Saturday, June 15, 2024

ಕಸಾಪ ಕಾರ್ಯ ಚಟುವಟಿಕೆಗಳ ಉದ್ಘಾಟನೆ ದಿ.20 ರಂದು

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು : ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಮತ್ತು ‘ಭಾವಲಹರಿ’ ಕವನ ಸಂಕಲನ ಬಿಡುಗಡೆ ಸಮಾರಂಭವು ರವಿವಾರ ದಿ.20 ರಂದು ಮುಂಜಾನೆ 11 ಗಂಟೆಗೆ ರಾಜಗುರು ಸಂಸ್ಥಾನ ಕಲ್ಮಠದಲ್ಶಂಲಿ ಇರುವ ಶಂಕರ ಚಂದರಗಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನಿಧ್ಯವನ್ನು  ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ, ನಿಚ್ಚಣಕಿಯ ಶ್ರೀ ಪಂಚಾಕ್ಷರಿ ಮಸ್ವಾಮೀಜಿಗಳು  ವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಳಾ ಮೆಟ್ಡಗುಡ್ಡ ವಹಿಸಲಿದ್ದು, ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ಮಹಾಂತೇಶ ದೊಡ್ಡಗೌಡರ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಟಿ ಬಳೆಗಾರ ಭಾಗವಹಿಸಲಿದ್ದಾರೆ ಎಂದು ಕಸಾಪ ತಾಲೂಕು ಘಟಕದ ನೂತನ ಅಧ್ಯಕ್ಷ ಡಾ.ಎಸ್. ಬಿ. ದಳವಾಯಿ ತಿಳಿಸಿದ್ದಾರೆ.

ಈ ವೇಳೆ ಕಸಾಪ ನಿಕಟ ಪೂರ್ವ ಅಧ್ಯಕ್ಷ .ಶೇಖರ ಹಲಸಗಿ, ಲೇಖಕ ಪ್ರವೀಣ ಗಿರಿ, ವಿ ಎಸ್ ನಂದಿಹಳ್ಳಿ, ರಾಜು ಜಾಂಗಟಿ, ಸೋಮಶೇಕರ ಹುಣಶ್ಯಾಳ, ಜಿ ಜಿ ಹನುಮಸಾಗರ, ಆನಂದ ಶಿವನಗೊಳ್ಳ ಇದ್ದರು.

ಜಿಲ್ಲೆ

ರಾಜ್ಯ

error: Content is protected !!