Wednesday, September 18, 2024

ಎಸ್.ಡಿ.ಪಿ.ಐ. ಪಕ್ಷದಿಂದ ಮುದಗಲ್ಲ ಕೋಟೆ ಸ್ವಚ್ಚತೆ 

ಮುದಗಲ್ಲ; ಐತಿಹಾಸಿಕ ಕೋಟೆ ಉಳಿವಿಗಾಗಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನವು ಕಳೆದ ಒಂದು ತಿಂಗಳಿನಿಂದ ಭರದಿಂದ ನಡೆಯುತ್ತಿದ್ದು ಇದರಲ್ಲಿ ಹಲವಾರು ಸಂಘ ಸಂಸ್ಥೆಯವರು, ಭಾಗವಹಿಸಿ ಶ್ರಮದಾನ ಮಾಡುತ್ತಿದ್ದಾರೆ.

ಈ ಕೆಲಸದಿಂದ ಪ್ರೇರಿತರಾಗಿ ಹಲವಾರು ಸಂಘ ಸಂಸ್ಥೆಯವರು ಬಂದು ಶ್ರಮದಾನವನ್ನು ನೀಡುತ್ತಿದ್ದು ಇಂದು ಎಸ್.ಡಿ.ಪಿ.ಐ. ಪಕ್ಷದಿಂದ ಮೊಹಮ್ಮದ್ ರಫೀಕ್ ಖಾಜಿ ಅವರ ನೇತೃತ್ವದಲ್ಲಿ 60ಕ್ಕೂ ಹೆಚ್ಚು ಜನ ಕಾರ್ಯಕತ೯ರು ಐತಿಹಾಸಿಕ ಕೋಟೆಯ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿ ಗಿಡ ಗಂಟಿಗಳನ್ನು ಕಡಿದು ಶ್ರಮದಾನ ಮಾಡಿದರು.

ನಂತರ ಮಹಮ್ಮದ್ ರಫೀಕ್ ಖಾಜಿ ಅವರಿಗೆ ಕೋಟೆ ಸ್ವಚ್ಛತಾ ಅಭಿಯಾನ ಸಮಿತಿ ವತಿಯಿಂದ ಗುರುಬಸಪ್ಪ ಸಜ್ಜನ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ.ನಯೀಮ್ ಅವರು ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹಿಬೂಬ ಕಡ್ಡಿಪುಡಿ, ಶಾನೂರ್, ಪಾಷಾ ಕಡ್ಡಿಪುಡಿ,ರಾಘವೇಂದ್ರ ದೇಶಪಾಂಡೆ, ಮಹಾಂತೇಶ್, ಸಾಬೀರ್, ನಾಸೀರ್, ಶಾಲಮ್,ಸಮೀರ್ ಖಾಜಿ, ರಜಾ ಉಪಸ್ಥಿತರಿದ್ದರು

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!