Tuesday, May 28, 2024

ತನ್ನ ಕಾಮದಾಟ ಬಯಲಾಗಬಾರದೆಂದು ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ

ಕೊಪ್ಪಳ,ಮಾ.05: ಕೊಪ್ಪಳ ಜಿಲ್ಲೆಯ ಯುವಕನ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಿರುವು ಸಿಕ್ಕಿದ್ದು, ತನ್ನ ಪಲ್ಲಂಗದಾಟಕ್ಕೆ ಅಡ್ಡಿಯಾಗಿದ್ದಾನೆಂದು ಹೆತ್ತ ಮಗನನ್ನೆ ತಾಯಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

 ಗ್ರಾಪಂ ಸದಸ್ಯ, ಮಗನೊಂದಿಗೆ ಸೇರಿ ತನ್ನ ಸಣ್ಣ ಮಗನನ್ನೆ ಕೊಲೆ ಮಾಡಿ ತಾಯಿ ಹೂತು ಹಾಕಿದ್ದಾಳೆ. ಅನೈತಿಕ ಸಂಭಂದಕ್ಕೆ ಅಡ್ಡಿಯಾಗುತ್ತಾನೆಂದು‌ ತಾಯಿಯೇ ಮಗನನ್ನು ಕೊಲೆ ಮಾಡಿದ್ದಾಳೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ಮ್ಯಾದರಡೊಕ್ಕಿ ಗ್ರಾಮದ ಯುವಕ ಬಸವರಾಜ್ ದೋಟಿಹಾಳ ಜನವರಿ 16 ರಂದು ಕಾಣೆಯಾಗಿದ್ದ. ಬಗ್ಗೆ ತಾವರಗೇರಾ ಠಾಣೆಯಲ್ಲಿ ಬಸವರಾಜ್ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಸದ್ಯ ಶಾಕ್ ಆಗಿದ್ದು, ಹೆತ್ತ ತಾಯಿಯೇ ಮಗನನ್ನು ಕೊಲೆ ಮಾಡಿ ಹೂತು‌ ಹಾಕಿರುವುದು ಬೆಳಕಿಗೆ ಬಂದಿದೆ.

ಅಮರಮ್ಮ ಹಾಗೂ ಗ್ರಾಪಂ ಸದಸ್ಯ ಅಮರೇಶ್ ಕಂದಗಲ್ ನಡುವೆ ಅನೈತಿಕ ಸಂಭಂದ  ಇತ್ತು. ಇದಕ್ಕೆ ಅಮರಮ್ಮ ಮಗ ಬಸವರಾಜ್ ಅಡ್ಡಿಯಾಗಿದ್ದ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಸದ್ಯ, ಅಮರಮ್ಮ,ಅಮರೇಶ್ ಕಂದಗಲ್ ಹಾಗೂ ಅಮರೇಶ್ ದೋಟಿಹಾಳನನ್ನ ಪೊಲೀಸರು ಬಂಧಿಸಿದ್ದಾರೆ. 

ಕೊಲೆ ಆರೋಪಿ ಗ್ರಾಪಂ ಸದಸ್ಯನ ಸಮ್ಮುಖದಲ್ಲಿ ಶವ ಹೊರತಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಂತಹ ನೀಚ ತಾಯಿಯು ಇರುತ್ತಾಳೆ ಎಂಬುವುದು ಅಸಾಧ್ಯವಾದರು. ನಂಬಲೇಕಾದ ಘಟನೆ ನಡೆದಿದೆ.

ಜಿಲ್ಲೆ

ರಾಜ್ಯ

error: Content is protected !!