Thursday, July 25, 2024

ಬೆಳಗಾವಿ ಜಿಲ್ಲಾ ಕಸಾಪದಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ – ಉಪನ್ಯಾಸ ಕಾರ‍್ಯಕ್ರಮ

ಬೆಳಗಾವಿ 06: ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕ ಹಾಗೂ ಗಣತ ವಿಜ್ಞಾನಗಳ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ನೆಹರೂ ನಗರದಲ್ಲಿನ ಕನ್ನಡ ಭವನದಲ್ಲಿ ಸೋಮವಾರ ಮಾ.7 ರಂದು ಸಂಜೆ 5 ಘಂಟೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ಯ ಕಾರ‍್ಯಕ್ರಮ ಆಯೋಜಿಸಲಾಗಿದೆ.

ಕಾರ‍್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಮತ್ತು ಖ್ಯಾತ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜಿ.ಜಿ. ಮೂಲಿಮನಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು “ಅಭಿವೃದ್ದಿಗೆ ವಿಜ್ಞಾನ”ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಕೆ.ಎಲ್.ಇ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ಹೆಚ್.ಬಿ. ರಾಜಶೇಖರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು ಕಾರ‍್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಮೀನಾಕ್ಷಿ ಶಿವಾನಂದ ಕುಡಸೋಮಣ್ಣವರ ಉಪಸ್ಥಿತರಿರುವರು.

ಗೌರವ ಸನ್ಮಾನಿತರಾಗಿ ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ನ್ಯಾಯವಾದಿ ಶರಣ ಬಸವರಾಜ ರೊಟ್ಟಿ, ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ‍್ಯದರ್ಶಿ ಶರಣ ಅಶೋಕ ಮಳಗಲಿ, ಎಫ್.ವಾಯ್.ತಳವಾರ ಉಪಸ್ಥಿತರಿರಲಿದ್ದಾರೆ.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ  ಮಂಗಲಾ ಮೆಟಗುಡ್ಡ ವಹಿಸಲಿದ್ದಾರೆ. ಬೆಳಗಾವಿಯ ಗಣಿತ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ವೆಂಕಟೇಶ ಕಾರ‍್ಯಕ್ರಮ ಸಂಯೋಜಿಸಿದ್ದಾರೆ. ಕಾರ‍್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ ಆಸಕ್ತರು ಭಾಗವಹಿಸಿ ಕಾರ‍್ಯಕ್ರಮ ಯಶಸ್ವಿಗೊಳಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ತಿಳಿಸಿದ್ದಾರೆ.

 

 

ಜಿಲ್ಲೆ

ರಾಜ್ಯ

error: Content is protected !!