Sunday, September 8, 2024

ಸವದತ್ತಿ ತಾಲೂಕಾದ್ಯಂತ “ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ’’ ಯೋಜನೆಗೆ ಚಾಲನೆ

ಯರಗಟ್ಟಿ: ಅಲೆದಾಟಕ್ಕೆ ಬ್ರೇಕ್ : ಕಂದಾಯ ದಾಖಲೆಗಳೇ ರೈತರ ಮನೆಬಾಗಿಲಿಗೆ: ವಿಧಾನ ಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿ ಯರಗಟ್ಟಿ-ಸವದತ್ತಿ”ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆ ಅಡಿ ರೈತರಿಗೆ ಉಚಿತವಾಗಿ ಅವರವರ ಮನೆಗೆ ಪಹಣಿಯ ದಾಖಲೆ ಪತ್ರಗಳು, ನಕ್ಷೆಗಳು ಹಾಗೂ ಜಾತಿ, ಆದಾಯ ಪ್ರಮಾಣ ಪತ್ರಗಳು ಹಾಗೂ ಪಡಿತರ ಚೀಟಿ ಸೇರಿದಂತೆ ದಾಖಲೆಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ’’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಯರಝರ್ವಿ ಗ್ರಾಮದಲ್ಲಿ ತಾಲೂಕಾಮಟ್ಟದ ಕಾರ್ಯಕ್ರಮ ನಡೆಯುತ್ತಿದ್ದು, ಅದೇ ರೀತಿ ಯರಗಟ್ಟಿ-ಸವದತ್ತಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ತಾಲೂಕು ಮಟ್ಟದ ವಿತರಣೆಗೆ ಚಾಲನೆ ನೀಡಲಾಗಿದೆ.

ಇಂದು ಜಿಲ್ಲೆಯಾದ್ಯಂತ ಈ ಕಾರ್ಯಕ್ರಮ ಏಕಕಾಲಕ್ಕೆ ನಡೆಯುತ್ತಿದೆ
ರೈತರಿಗೆ ತಮ್ಮ ಕಂದಾಯ ದಾಖಲೆಗಳನ್ನು ಹೊಂದುವುದು ಅವರ ಹಕ್ಕಾಗಿದ್ದು, ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಈ ದಾಖಲೆಗಳ ಅವಶ್ಯಕತೆ ಇರುತ್ತದೆ.

ಆದ್ದರಿಂದ ಇಂತಹ ದಾಖಲೆಗಳಿಗೆ ಗ್ರಾಮೀಣ ಭಾಗದ ರೈತರ ದಿನನಿತ್ಯ ದಾಖಲೆಗಳಿಗಾಗಿ ಕಛೇರಿಗಳಿಗೆ ಅಲೆದಾಡುವುದು ತುಂಬಾ ದುಸ್ತರವಾಗಿರುವುದರಿಂದ, ರೈತರುಗಳಿಗೆ ಅವರ ಮನೆಬಾಗಿಲಿಗೆ ಅವರ ಕಂದಾಯ ದಾಖಲೆಗಳನ್ನು ತಲುಪಿಸುವುದರಿಂದ ಈ ರೀತಿಯ ಅಲೆದಾಟ ತಪ್ಪಿಸಿದಂತಾಗುತ್ತದೆ ಎಂಬ ರಾಜ್ಯ ಸರಕಾರ ಈ ವಿನೂತನ ಯೋಜನೆ ರೂಪಿಸಿದೆ ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು.

ಬೆಳಗಾವಿ ಜಿಲ್ಲೆಯ ಎಲ್ಲಾ ರೈತರಿಗೆ ಅವರ ಜಮೀನಿಗೆ ಸಂಬಂಧಿಸಿದ ಪಹಣಿ ಪತ್ರಿಕೆ ಹಾಗೂ ನಕಾಶೆ, ಇದರೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದರು.
ತಾಲೂಕಿನಾದ್ಯಂತ ಈಗಾಗಲೇ 86 ಸಾವಿಲ ಪಹಣಿ, ಅಟ್ಲಾಸ್/ನಕ್ಷೆಗಳು 86 ಸಾವಿರ ಇಂಡೆಕ್ಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ದಾಖಲೆಗಳನ್ನು ವಿತರಿಸಲಾಗುತ್ತಿದೆ ಎಂದರು.
ಸರ್ಕಾರದ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಕಾರ್ಯಕ್ರಮದಿಂದ ರೈತರಿಗೆ ಒಂದು ಬಾರಿ ಉಚಿತವಾಗಿ ಕಂದಾಯ ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದರಿಂದ ಕಛೇರಿಗೆ ಅಲೆದಾಡುವುದು ತಪ್ಪಿಸಿದಂತಾಗುತ್ತದೆ.

ಅಲ್ಲದೆ ಸದರಿ ಕಾರ್ಯಕ್ರಮದಿಂದ ರೈತರಿಗೆ ತಮ್ಮ ಜಮೀನಿನ ಪೂರ್ಣ ಮಾಹಿತಿ ಸ್ಥಳದಲ್ಲೇ ಲಭಿಸಿದಂತಾಗುತ್ತದೆ.ಉಚಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಿಂದಾಗಿ ಅವರ ಹಾಗೂ ಅವರ ಮಕ್ಕಳಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗಿರುತ್ತದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸವದತ್ತಿ ತಹಶೀಲ್ದಾರ ಪ್ರಶಾಂತ ಪಾಟೀಲ, ಯರಗಟ್ಟಿ ತಹಶೀಲ್ದಾರ ಮಹಾಂತೇಶ ಮಠದ, ಉಪ ತಹಸೀಲ್ದಾರ್ ಎಸ್. ಜಿ. ದೊಡ್ಡಮನಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ಕಂದಾಯ ಇಲಾಖೆ ಸಿಬ್ಬಂದಿಗಳಾದ, ವಾಯ್. ಎಫ್. ಮೂರ್ತೇನ್ನವರ, ದೀಪಾ ತೇಗುರ, ಎಲ್. ಬಿ. ದಳವಾಯಿ, ಎ. ಬಿ. ಹುಣಶ್ಯಾಳ, ಎಮ್. ಎಚ್. ಚಿಕ್ಕಾಣಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಈರವ್ವ ಹರಿಜನ, ಸ್ಥಳೀಯ ಜನಪ್ರತಿನಿಧಿಗಳಾದ ಪುಂಡಲೀಕ ಮೇಟಿ, ಡಾ: ಶಂಕಲಿಂಗಪ್ಪ, ಬಸವರಾಜ ಇಂಚಲ ಹಾಗೂ ಗ್ರಾಮಸ್ಥರು ಇದ್ದರು.

ವರದಿ : ಈರಣ್ಣಾ ಹುಲ್ಲೂರ (ಯರಗಟ್ಟಿ)

ಜಿಲ್ಲೆ

ರಾಜ್ಯ

error: Content is protected !!