Monday, April 15, 2024

ಈಜಲು ಬಾರದೇ ಇಬ್ಬರು ಯುವಕರು ಜಲ ಸಮಾಧಿ

ಯಾದಗಿರಿ: ಹೋಳಿ ಹಬ್ಬದಲ್ಲಿ ಬಣ್ಣ ಆಡಿ ಕೆರೆಗೆ ಈಜಲು ಹೋಗಿದ್ದ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಯಾದಗಿರಿ ಜಿಲ್ಲೆ ಬಾಚವಾರ ಗ್ರಾಮದ ಹೊರವಲಯದ ಕೆರೆಯಲ್ಲಿ ನಡೆದಿದೆ.

ಮಾರ್ತಾಂಡಪ್ಪ(19), ಸಾಹೇಬಣ್ಣ(18) ಮೃತಪಟ್ಟ ದುರ್ದೈವಿಗಳು . ಸ್ನೇಹಿತರೊಂದಿಗೆ ಸೇರಿ ಹೋಳಿ ಆಡಿದ ಕೆರೆಯಲ್ಲಿ ಸ್ನಾನ ಮಾಡಲು ಗ್ರಾಮದ ಹೊರವಲಯದಲ್ಲಿದ್ದ ಕೆರೆಗೆ ಹೋಗಿದ್ದಾರೆ.

ಈ ವೇಳೆ ಈಜು ಬಾರದ ಇವರಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಸಾಹೇಬಣ್ಣ ಮೃತದೇಹ ಪತ್ತೆಯಾಗಿದೆ. ಮಾರ್ತಾಂಡಪ್ಪ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!