Tuesday, May 28, 2024

ಡಾ. ರಾಜಶೇಖರ ಬಿರಾದಾರ ಅವರಿಗೆ ವಚನ ಸಾಹಿತ್ಯದ ಗ್ರಂಥಗಳನ್ನು ನೀಡಿ ಗೌರವ.

ಯರಗಟ್ಟಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸುರಪುರ ವಿಧಾನ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೋನ್ಹಾಳ ಗ್ರಾಮದ ಪ್ರತಿಷ್ಟಿತ ಮನೆತನದ,  ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜಶೇಖರ ಬಿರಾದಾರ ಅವರು ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯರಾದ ನಿಮಿತ್ತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ  ಮೋಹನ ಬಸವನಗೌಡ ಪಾಟೀಲ ಅವರು ವಚನ ಸಾಹಿತ್ಯದ ಗ್ರಂಥಗಳನ್ನು ನೀಡಿ ಗೌರವಿಸಿದರು.

ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕರಾದ‌ ಬಸವರಾಜ್ ಬೀಳಗಿ ಹಾಗೂ ಹೆಸ್ಕಾಂನ ಯರಗಟ್ಟಿ ಶಾಖೆಯ ಕಿರಿಯ ಸಹಾಯಕರಾದ ಬಸವರಾಜ ತೊರಗಲ್ ಅವರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!