Friday, April 19, 2024

ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶಾಂತಿಪಾಲನಾ ಸಭೆ

ಬೀದರ್: ಜಿಲ್ಲೆಯ ಹುಮನಾಬಾದ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಶಾಂತಿಪಾಲನಾ ಪೂರ್ವಭಾವಿ ವಿಶೇಷ ಸಭೆ ಮಂಗಳವಾರ ನಡೆಯಿತು.

ಈ ವೇಳೆ ಮಾತನಾಡಿದ ಡಿವೈಎಸ್ಪಿ ಸೋಮಲಿಂಗ ಕುಂಬಾರ ಜಿಲ್ಲಾಧಿಕಾರಿಗಳು ಕಲಂ 144ಜಾರಿ ಮಾಡಿದ್ದಾರೆ. ನಿಯಮ ಪ್ರಕಾರ ನಾವಿಂದು ಸಭೆ ನಡೆಸಿ, ಕಾನೂನು ಉಲ್ಲಂಘನೆ ಮಾಡಿದ್ದೇವೆ. ನಮಗೆ ಅನಿವಾರ್ಯವಿತ್ತು. ಆದರೇ ಸಾರ್ವಜನಿಕರು ನಿಯಮ ಉಲಂಘಿಸಿದರೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಪಿಐ ಮಲ್ಲಿಕಾರ್ಜುನ ಯಾತನೂರ ಮಾತನಾಡಿ, ಪಟ್ಟಣದ ಜನತೆ ಪರಸ್ಪರ ಭಾವೈಕ್ಯತೆಯಿಂದ ಬಾಳುವ ಜನರಿದ್ದಾರೆ. ಇಡೀ ಜಿಲ್ಲೆಯಲ್ಲೇ ಶಾಂತಿ-ಸೌಹಾರ್ದತೆಗೆ ಹೆಸರಾದ ಈ ಪಟ್ಟಣದ ಮೇಲೆ ಇಡೀ ಜಿಲ್ಲೆಯ ದೃಷ್ಠಿ ಕೇಂದ್ರೀಕೃತವಾದ ಕಾರಣ ಪರಿಸ್ಥಿತಿ ಅರ್ಥೈಸಿಕೊಂಡು ಎಲ್ಲರೂ ಸಹಕರಿಸಬೇಕು ಎಂದು ಮನವಿಯನ್ನು ಮಾಡಿದರು.

ಲಕ್ಷ್ಮಿಪುತ್ರ ಪಿ.ಮಾಳಗೆ, ಲಕ್ಷ್ಮಿಕಾಂತ ಹಿಂದೊಡ್ಡಿ, ಅನೀಲ ದೊಡ್ಡಿ, ಎಂ.ಎ.ಸಮದ್, ಪುರಸಭೆ ಸದಸ್ಯ ಅಬ್ದುಲ್ ರೆಹೆಮಾನ್ ಗೋರೆಮಿಯ್ಯ, ಚಂದ್ರಕಾಂತ ಮಠಪತಿ ಚನ್ನಳ್ಳಿ, ಸುರೇಶ ಕಮಲಾಪೂರ ಮತ್ತಿತರರಿದ್ದರು.

ಜಿಲ್ಲೆ

ರಾಜ್ಯ

error: Content is protected !!