Sunday, September 8, 2024

ಐತಿಹಾಸಿಕ ಮುದಗಲ್ಲನಲ್ಲಿ ಶಿವ ಸಂಚಾರ ಸಾಣೇಹಳ್ಳಿ ಕಲಾ ತಂಡದಿಂದ ಇಂದಿನಿಂದ 3 ದಿನ ನಾಟಕ ಪ್ರದರ್ಶನ 

ಮುದಗಲ್ಲ:  ಐತಿಹಾಸಿಕ ನಗರ ಮುದಗಲ್ಲಿನಲ್ಲಿ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತಮ್ಮನ್ನ ತೊಡಗಿಸಿ ಕೊಂಡಿರುವ  ಅಶೋಕಗೌಡ ಪಾಟೀಲ ಮತ್ತು ಸುರೇಂದ್ರಗೌಡ ಪಾಟೀಲ ಸಹೋದರರು ಹಾಗೂ ಮುದಗಲ್ಲ ಗೆಳೆಯರ ಬಳಗದ ವತಿಯಿಂದ ಶಿವಸಂಚಾರ ಸಾಣೆಹಳ್ಳಿ ಕಲಾತಂಡದಿಂದ ನಾಟಕಗಳ ಪ್ರದರ್ಶನವನ್ನು ಇಂದಿನಿಂದ ಮೂರು ದಿನಗಳ ಕಾಲ ಮಾರ್ಚ್ 11,12,13 ರಂದು ಹಮ್ಮಿಕೊಳ್ಳಲಾಗಿದೆ.

ಇಂದು ಮಾ. 11 ರಂದು ನಡೆಯುವ ನಾಟಕ “ಒಕ್ಕಲಿಗ ಮುದ್ದಣ್ಣ” ಎಂಬ ನಾಟಕ ನಡೆಯಲಿದೆ. ಮಾ.12ರಂದು “ಗಡಿಯಂಕ ಕುಡಿಮುದ್ದ” ಎಂಬ ನಾಟಕ. ಮಾ. 13ರಂದು “ಬಸ್ ಕಂಡಕ್ಟರ” ಎಂಬ ನಾಟಕಗಳ ಪ್ರದರ್ಶನ ನಡೆಯಲಿವೆ.

ಕಲಾಭಿಮಾನಿಗಳು  ಕುಟುಂಬ ಸಮೇತ ಬಂದು ನಾಟಕಗಳನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಅಶೋಕ್ ಗೌಡ ಪಾಟೀಲ್  ತಿಳಿಸಿದ್ದಾರೆ.

ಸಂಜೆ 7ಗಂಟೆಗೆ. ಸ್ಥಳ ,ಅಶೋಕ್ ಗೌಡ ಪಾಟೀಲ್ ಕಾಲೋನಿ ಇಳಕಲ್ ರೋಡ್  ವಿಜಯ ಮಹಾಂತೇಶ ಪೆಟ್ರೋಲ್ ಬಂಕ್ ಹಿಂದುಗಡೆ ಮುದಗಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಶೋಕ್ ಗೌಡ ಪಾಟೀಲ್
Μ-9448184300.

ವರದಿ : ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!