Saturday, July 27, 2024

ನಿರಾಣಿ ವಿರುದ್ಧ ಅಭ್ಯರ್ಥಿ ಹಾಕಲು ಮೀನಾಮೇಷ ಎಣಿಸುತ್ತಿರುವ ಕಾಂಗ್ರೆಸ್

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಬರುವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು ರಾಜಕೀಯ ಪಕ್ಷಗಳ ನಾಯಕರುಗಳು ತಯಾರಿ ನಡೆಸಿದ್ದಾರೆ. ಬೆಳಗಾವಿ ವಿಜಯಪುರ ಜಿಲ್ಲೆಗಳನ್ನ ಒಳಗೊಂಡು ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ಪಕ್ಷ  ಯಾವುದೇ ತರಹದ ತಯಾರಿ ನಡೆಸಿಲ್ಲಾ ಆದರೆ ಬಿಜೆಪಿ ಈಗಾಗಲೇ ಈ ಕ್ಷೇತ್ರದ ಹಾಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರೇ ಅಭ್ಯರ್ಥಿ ಎಂಬುದು ನಿಚ್ಚಳವಾಗಿ ಗೋಚರಿಸುತ್ತಿದೆ. ಹನಮಂತ ನಿರಾಣಿ ಅವರಿಗೆ ತೀವ್ರ ಪೈಪೋಟಿ ನೀಡುವ ಅಭ್ಯರ್ಥಿಗಾಗಿ ಕಾಂಗ್ರೆಸ್‌ನಲ್ಲಿ ಹುಡುಕಾಟ ಶುರುವಾಗಿದ್ದು ಅವರ ವಿರುದ್ಧ ಸ್ಪರ್ಧೆ ಮಾಡಲು ಯಾರು ಮುಂದೆ ಬರುತ್ತಿಲ್ಲ ಎಂಬ ಸುದ್ದಿ ಹಲವು ಕಡೆ ಹರಿದಾಡುತ್ತಿದೆ. ಕಾಂಗ್ರೆಸ್ ವಲಯದಲ್ಲಿ ಅಭ್ಯರ್ಥಿ ಅಂತಿಮಗೊಳಿಸಲು ಅನೇಕ ಸಭೆಗಳು ನಡೆದರೂ ಅಧಿಕೃತ ಘೋಷಣೆ ಮಾತ್ರ ಆಗಿಲ್ಲ. ಬಹುತೇಕ ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾವಣೆ ಘೋಷಣೆ ಆದ  ನಂತರದ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ಆದರೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಆರು ತಿಂಗಳ ಮೊದಲೆ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ಇನ್ನುಳಿದ ಚುನಾವಣೆಯಲ್ಲಿ ಚುನಾವಣೆ ಘೋಷಣೆ ಆದ ನಂತರ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ ಆದರೆ ಪದವೀಧರ ಚುನಾವಣೆಯಲ್ಲಿ ಹಾಗಲ್ಲ ಮತದಾರರ ನೋಂದಣಿ ಮಾಡಿಸಬೇಕಿರುತ್ತದೆ ಮತ್ತು ಅಲ್ಲದೆ ಎರಡ್ಮೂರು ಜಿಲ್ಲೆಗಳಲ್ಲಿ ಮತದಾರರು ಹರಿದು ಹಂಚಿ ಹೋಗಿರುವುದರಿಂದ ನಾವಣೆಗೂ ಮೊದಲೇ ಪ್ರಚಾರ ಆರಂಭಿಸಬೇಕಿರುತ್ತದೆ.

ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ರೂ ಒಂದು ಲಕ್ಷ ಡಿಡಿ ಜತೆಗೆ ತಮ್ಮ ಅರ್ಜಿ ಸಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸುಮಾರು ತಿಂಗಳು ಹಿಂದೆಯೇ ಸೂಚಿಸಿದ್ದರು. ಅಧ್ಯಕ್ಷರ ಸೂಚನೆ ಮೇರೆಗೆ ಏಕೈಕ ಅಭ್ಯರ್ಥಿ ಅಥಣಿಯ ನ್ಯಾಯವಾದಿ ಸುನೀಲ್ ಸಂಕ ಆವರು ಒಂದು ಲಕ್ಷ ಡಿಡಿ ಜೊತೆಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಮತದಾರರ ನೋಂದಣಿ ಮಾಡಿಸುವುದು ಸೇರಿದಂತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ವಿಪರ್ಯಾಸ ಅಂದರೆ ಮೂರೂ ಜಿಲ್ಲೆಗಳಿಂದ ಬೇರೆ ಯಾರೂ ಡಿಡಿ ತೆಗೆದು ಅರ್ಜಿ ಸಲ್ಲಿಸಿಲ್ಲ. ಈ ಕಾರಣದಿಂದ ನ್ಯಾಯವಾದಿ ಸುನಿಲ್ ಅವರನ್ನೇ ಪಕ್ಷ ಅಂತಿಮಗೊಳಿಸುತ್ತಾ ಎಂದು ಕಾಯ್ದು ನೋಡಬೇಕಾಗಿದೆ.

ಮೂರು ಜಿಲ್ಲೆಗಳಲ್ಲಿ ಮತದಾರರು ಇರುವುದರಿಂದ ಮೂರೂ ಜಿಲ್ಲೆ ಗಳ ಪ್ರಮುಖ ಮುಖಂಡರನ್ನು ಸೇರಿಸಿ ಅಭ್ಯರ್ಥಿಯನ್ನು ಅಂತಿಮ ಗೊಳಿಸಬೇಕು ಎಂಬ ಸುದ್ದಿ ಮಾತ್ರ ಗಾಳಿಯಲ್ಲಿ ತೆಲಾಡುತ್ತಿದೆ. ಮೂರು ಜಿಲ್ಲೆಯ ಪ್ರಮುಖರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ ಮತ್ತು ಸಿದ್ದರಾಮಯ್ಯ ಅವರು ಒಂದೆಡೆ ಸೇರಿ ಅಧಿಕೃತ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕು ಈಗ ಪಂಚರಾಜ್ಯಗಳ ಚುನಾವಣೆ ಹಾಗೂ ಮೇಕೆದಾಟು ಪಾದಯಾತ್ರೆ ಇದ್ದ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಹನಮಂತ ನಿರಾಣಿ ಅವರ ದಾರಿ ಸುಗಮವಾಗಿ ಇರುವುದರಿಂದ ಅವರು ಈಗಾಗಲೇ ಮತದಾರರ ನೋಂದಣಿ, ಸಭೆ ಸಮಾರಂಭಗಳನ್ನು ಮಾಡುತ್ತಿದ್ದಾರೆ. ನ್ಯಾಯವಾದಿಸುನೀಲ್ ಸಂಕ ಅವರು ಮೂರು ಜಿಲ್ಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮತದಾರರ ನೋಂದಣಿ ಮಾಡಿ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

 

 

 

 

ಜಿಲ್ಲೆ

ರಾಜ್ಯ

error: Content is protected !!