Tuesday, April 16, 2024

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಸನ್ಮಾನ

ಧಾರವಾಡ: ಜಿಲ್ಲೆ ಕಲಘಟಗಿ ಪಟ್ಟಣದ ಸಂತೋಷ್ ಲಾಡ್ ಅವರ ಮಡಿಕೆ ಹೊನ್ನಳ್ಳಿ ಅಮೃತ ನಿವಾಸದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಅವರ ಅಮೃತ್ ನಿವಾಸದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.ಹಾಗೂ ಈ ಕಾರ್ಯಕ್ರಮದಲ್ಲಿ ಸುಮಾರು ಹದಿನೈದು ಸಾವಿರ ಮಹಿಳೆಯರಿಗೆ ಸನ್ಮಾನ ನಡೆಸಲಾಯಿತು.

ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಡ್ ಅವರ ತಾಯಿಯವರಾದ  ಶೈಲಜಾ ಶಿವಾಜಿ ಲಾಡ್ ಅವರು ವಹಿಸಿಕೊಂಡಿದ್ದರು ಹಾಗೂ ಧರ್ಮಪತ್ನಿ  ಕೀರ್ತಿ ಲಾಡ್ ಹಾಗೂ ಅಕ್ಕ ಸುಜಾತ ಲಾಡ್ ಹಾಗೂ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್. ಕೋನರೆಡ್ಡಿ. ಸಂತೋಷ್ ಲಾಡ್ ಫೌಂಡೇಶನ್ ನಿರ್ವಾಹಕರಾದ ಆನಂದ್ ಕಲಾಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಮುರಳಿ ನರೇಶ್ ಮಲೆನಾಡ್. ಸೋಮಣ್ಣ ಬೆನ್ನೂರ್. ಎಸ್ ಆರ್ ಪಾಟೀಲ್. ಈರಮ್ಮ ದಾಸಂಕೊಪ್ಪ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಮಹಿಳೆಯರು ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಹಲವಾರು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

ವರದಿ: ನಿತಿಶಗೌಡ ತಡಸ

ಜಿಲ್ಲೆ

ರಾಜ್ಯ

error: Content is protected !!