Tuesday, October 1, 2024

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆ: ಗೋಪಾಲ್ ಧೂಪಾದ.

ಮುದಗಲ್ಲ:  ವಿಜಯ ಮಹಾಂತೇಶ ಮಠದಲ್ಲಿ ಪಿಂಚಣಿ ಸಪ್ತಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಗೋಪಾಲ್ ಧೂಪಾದ ಅವರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 18 ವರ್ಷ ದಿಂದ 40 ವರ್ಷ ದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎಂದರು ಹಾಗೂ ಅವರು ಆದಾಯ ತೆರಿಗೆ, ಇಎಸ್‌ಐ, ಪಿಎಫ್, ಎನ್‌ಪಿಎಸ್. ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು.18 ವರ್ಷದ ಕಾರ್ಮಿಕರು 55 ರೂ. ಹಾಗೂ 40 ವರ್ಷದ ಕಾರ್ಮಿಕರು 200 ರೂ. ವಂತಿಕೆಯನ್ನು ಪ್ರತಿ ತಿಂಗಳು ಪಾವತಿಸುವ ವಂತಿಕೆಯ ಸಮಾನಂತರವಾಗಿ ಕೇಂದ್ರ ಸರಕಾರ ಪಾವತಿಸುತ್ತದೆ. ಫಲಾನುಭವಿಗೆ 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂ.ಗಳ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದರು.

ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಮಹತ್ವ ವನ್ನು ತಿಳಿಸಿ, ಜಿಲ್ಲೆಯಲ್ಲಿ 7 ದಿನ ನಡೆಯುವ ಪಿಂಚಣಿ ಸಪ್ತಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಲ್ಲಾ ಅಸಂಘಟಿತ ಕಾರ್ಮಿಕರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನೊಂದಣಿ ಶಿಬಿರವು ನಡೆಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರು ಗೋಪಾಲ್ ಧೂಪಾದ ಹಜರತ್ ಹುಸೇನಿ ಆಲಂ ಕಟ್ಟಡ ನಿರ್ಮಾಣ ಸಂಘ ಅಧ್ಯಕ್ಷ ಸಾದಿಕ್ ಮಿಯಾ, ಹಮಾಲಿ ಕಾರ್ಮಿಕರ ಸಂಘ ಅಧ್ಯಕ್ಷ ದೂಲಿ ಸಾಬ್, ಅಬೀಬ್ .ಎ ಎಸ್ ಐ ಮಹಾಂತೇಶ ವೀರೇಶ್ ಉಪ್ಪಾರ, ಸಾದಿಕ್ , ಪಾಷಾ ಕಡ್ಡಿಪುಡಿ,ಉಪಸ್ಥಿತರಿದ್ದರು..

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!