Saturday, July 27, 2024

ಸಂವಿಧಾನ ಜಾರಿಗೆ ಬಂದು 50 ವರ್ಷಗಳ ಕಳೆದರು ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೊಟ್ಟಿಲ್ಲಾ:ಚಂದ್ರಶೇಖರ ಹುನಕುಂಟಿ

ಲಿಂಗಸೂಗೂರು : ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರಾಚಾರ್ಯರಾದ ಚಂದ್ರಶೇಖರ ಹುನಕುಂಟಿ ಯವರು ಮಾತನಾಡಿ ಪುರುಷ ಪ್ರಧಾನ ಸಮಾಜ ಸುಮಾರು ಸಂವಿಧಾನ ಜಾರಿಗೆ ಬಂದು 50 ವರ್ಷಗಳ ಕಳೆದರು ಇಂದಿಗೂ ಕೂಡ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೊಟ್ಟಿಲ್ಲಾ ಯಾವ ದೇವರು ,ಯಾವ ಗುಡಿಗುಂಡಾರಗಳು ಸಮಾನತೆಯನ್ನು ಕೊಟ್ಟಿಲ್ಲಾ ಮಹಿಳೆಯರಿಗೆ ಪುರುಷರಷ್ಟೆ ಸ್ಥಾನಮಾನ ಒದಗಿಸುವಲ್ಲಿ ಅಂಬೇಡ್ಕರ್ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.

ನಗರದ  ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯ ಲಿಂಗಸೂಗೂರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ  ಸಂಜೀವಕುಮಾರ ಕಂದಗಲ್ಲ್ ನ್ಯಾಯವಾದಿಗಳು ಹಾಗೂ ಉಟಕನೂರು ಬಸವಲಿಂಗಾಯತ ಎಜುಕೇಶನ್ ಟ್ರಸ್ಟ್ ಲಿಂಗಸೂಗೂರು ರವರು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು.

ಕಾನೂನು ವಿಧ್ಯಾರ್ಥಿ ಅಬುಂಜಾ ಮಾತನಾಡಿ ಮೊದಲು ಹೆಣ್ಣನ್ನು ಪರಿವರ್ತನೆ ಮಾಡ್ತಾರೆ ಎಲ್ಲಾ ರಂಗಗಳಲ್ಲಿ ಇವತ್ತು ಮಹಿಳೆಯರು ಟ್ರ್ಯಾಕ್ಸಿ ಡ್ರೈವರ್ ದಿಂದ ಹಿಡಿದು ಗಗಯಾತ್ರೆಯ ವರೆಗೆ ಮಹಿಳೆ ಸಾಧನೆ ಮಾಡಿದ್ದಾರೆ.ಮಹಿಳೆಯ ಈ ಸಾಧನೆಗೆ ನಿಜವಾಗಿಯೂ ಗಂಡು ನಂ 1 ಆಗಿರುತ್ತಾರೆ. ಮಹಿಳೆ ಜೀರೋ ಆಗಿದ್ದು ಆ ಒಂದರ ಮಧ್ಯ ಜೀರೋ ಸೇರಿದರೆ ನಂ 10 ಆಗುಲು ಸಾದ್ಯ ಅದೇರೀತಿ ಮಹಿಳೆಯರಿಗಿಂಗ 9 ಪಟ್ಟು ಪುರುಷ ಹೆಚ್ಚು ಇದ್ದಂತೆ ಗಂಡಿನ ಸಹಾಯ ಸಹಕಾರ ಇಲ್ಲದೇ ಹೋದರೆ ಮಹಿಳೆಯ ಸಾಧನೆ ಸೂನ್ಯ ವಿದ್ದಂತೆ ಎಂದರು.

ಇತಿಹಾಸದಲ್ಲಿ ಮಹಾನ್ ಮಾಡಿದಂತ ಕೆಲವೊಬ್ಬರು ಅತ್ಯುನ್ನತ ಸ್ಥಾನದ ನಾರಿಯರನ್ನು ನೆನೆದು ಇಂದು ಡಾ.ಬಿ.ಆರ್.ಅಂಬೇಡ್ಕರ್ ಮಹಿಳೆಯರಿಗೆ ಮತ ಚಲಾವಣೆಯ ಹಕ್ಕು ಕಲ್ಪಿಸುವ ಮೂಲಕ ಮಹಿಳಾ ಸಮಾನತೆಗೆ ಡಾ.ಬಾಬಾ ಸಾಹೇಬ್ ಒತ್ತು ನೀಡಿದ್ದರು. ರಾಜಕೀಯ ,ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಲಿಕ್ಕೆ ಕಾರಣ ರಾದವರು ಕೇವಲ ದಲಿತರಿಗಷ್ಟೇ ಅವರು ಸೀಮಿತವಾಗದೇ ಮಹಿಳಾ ಪರವಾಗಿ ದನಿ ಎತ್ತಿ ಮಹಿಳೆ ಸಮಾನತೆಗೆ ಕಾರಣರಾಗಿದ್ದಾರೆ ಎಂದು ಕಾನೂನು ವಿಧ್ಯಾರ್ಥಿ ಅನಿಲಕುಮಾರ ಹೇಳಿದರು.

ಮುಖ್ಯ ಅಥಿತಿಗಳಾಗಿ ಸಂಜು ಬಿ ಎಡ್ ಕಾಲೇಜಿನ ಉಪನ್ಯಾಸಕರು ಹಾಗೂ ಎಸ್.ಯು.ಬಿ.ಟಿ ಕಾರ್ಯದರ್ಶಿ ಸಂತೋಷ ಕಡಿವಾಳ,ಸಂಜು ಬಿ ಎಡ್ ಕಾಲೆಜ್ ಪ್ರಾಚಾರ್ಯರಾದ ವೆಂಕಟೇಶ್ ಸರ್.,ಡಿಪ್ಲೊಮಾ ಕಾಲೇಜ್ ಪ್ರಾಚಾರ್ಯರಾದ ಜೇವಿದ್ ಸರ್ ಹಾಗೂ ಉಪನ್ಯಾಸಕರಾದ ಶ್ರೀ ಮತಿ ರೇಣುಕಾ ಶ್ರೀ ಮತಿ ಗೀತಾ ಪಾಲಿಟೆಕ್ನಿಕ್, ಜಯಲಕ್ಷ್ಮಿ ಕಾನೂನು, ಎಸ್.ವಿ.ಚಿತ್ರನಾಳ ಚನ್ನಬಸವ ಕೋಟೆ ,ಬಸವರಾಜ ಪಾಟೀಲ್ ಬಿ.ಎಡ್ ಹಾಗೂ ಗ್ರಂಥಪಾಲಕ ದರ್ಶನ ದೇಸಾಯಿ ,ಕಾನೂನು ,ಪಾಲಿಟೆಕ್ನಿಕ್ ಹಾಗೂ ಬಿ ಎಡ್ ಎಲ್ಲಾ ವಿಧ್ಯಾರ್ಥಿಗಳು ಈ ಕಾರ್ಯಕ್ರಮ ಪಾಲ್ಗೊಂಡಿದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!