Friday, April 19, 2024

ಖಾನಾಪೂರ ತಾಲೂಕಿನ ನೂತನ ಕಸಾಪ ಅಧ್ಯಕ್ಷ ಹಾಗೂ ಕಾರ್ಯದರ್ಶಿ ನೇಮಕ

ಬೆಳಗಾವಿ 04: ಕನ್ನಡ ಸಾಹಿತ್ಯ ಪರಿಷತ್ತಿನ ಖಾನಾಪುರ ತಾಲೂಕಾ ಅಧ್ಯಕ್ಷರನ್ನಾಗಿ ಬಸಪ್ರಭು ಹಿರೇಮಠ ಅವರನ್ನು ನೇಮಕಗೊಳಿಸಿ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆದೇಶ ಮಾಡಿದ್ದಾರೆ.

ಖಾನಾಪೂರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಕ್ಕೆ ಗೌರವ ಕಾರ್ಯದರ್ಶಿಗಳನ್ನಾಗಿ ಕಿರಣ ಸಾವಂತನವರ, ರವೀಂದ್ರ ಕಾಡಗಿ, ಗೌರವ ಕೋಶಾಧ್ಯಕ್ಷರನ್ನಾಗಿ ಪ್ರಭುದೇವ ಹಿರೇಮಠ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಸದಾಶಿವ ಭಜಂತ್ರಿ, ಭರಮಾ ತಳವಾರ, ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ಕರೆಪ್ಪ ಪೂಜಾರ, ಮಹಿಳಾ ಸಾಹಿತಿಗಳಾದ ಶ್ರೀಮತಿ ಉಮಾ ಅಂಗಡಿ, ಶ್ರೀಮತಿ ಶಬಾನಾ ಅಣ್ಣಿಗೇರಿ, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಮಹಾಂತೇಶ ಕೋಡೋಳ್ಳಿ ತಾಲೂಕಾ ಶಿಕ್ಷಣಾಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ನಿಕಟಪೂರ್ವ ಅಧ್ಯಕ್ಷ ವಿಜಯ ಬಡಿಗೇರ, ಸಲಹಾ ಸಮಿತಿ ಸದಸ್ಯರಾಗಿ ಅಪ್ಪಯ್ಯಾ ಕೋಡೋಳ್ಳಿ, ಮಹಾಂತೇಶ ಕುಂದರಗಿ, ವೀರಭದ್ರ ಜವಳಿ, ಮೇಘಾ ಕುಂದರಗಿ, ಈಶ್ವರ ಸಾಣಿಕೊಪ್ಪ, ಶ್ರೀಧರ ಗಣಾಚಾರಿ ಅವರನ್ನು ನೇಮಕಗೊಳಿಸಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಖಾನಾಪುರ ತಾಲೂಕಾ ಅಧ್ಯಕ್ಷ ಬಸಪ್ರಭು ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!