Saturday, June 15, 2024

ವಿದ್ಯಾಭ್ಯಾಸದೊಂದಿಗೆ ಮೃದು ಕೌಶಲಗಳನ್ನು ಬೆಳೆಸಿಕೊಳ್ಳಬೇಕಾಗಿದೆ :ಬಿರಾದಾರ

ಯರಗಟ್ಟಿ : ವಿದ್ಯಾರ್ಥಿಗಳು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಪ್ರಯತ್ನದಿಂದ ಅಧ್ಯಯನ ಮಾಡುವುದರೊಂದಿಗೆ ಹಲವು ಮೃದು ಕೌಶಲಗಳನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.

ಸ್ಥಳೀಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ನಮ್ಮ ಪದವಿ ಹಾಗೂ ಜ್ಞಾನವು ನಮಗೆ ಹುದ್ದೆಯನ್ನು ಪಡೆಯಲು ನೆರವು ನೀಡಿದರೆ, ಮೃದು ಕೌಶಲಗಳು ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕರಿಸುತ್ತವೆ.‌ ಸಂವಹನ, ನಾಯಕತ್ವ ಗುಣ, ತಂಡದಲ್ಲಿ ಕೆಲಸ ಮಾಡುವ ಗುಣ, ಜವಾಬ್ದಾರಿ ಹೊರುವಿಕೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಸ್ವಪ್ರೇರಣೆ ಇವುಗಳು ಪ್ರಮುಖ ಮೃದು ಕೌಶಲಗಳಾಗಿವೆ ಎಂದು ಪ್ರತಿಪಾದಿಸಿದರು.

ಮುಖ್ಯ ಗುರುಗಳಾದ ಶಿವಾನಂದ ಮಿಕಲಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮತಿಯ ಪದಾಧಿಕಾರಿಗಳು, ಅಧ್ಯಾಪಕರು ಉಪಸ್ಥಿತರಿದ್ದರು

ಜಿಲ್ಲೆ

ರಾಜ್ಯ

error: Content is protected !!