Wednesday, May 22, 2024

ಹುಬ್ಬಳ್ಳಿಯಲ್ಲಿ ರೌಡಿಶೀಟರ ಬರ್ಬರ ಹತ್ಯೆ: ಕೊಲೆ ಹಿಂದೆ ಹಲವು ಅನುಮಾನ.

ಹುಬ್ಬಳ್ಳಿ:ಮನೆಗೆ ಹೋಗುತ್ತಿದ್ದ ರೌಡಿಶೀಟರನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅರವಿಂದನಗರದ ಪಿಎನ್ ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ನಡೆದಿದೆ.

ಅಕ್ಬರ ಅಲ್ಲಾಭಕ್ಷ್ಯ ಮುಲ್ಲಾ ಕೊಲೆಯಾದ ವ್ಯಕ್ತಿ

ತೊರವಿಹಕ್ಕಲದ ನಿವಾಸಿಯಾಗಿದ್ದ ಅಕ್ಬರ ಅಲ್ಲಾಭಕ್ಷ್ಯ ಮುಲ್ಲಾ ಎಂಬಾತನೇ ಹತ್ಯೆಯಾದ ರೌಡಿಶೀಟರ್ ಆಗಿದ್ದು, ಮುಖ ಗುರುತು ಸಿಗದಂತೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಶಿರಡಿನಗರದ ರಮೇಶ ನೀರಗಟ್ಟಿ ಹಾಗೂ ಇಂದಿರಾನಗರದ ನವೀನ್ ಎಂಬುವವರೊಂದಿಗೆ ಕುಡಿದು ತದನಂತರ ಮನೆಗೆ ಬರುವಾಗ ಸದಾನಂದ ಬುರ್ಲಿ ಎಂಬಾತ ಹೊಡೆದಿದ್ದಾನೆಂದು ಹೇಳಲಾಗಿದೆಯಾದರೂ, ಘಟನೆಯ ವೇಳೆ ಆತನೊಂದಿಗೆ ಹಲವರಿದ್ದರೆಂದು ಹೇಳಲಾಗಿದೆ.

ಹುಬ್ಬಳ್ಳಿಯ ಹೊಸೂರಿನಲ್ಲಿದ್ದ ಅಕ್ಬರ ಹಲವು ವರ್ಷಗಳ ಹಿಂದೆ ಅರವಿಂದನಗರದ ಬಳಿ ಮನೆ ಮಾಡಿಕೊಂಡಿದ್ದ. ನಿನ್ನೆ ರಾತ್ರಿ (ಗುರುವಾರ)ಪ್ರಕರಣವೂ ಸುಮಾರು ರಾತ್ರಿ 11.30 ರಿಂದ 12 ಗಂಟೆಯೊಳಗೆ ನಡೆದಿದ್ದು ಘಟನೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಹಳೇಹುಬ್ಬಳ್ಳಿ ಠಾಣೆಗೆ ಆರೋಪಿ ಸದಾನಂದ ಬುರ್ಲಿ ತಾನೇ ಕೊಲೆ ಮಾಡಿರುವದಾಗಿ ಶರಣಾಗಿದ್ದಾನೆ. ಆದ್ರೆ ಈ‌ ಕೊಲೆ ಪೂರ್ವನಿಯೋಜಿತವಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ‌ಕೊಲೆ ಹಿಂದೆ ಇನ್ನು ಹಲವರು ಶಾಮೀಲಾಗಿರುವ ಶಂಕೆ ಇದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!