Thursday, July 25, 2024

ಆರೋಪಿ ಮೇಲೆ ಸಣ್ಣ ಪುಟ್ಟ ಕೇಸ್ ದಾಖಲಿಸಿದರೇ ನಾವು ಸುಮ್ಮನಿರಲ್ಲಾ:ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಮೇಲೆ ಸಣ್ಣ ಪುಟ್ಟ ಕೇಸ್ ದಾಖಲಿಸಿದರೇ ನಾವು ಸುಮ್ಮನಿರಲ್ಲಾ, ಆತ ಜೈಲಿನಿಂದ ಹೊರಗಡೆ ಬಂದ ನಂತರ ಅವನನ್ನು ಕೊಚ್ಚಿ ಹಾಕ್ತಿವಿ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಳಾಗಿದ್ದ ಅಪೂರ್ವಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು ಇದೊಂದು ಉತ್ತಮ ಉದಾಹರಣೆಯಾಗಿದೆ.

ಅಪೂರ್ವ ತನ್ನ ಪ್ರೀಯತಮ ಇಜಾಜ್ ಶಿರೂರ ಜೊತೆಗೆ 2018 ರಂದು ಮದುವೆಯಾಗಿದ್ದರೆನ್ನಲಾಗಿದ್ದು, ಎರಡು ದಿನಗಳ ಹಿಂದೆ ಗದಗ ಪಟ್ಟಣದಲ್ಲಿ ಮಚ್ಚಿನಿಂದ ಕೊಚ್ಚಿ 23 ಬಾರಿ ಮನಬಂದಂತೆ ಇರಿದಿದ್ದು ಭೀಕರವಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ಆರೋಗ್ಯ ವಿಚಾರಿಸುತ್ತಿರುವುದು.

ಅಪೂರ್ವ ಎಂಬ ಹೆಣ್ಣು ಮಗಳನ್ನು ಮತಾಂತರ ಮಾಡಿದ್ದಾರೆ. ಅಪೂರ್ವ ಎಂಬ ಹೆಸರನ್ನು ಅರ್ಫಾ ಬಾನು ಎಂದ ಬದಲಿಸಿದ್ದ ಅಲ್ಲದೇ ಇವರ ದಾಂಪತ್ಯದ ಸಾಕ್ಷಿಯಾಗಿ ಮಗು ಕೂಡಾ ಇದೆ.

ಈ ಹಿಂದೆ ಆತನಿಗೆ ಮದುವೆಯಾಗಿ ಮೂವರು ಮಕ್ಕಳು ಇದ್ದರೂ ಕೂಡಾ ಅಪೂರ್ವಳನ್ನು ಪ್ರೀತಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದ ಅವರು ಇಜಾಜ್ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಹದಿಹರೆಯದ ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಬಿಳೋ ಮುಂಚೆ ಅಪೂರ್ವ ಘಟನೆ ನೆನಪಿಸಿಕೊಳ್ಳಬೇಕು.ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದ ಅವರು ಆ ಮನೆಯನ್ನು ಮೌಲ್ವಿಗಳು ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸಿದರು.

ಏನಿದು ಘಟನೆ?
ಇಜಾಜ್ ಎಂಬ ಆಟೋ ಚಾಲಕನನ್ನು ಪ್ರೀತಿಸಿದ್ದ ಅಪೂರ್ವ ೨೦೧೮ ರಲ್ಲಿ ಮನೆಯಲ್ಲಿ ಗೊತ್ತಾಗದೇ ಮದುವೆ ಆಗುತ್ತಾರೆ. ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಿ ಮದುವಯಾಗಿದ್ದರು ಎನ್ನಲಾಗಿದ್ದು, ಇಜಾಜ್ ನಿಗೆ ಈ ಮುಂಚೆ ಮದುವೆಯಾಗಿ ಮೂವರು ಮಕ್ಕಳು ಇದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆರು ತಿಂಗಳ ಹಿಂದೆ ವಿಚ್ಚೇದನ ಅರ್ಜಿಯನ್ನು ಅಪೂರ್ವ ಸಲ್ಲಿಸಿದ್ದಳು.

ಇಜಾಜ್ ಹಾಗೂ ಅರ್ಫಾ ಬಾನುವಿಗೆ ಪ್ರೀತಿಯ ಫಲವಾಗಿ ಒಂದು ಮಗುವೂ ಇದೆ.
ವಿಚ್ಚೇದನ ಅರ್ಜಿ ಸಲ್ಲಿಸಿದ್ದ ದಿನದಿಂದ ತವರು ಮನೆಯಲ್ಲಿ ಅಪೂರ್ವ ವಾಸವಾಗಿದ್ದಳು. ವಿಚ್ಛೇದನ ಅರ್ಜಿಯಿಂದ ಕುಪಿತಗೊಂಡ ಇಜಾಜ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನ್ನೆಲಾಗಿದೆ.

ಈ ವಿಷಯವನ್ನೆ ಮನಸ್ಸಿನಲ್ಲಿಟ್ಟಿದ್ದ ಇಜಾಜ್ ೨ ದಿನಗಳ ಹಿಂದೆ ಗದಗ ನಗರದಲ್ಲಿ ಅಪೂರ್ವ ಸ್ಕೂಟಿ ಕಲಿಯುವ ಸಂದರ್ಭದಲ್ಲಿ ಮಚ್ಚಿನಿಂದ ಕೊಚ್ಚಿ ಮಾರಣಾಂತಿಕವಾಗಿ ಮನಬಂದಂತೆ ಇರಿದಿದ್ದು, ಅಲ್ಲಿ ನೆರದಿದ್ದ ಸಾರ್ವಜನಿಕರು ಕಕ್ಕಾಬಿಕ್ಕಿಗೊಡ ಘಟನೆ ನಡೆಯಿತು.ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಅಪೂರ್ವಳನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!