Thursday, July 25, 2024

ವಿವಾಹದ ಮೊದಲ ವರ್ಷದಲ್ಲಿ ಬರುವಂತಹ ಹಬ್ಬವನ್ನು ಆಚರಿಸಿಕೊಂಡ ಸಿಹಿ ನೆನಪು,ಎಂದೆಂದಿಗೂ ಸ್ಥಿರಸ್ಥಾಯಿ

ಮದುವೆಯ ಬಳಿಕ ಎರಡೂ ಕಡೆಯ ಕುಟುಂಬಗಳು ಒಟ್ಟಿರೆ ಸೇರಿಕೊಂಡು ಹಬ್ಬಹರಿದಿನಗಳನ್ನು ಒಟ್ಟಿಗೆ ಆಚರಿಸಿಕೊಳ್ಳುವ ಸಂಪ್ರದಾಯ, ನಮ್ಮ ಹಿಂದಿನ ಕಾಲದಿಂದಲೂ ಬೆಳೆದು ಬಂದ ಸಂಪ್ರದಾಯ. ಇಂದಿಗೂ ಕೂಡ ಇದೇ ಪದ್ಧತಿಯನ್ನು ಹಲವಾರ ಕುಟುಂಬಗಳು ಮುಂದುವರೆಸಿ ಕೊಂಡು ಹೋಗುತ್ತಿದ್ದಾರೆ. ಇದರಿಂದ ಹಬ್ಬದ ಸಂಭ್ರಮವು ಹೆಚ್ಚುವುದಲ್ಲದೆ, ಎರಡು ಕುಟುಂಬಗಳ ನಡುವಿನ ಸಂಬಂಧ, ಪ್ರೀತಿ ವಿಶ್ವಾಸ ಹಾಗೂ ಭಾಂದವ್ಯ ಮುಂದುವರೆಯುವುದು.

ಅದರಲ್ಲೂ ಹೊಸದಾಗಿ ಮದುವೆಯಾದ ಮದುಮಕ್ಕಳಿಗೆ, ಮೊದಲ ಬಾರಿಗೆ ಎರಡೂ ಕುಟುಂಬಗಳು ಒಟ್ಟಿಗೆ ಸೇರಿ, ಆಚರಿಸುವ ಹಬ್ಬ ಆಗಿರುವುದರಿಂದ, ಅವರಲ್ಲಿಯೂ ಕೂಡ ಹೊಸ ಉತ್ಸಾಹ, ಸಂತೋಷ ಮನೆಮಾಡುವುದು. ಅದರಲ್ಲೂ ವಿವಾಹದ ಮೊದಲ ವರ್ಷದಲ್ಲಿ ಬರುವಂತಹ ಹಬ್ಬವನ್ನು ಆಚರಿಸಿಕೊಂಡ ಸಿಹಿ ನೆನಪು, ಎಂದೆಂದಿಗೂ ಸ್ಥಿರಸ್ಥಾಯಿಯಾಗಿ ಇರುವುದು.

ಅದರಲ್ಲೂ ಮದುವೆಯ ಬಳಿಕ ಮೊದಲ ಬಾರಿಗೆ, ಹೋಳಿ ಆಚರಿಸಿಕೊಳ್ಳುತ್ತಲಿದ್ದರೆ, ಅದರ ಖುಷಿ ಹೇಳತೀರದು! ಈ ಸಮಯದಲ್ಲಿ ಎರಡೂ ಕುಟುಂಬದ ಸದಸ್ಯರು ಜೊತೆಗೂಡಿ, ಬಣ್ಣದ ನೀರಿನೊಂದಿಗೆ ಆಟ, ಬಣ್ಣಗಳ ಎರೆಚಾಟ, ಮನೆಯಲ್ಲಿ ರೆಡಿ ಮಾಡುವ ಬಗೆಬಗೆಯ ಸಿಹಿ ತಿಂಡಿ ತಿನಿಸುಗಳು, ಹೀಗೆ ಪ್ರತಿಯೊಂದು ಹೋಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದು.

 

ಅದು ಯಾವುದೇ ಹಬ್ಬ ಇರಲಿ, ಅಲ್ಲಿ ಸಿಹಿತಿಂಡಿ ಹಾಗೂ ಹೊಸ ಬಟ್ಟೆಗೆ ವಿಶೇಷ ಸ್ಥಾನಮಾನ ಇರುತ್ತದೆ! ಇದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ! ಯಾವಾಗಲೂ ಧರಿಸುವಂತಹ ಬಟ್ಟೆಯ ಬದಲಿಗೆ, ನಿಮಗೆ ಹೊಸ ಲುಕ್ ನೀಡುವ ಬಟ್ಟೆಗಳನ್ನು ಧರಿಸಿ ನೋಡಿ.

