Sunday, September 8, 2024

ಶಿವಾಜಿ ಜಯಂತಿ: ಗಮನ ಸೆಳೆದ ಮೆರವಣಿಗೆ…

ಮುದಗಲ್ಲ:ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿಯನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಮುದಗಲ್ಲ ನ ವಿವಿಧ ಮುಖ್ಯ ರಸ್ತೆಯಲ್ಲಿ ಶಿವಾಜಿ ಭಾವಚಿತ್ರದ ಅದ್ದೂರಿ ಮೆರವಣಿಗೆ ಮಾಡಲಾಯಿತು.ಶಿವಾಜಿ ಧ್ವಜಗಳು ಗಮನ ಸೆಳೆದವು.

ನಿವೃತ್ತಿ ಸೈನಿಕ ಪಂಪಣ್ಣ ಜಾವೂರ್ ಮೆರವಣಿಗೆಗೆ ಚಾಲನೆ ನೀಡಿದರು. ಚೌಡಿ ಕಟ್ಟಿಯ ಆರಂಭವಾದ ಮೆರವಣಿಗೆ ಮುದಗಲ್ಲ ಪ್ರಮುಖ ರಸ್ತೆಯಲ್ಲಿ ಮುಖಾಂತರ ಸಾಗಿತು. ಮೆರವಣಿಗೆಯಲ್ಲಿ ಶಿವಾಜಿ ಜಯ ಘೋಷಣೆ ಹಾಕಿದರು. ವಿವಿಧ ವಾದ್ಯ ತಂಡಗಳು ಹಾಗೂ ಕುಣಿತ ವಿಶೇಷ ಮೆರಗು ನೀಡಿದವು.

ಈ ಸಂದರ್ಭದಲ್ಲಿ ಈಶ್ವರ್ ವಜ್ಜಲ್, ಸಿದ್ದು ,ಸಣ್ಣ ಸಿದ್ದಯ್ಯ,ಯಮಂತ್ ನಾಗಳಪೂರ,ಫಕೀರಪ್ಪ ಕುರಿ,ಅಯ್ಯಪ್ಪ,ಗುಂಡಪ್ಪ ಗಂಗಾವತಿ,ಆದ೯ಶ ಸಜ್ಜನ್ ಸಾಗರ್ ಪಾಟೀಲ್, ಮಂಜುನಾಥ್, ಮಲ್ಲಪ್ಪ ಮಾಟೂರು ಪಾಲ್ಗೊಂಡಿದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!