Thursday, July 25, 2024

ಮಹಿಳಾ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮಿಥಾಲಿ ನೇತೃತ್ವದ ತಂಡ 107 ರನ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 244 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 137 ರನ್‌ಗಳಿಗೆ ಆಲೌಟ್ ಆಯಿತು.

ಟೀಂ ಇಂಡಿಯಾ ವಿಶ್ವಕಪ್ ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 107 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 244 ರನ್ ಗಳಿಸಿತು. ಭಾರತದ ಪರ ಸ್ಮೃತಿ ಮಂಧಾನ 52 ರನ್, ದೀಪ್ತಿ ಶರ್ಮಾ 40 ರನ್, ಪೂಜಾ ವಸ್ತ್ರಕರ್ 67 ರನ್ ಮತ್ತು ಸ್ನೇಹ್ ರಾಣಾ ಔಟಾಗದೆ 53 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 137 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಎರಡು ವಿಕೆಟ್ ಪಡೆದರೆ, ಮೇಘನಾ ಸಿಂಗ್ ಒಂದು, ರಾಜೇಶ್ವರಿ ಗಾಯಕ್ವಾಡ್ 4, ದೀಪ್ತಿ ಶರ್ಮಾ 1, ಸ್ನೇಹ ರಾಣಾ ಎರಡು ವಿಕೆಟ್ ಕಬಳಿಸಿದರು.

ಮಹಿಳಾ ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಪಾಕ್ ಪರ ಗರಿಷ್ಠ ಸ್ಕೋರ್ 30 ಆಗಿತ್ತು. ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ 30 ರನ್ ಗಳಿಸಿದರೆ, ಡಯಾನಾ ಬೇಗ್ 24 ರನ್ ಕಲೆ ಹಾಕಿದರು. ಪಾಕಿಸ್ತಾನದ ಬ್ಯಾಟಿಂಗ್ ಅನ್ನು 43 ಓವರ್ ಗಳಿಗೆ ಸೀಮಿತಗೊಳಿಸಿ 137ಕ್ಕೆ ಆಲೌಟ್ ಮಾಡುವಲ್ಲಿ ಇಂಡಿಯನ್ ಬೌಲರ್ ಗಳು ಯಶಸ್ವಿಯಾದರು.

ಪಾಕಿಸ್ತಾನ ವಿರುದ್ಧದ ಈ ಅದ್ಭುತ ಗೆಲುವಿನ ನಂತರ ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ಒಂದು ಪಂದ್ಯವನ್ನು ಆಡಿದ್ದು 2 ಅಂಕಗಳನ್ನು ಹೊಂದಿದ್ದರೆ, ನಿವ್ವಳ ರನ್ ರೇಟ್ 2.14 ಆಗಿದೆ. ಅದೇ ಹೊತ್ತಿಗೆ ಪಾಕಿಸ್ತಾನ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿದೆ.

ಭಾರತವು ಪಾಕಿಸ್ತಾನದ ವಿರುದ್ಧ ಏಕದಿನದಲ್ಲಿ ಸತತ 11ನೇ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಎಲ್ಲಾ 11 ಪಂದ್ಯಗಳನ್ನು ಗೆದ್ದಿದೆ. ಇದೇ ಸಂದರ್ಭದಲ್ಲಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವೆ 4 ಪಂದ್ಯಗಳು ನಡೆದಿವೆ. ನಾಲ್ಕೂ ಪಂದ್ಯಗಳಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದೆ.

ಪಾಕಿಸ್ತಾನದ ಮಹಿಳಾ ತಂಡ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಮಾರ್ಚ್ 16, 2009 ರಿಂದ ತಂಡವು ವಿಶ್ವಕಪ್‌ನಲ್ಲಿ 15 ಪಂದ್ಯಗಳನ್ನು ಆಡಿದ್ದು, ಎಲ್ಲದರಲ್ಲೂ ಸೋಲನ್ನು ಕಂಡಿದೆ.

ಜಿಲ್ಲೆ

ರಾಜ್ಯ

error: Content is protected !!