  • ಅಯ್ಯೋ ಡ್ಯಾನ್ಸ್ ಮಾಡುವುದಾ? ಮನೆಯ ಸದಸ್ಯರು ಏನು ಅಂದುಕೊಳ್ಳುತ್ತಾರೆ? ಇದೆಲ್ಲಾ ಆಲೋಚನೆಗಳನ್ನು ಬಿಟ್ಟುಬಿಡಿ. ಹೋಳಿ ಹಬ್ಬದ ವೇಳೆ ನೃತ್ಯ, ಸಂಗೀತ ಇದ್ದೇ ಇರುವುದು. ನಿಮ್ಮ ಸಂಗಾತಿ ಜತೆಗೆ ಸೇರಿಕೊಂಡು ನೃತ್ಯ ಮಾಡಬಹುದು.
  • ನಿಮಗೆ ಇಷ್ಟಬಂದ ಹಾಡಿಗೆ, ಇಬ್ಬರೂ ಸೇರಿಕೊಂಡು ಹೆಜ್ಜೆ ಹಾಕುವುದರಲ್ಲಿ ತಪ್ಪಿಲ್ಲ! ಇದರಿಂದ ಹಬ್ಬವನ್ನು ಆಚರಿಸಿಕೊಂಡ ಸಿಹಿ ನೆನಪುಗಳಲ್ಲಿ, ಇದೂ ಸ್ಥಿರಸ್ಥಾಯಿಯಾಗಿ ಇರುವುದರ ಜೊತೆಗೆ ಹಬ್ಬದ ಸಂಭ್ರಮ ಕೂಡ ಹೆಚ್ಚಾಗುವುದು.
  • ರಾತ್ರಿ ಊಟಕ್ಕೆ, ನಿಮ್ಮ ಸಂಗಾತಿಗೆ ಇಷ್ಟವಾಗುವ ಏನಾದರೂ ಸ್ಪೆಷಲ್ ಅಡುಗೆ ಮಾಡಿ ಹಾಗೂ ನೀವಿಬ್ಬರೂ ಕೂಡ ಜತೆಯಾಗಿಯೇ ಊಟ ಮಾಡಿ. ನೀವಿಬ್ಬರು ಜತೆಗೆ ಕುಳಿತುಕೊಂಡು ಆರೋಗ್ಯಕಾರಿ ಊಟ ಮಾಡುವ ವೇಳೆ ಮಧುರ ಸಂಗೀತವು ಹಿನ್ನೆಲೆಯಲ್ಲಿ ಇರಲಿ. ಇದರಿಂದ ಖಂಡಿತವಾಗಿಯೂ ಸಂಗಾತಿಗೆ ತುಂಬಾ ಸಂತೋಷವಾಗುವುದು
  • ಯಾವುದೇ ಕೆಲಸಗಳು ಕೂಡ ಯಶಸ್ವಿಯಾಗಬೇಕಿದ್ದರೆ, ಆಗ ಖಂಡಿತವಾಗಿಯೂ ಎಲ್ಲವೂ ಯೋಜನೆಯ ಪ್ರಕಾರ ನಡೆಯಬೇಕು. ಹೀಗಾಗಿ ನೀವು ಕೂಡ ಕೆಲವೊಂದು ಯೋಜನೆ ಹಾಕಿಕೊಳ್ಳಿ.
  • ಹಬ್ಬ ಆಚರಿಸುವ ಮುನ್ನ ಕೆಲವೊಂದು ಯೋಜನೆ ಹಾಕಿಕೊಳ್ಳಿ. ಉದಾಹರಣೆಗೆ ಜತೆಯಾಗಿ ಪ್ರವಾಸಕ್ಕೆ ಹೋಗುವುದು, ಅಥವಾ ಫ್ಯಾಮಿಲಿ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗವುದು ಇತ್ಯಾದಿಗಳಲ್ಲಿ ನಿಮಗೆ ಹೊಂದಾಣಿಕೆ ಆಗುವುದನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಇದನ್ನು ಸರಿಯಾಗಿ ಪಾಲಿಸಿಕೊಂಡು ಹೋಗಿ. ನೀವು ಪರಸ್ಪರರ ವಿಶೇಷ ದಿನಗಳನ್ನು ಗುರುತಿಸಿಕೊಂಡು, ಆ ದಿನದಂದು ಉಡುಗೊರೆ ನೀಡಿದರೂ ಒಳ್ಳೆಯದು.
  • ಮೊದಲ ಬಾರಿಗೆ, ನೀವಿಬ್ಬರೂ ಜೊತೆಯಾಗಿ ಆಚರಿಸುವ ಈ ಹೋಳಿ ಹಬ್ಬವನ್ನು ಜೀವಮಾನವಿಡಿ ನೆನಪಿಟ್ಟು ಕೊಳ್ಳುವಂತಹ ದಿನವನ್ನಾಗಿಸಿ. ಸಾಧ್ಯವಾದರೆ ವೃದ್ಧಾಶ್ರಮದಲ್ಲಿ ಅಥವಾ ಅನಾಥ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ, ಸಾಧ್ಯವಾದರೆ ಅವರ ಜೊತೆಗೆ ಹೋಳಿ ಹಬ್ಬ ಆಚರಿಸಿ, ಮಕ್ಕಳಿಗೆ ಸಿಹಿ ತಿಂಡಿಗಳನ್ನು ತಿನಿಸಿ, ಸಣ್ಣದಾದರೂ ಪರವಾಗಿಲ್ಲ, ಆಟಿಕೆಗಳನ್ನು ಉಡುಗೋರೆಯಾಗಿ ನೀಡಿ, ಅವರ ಮುಖದಲ್ಲಿ ಸಂತೋಷವನ್ನು ಕಾಣಿ. ಇವೆಲ್ಲಾ ಸಣ್ಣಪುಟ್ಟ ಸವಿನೆನಪುಗಳು ಜೀವಮಾನವಿಡಿ ನೆನಪಿನಲ್ಲಿ ಇರುತ್ತದೆ.

ಜಿಲ್ಲೆ

ರಾಜ್ಯ

error: Content is protected !!