Monday, April 15, 2024

ಯುಎಇ ಬಸವ ಸಮಿತಿ ದುಬೈ ಅವರಿಂದ ಮಹಾ ಶಿವರಾತ್ರಿ ಆಚರಣೆ

ದುಬೈ:ಯುಎಇ ಯಲ್ಲಿ ಕೋವಿಡ್ ಸಂಖ್ಯೆಯಲ್ಲಿ ಗಣನೀಯ ಇಳಿಮುಖದ ಕಾರಣ, ಎಲ್ಲ ನಿಯಮಾವಳಿ ಗಳನ್ನು ಸಡಿಲಿಸಲಾಗಿ, ಎಲ್ಲ ಸಾರ್ವಜನಿಕ ಕಾರ್ಯ ಕ್ರಮಗಳಿಗೆ ಪರವಾನಿಗೆ ನೀಡಿದ ಖುಶಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಯುಎಇ ಬಸವ ದುಬೈ ವತಿಯಿಂದ ಮಹಾ ಶಿವರಾತ್ರಿಯಂದು ಶಿವಪೂಜೆ ಹಮ್ಮಿಕೊಂಡಿದ್ದರು.

ಮಾರ್ಚ 1 ಮಂಗಳವಾರ ಸಾಯಂಕಾಲ7 ಗಂಟೆಯಿಂದ ರಾತ್ರಿ 120ಗಂಟೆಯ ವರೆಗೆ ಬರ್ ದುಬೈ ನ ಒಮೇಗಾ ಹೋಟೆಲನ್ ,7 ನೇ ಮಹಡಿಯ ಸಭಾಂಗಣದಲ್ಲಿ ಎಲ್ಲ ಶರಣ ಶರಣೆಯರು ಹಾಗು ಶಿವಭಕ್ತರ ಉಪಸ್ಥಿತಿಯಲ್ಲಿ ಬಹು ವಿಜ್ರಂಭನೆಯಿಂದ ಶಿವ ಪೂಜೆ, ಶಿವ ಭಜನೆ ಹಾಗು ಶಿವಧ್ಯಾನ ಮಾಡಿ ಮಹಾದೇವನ ಕೃಪಾಕಟಾಷ್ಕ ಕೋರಿದರು.

ರಾಜಯೋಗ ಕೇಂದ್ರದ ಮಾತಾ ಜೋತಿಕಾ ಅವರು ಶಿವರಾತ್ರಿ ಹಬ್ಬದ ಆಚರಣೆಯ ಮಹತ್ವದ ಕುರಿತು ಮಾತನಾಡಿದರು.ಮಕ್ಕಳಿಂದ ವಿಶ್ವಗುರು ಬಸವೇಶ್ವರ ವಚನ ಗಾಯನ ಹಾಗು ಶಿವ ಗಾಯನ ನಡೆಯಿತು.ಸಲಹಾ ಹಾಗು ಕಾರ್ಯಕಾರಿಣಿ ಸಮಿತಿಯ ಯುಎಇ ಬಸವ ಸಮಿತಿ-ದುಬೈನ ಪದಾಧಿಕಾರಿಗಳಾದ ಚಂದ್ರಶೇಖರ ಲಿಂಗದಳ್ಳಿ, ಮಲ್ಲಿಕಾರ್ಜುನ ಹವಾಲ್ದಾರ,ದಂಡಿನ, ಅನೀಲ ಪೂಜಾರ ಹಾಗು ಮೋಹನ ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!