇರಿದಂತೆ ವಿವಿಧ ಮುಂಖಡರು ಇದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!