Saturday, July 27, 2024

ನೌಕರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲಗೆ ಬಿಗ್‌ ಶಾಕ್: ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅವ್ಯವಹಾರ ತನಿಖೆಗೆ ಆದೇಶ.

ಬೆಳಗಾವಿ:ನಿವೇಶನ ಕೊಡುವುದಾಗಿ ನಂಬಿಸಿ ಸರ್ಕಾರಿ ನೌಕರರಿಂದ ಲಕ್ಷಾಂತರ ರೂಪಾಯಿ ಪಡೆದಿರುವ ಬೆಳಗಾವಿ ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ನಿರ್ಮಾಣ ಸಂಘದ ಹಣಕಾಸು, ಆಡಳಿತಾತ್ಮಕ ವ್ಯವಹಾರಗಳ ತನಿಖೆಗೆ ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಜಿ.ಎಂ.ಪಾಟೀಲ ಆದೇಶಿಸಿದ್ದಾರೆ.

ಸರ್ಕಾರಿ ನೌಕರರ ದೂರಿನ ಆಧಾರದ ಮೇಲೆ ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಹಣಕಾಸಿನ ವ್ಯವಹಾರ, ನಿವೇಶನ ಹಂಚಿಕೆ, ವಾಹನ ಖರೀದಿ,ಖರ್ಚು-ವೆಚ್ಚಗಳ ಸಮಗ್ರ ತನಿಖೆ ನಡೆಸಲು ಚಿಕ್ಕೋಡಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎ.ಗೌಡಪ್ಪ ಅವರನ್ನು ಫೆ.17ರಂದು ತನಿಖಾಧಿಕಾರಿ ನೇಮಕಗೊಳಿಸಿದೆ. 3 ತಿಂಗಳಲ್ಲಿ ಸಂಘದ ಅವ್ಯವಹಾರ ಕುರಿತು ವರದಿ ಸಲ್ಲಿಸುವಂತೆ ಸಂಯುಕ್ತ ನಿಬಂಧಕ ಜಿ.ಎಂ.ಪಾಟೀಲ ಸೂಚಿಸಿದ್ದಾರೆ.

ಏನಿದು ಪ್ರಕರಣ?: 2012ರಲ್ಲಿಯೇ ಬೆಳಗಾವಿ ಸುವರ್ಣ ವಿಧಾನಸೌಧ ಬಳಿ 100
ಎಕರೆ ಪ್ರದೇಶದಲ್ಲಿ ವಿವಿಧ ಅಳತೆಯ ( 30+40, 40*60, 50+80) ಒಟ್ಟು
1,000 ನಿವೇಶನಗಳನ್ನು ಭೂಮಿ ಇನ್ ಫಾ-ಪ್ರಾಪ್ ಪೈವೇಟ್ ಲಿಮಿಟೆಡ್ ಕಂಪನಿ
ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಪ್ರತಿ ಚದರ ಅಡಿಗೆ 355 ರೂ. ದರ ನಿಗದಿಪಡಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸುವುದಾಗಿ
ಹೇಳಿ ಬೆಳಗಾವಿ ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ
ಸಹಕಾರಿ ಸಂಘದ ಜಿಲ್ಲಾಧ್ಯಕ್ಷರು 500ಕ್ಕಿಂತ ಹೆಚ್ಚಿನ ನೌಕರರಿಂದ
ತಲಾ 4 ರಿಂದ 5 ಲಕ್ಷ ರೂ.ವರೆಗೆ ಮುಂಗಡವಾಗಿ ಪಡೆದುಕೊಂಡಿದ್ದಾರೆ. ಆದರೆ
ಇಲ್ಲಿಯವರೆಗೂ ಸೈಟ್ ನೀಡಿಲ್ಲ.

ಬೆಳಗಾವಿ ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ
ಸಹಕಾರಿ ಸಂಘಕ್ಕೆ ಸುಮಾರು 8 ಸಾವಿರ ಜನರು ತಲಾ 1,500 ರೂ. ಶುಲ್ಕ ಕಟ್ಟೆ
ಸದಸ್ಯರಾಗಿದ್ದಾರೆ. ಸಂಘದ ಸದಸ್ಯತ್ವ ಶುಲ್ಕ ರೂಪದಲ್ಲಿ ಬಂದಿರುವ ಕೋಟ್ಯಾಂತರ
ರೂಪಾಯಿ ಹಣ ದುರುಪಯೋಗವಾಗಿದೆ. ಎಲ್ಲ ಸದಸ್ಯರ ಬಳಿ ಶುಲ್ಕ ಕಟ್ಟಿರುವ ಮತ್ತು
ಸೈಟ್‌ಗಾಗಿ ಮುಂಗಡವಾಗಿರುವ ಹಣ ಕಟ್ಟಿರುವ ರಶೀಧಿಗಳಿವೆ. ಜಿಲ್ಲಾಧಿಕಾರಿಗಳೇ
ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಸರ್ಕಾರಿ ನೌಕರರ ಸಭೆಯಲ್ಲಿ
ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ
ಸದಸ್ಯರು, ನೌಕರರು ಆಗ್ರಹಿಸಿದ್ದರು.

ಬೆಳಗಾವಿ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ 2022 ಜನವರಿ 19ರಂದು ಜರುಗಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಸರ್ಕಾರಿ ವಿವಿಧ ಇಲಾಖೆ ನೌಕರರು, ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರ ಮುಂದೆ ಅಳಲು ವ್ಯಕ್ತಪಡಿಸಿದ್ದರು. ಅದಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಜಿ.ಎಂ. ಪಾಟೀಲ ಅವರಿಗ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು.‌

 ಜಗದೀಶ ಪಾಟೀಲಗೆ ಬಿಗ್‌ ಶಾಕ್: ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ ಅವರೆ ಜಿಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಅವರ ಆಡಳಿತಾವಧಿಯಲ್ಲಿಯೇ  ಅವ್ಯವಹಾರ ನಡೆದಿರುವ ಬಗ್ಗೆ ಗಂಭೀರ ಆರೋಪ ಕೇಳಿಬರುತ್ತಿತ್ತು.

ಜಿಲ್ಲೆ

ರಾಜ್ಯ

error: Content is protected !!