Tuesday, May 28, 2024

ಮಗನ ಹುಟ್ಟು ಹಬ್ಬದ ನಿಮಿತ್ಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪನೆ! ಮಾಡಿದ ಕರುನಾಡ ವಿಜಯಸೇನೆ ಅಧ್ಯಕ್ಷ :ವೀರಭದ್ರಗೌಡ

ಲಿಂಗಸೂರು:ಕರುನಾಡ ವಿಜಯಸೇನೆ ಲಿಂಗಸೂಗೂರ ತಾಲ್ಲೂಕು ನಗರ ಘಟಕದ ಅಧ್ಯಕ್ಷರಾದ  ವೀರಭದ್ರಗೌಡ ಪಾಟೀಲ್ ಇವರ ಮಗನಾದ ಶಿವಾನಂದ್ ಪಾಟೀಲನ 2ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸಂತೆ ಬಜಾರ್ ನ ಕರಡಕಲ್ ರಸ್ತೆಯಲ್ಲಿ ಕುಡಿಯುವ ನೀರಿನ ಅರವಟ್ಟಿಗೆಯನ್ನು ಆರಂಭಿಸಿದ್ದಾರೆ.

ಈ ಕಾರ್ಯಕ್ರಮವನ್ನು ಲಿಂಗಸಗೂರಿನ ನಾಯಕರು ಜನಸೇವಕರು “ಕರುನಾಡ ವಿಜಯಸೇನೆ” ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿಗಳಾದ  ಶಿವಪುತ್ರ ಗಾಣಧಾಳ್ ಅವರ ಅಮೃತ ಹಸ್ತದಿಂದ ಉದ್ಘಾಟಿಸಿದರು.

ಬೇಸಿಗೆಯ ಸುಡು ಬಿಸಿಲಲ್ಲಿ ಬಸವಳಿದು ಬರುವ ಜನರಿಗೆ ದಾಹ ತೀರಿಸುವ ಒಂದು ನಿಸ್ವಾರ್ಥದ ಸೇವೆಗೆ ಅಣಿಯಾದ ವೀರಭದ್ರಗೌಡ ಅವರ ಸಾಮಾಜಿಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ  ಶಿವಪುತ್ರ ಗಾಣಧಾಳರು ಇಂತಹ ನೂರಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಶಕ್ತಿ ಆ ತಾಯಿ ಭುವನೇಶ್ವರಿ ನೀಡಲಿ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ  ಎಂ.ಸಿ ಚಂದ್ರಶೇಖರ ನಾಯಕ, ಮುತ್ತಣ್ಣ ಗುಡಿಹಾಳ್, ಆತ್ಮೀಯ ಸ್ನೇಹಿತರಾದ ಸಿದ್ದೇಶ್ ಚಿತ್ರದುರ್ಗ, ಸುರೇಶ ಮಡಿವಾಳ, ಮೌನೇಶ್ ಮುದಗಲ್, ಬಸಲಿಂಗಪ್ಪ ಐದನಾಳ, ನಾಗು ಹಿರೇಮಠ್, ವೀರೇಶ್ ಮಡಿವಾಳ, ಸುನೀಲ್ ಜೀವಾ ಮುಂತಾದವರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!