Thursday, July 25, 2024

ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ; ಚಾನಲ್​​ಗಳೆಲ್ಲ ಸ್ಥಗಿತ! ಇಂದು ಎರಡನೇ ಸುತ್ತಿನ ಮಾತುಕತೆ.

ಕೀವ್: ಉಕ್ರೇನ್​​ನ ಕೀವ್​ ಮತ್ತು ಖಾರ್ಕೀವ್​​ಗಳ ಮೇಲೆ ರಷ್ಯಾ ದಾಳಿ  ಹೆಚ್ಚಾಗಿದೆ. ಕೀವ್​​ನಲ್ಲಿರುವ ಟಿವಿ ಟವರ್​ ಮೇಲೆ ರಷ್ಯಾ ಬಾಂಬ್​​ ದಾಳಿ ನಡೆಸಿದ್ದು, ಇದರಿಂದಾಗಿ ಇಡೀ ದೇಶಾದ್ಯಂತ ಟಿವಿ ಚಾನಲ್​​ಗಳ ಪ್ರಸಾರ ನಿಂತಿದೆ. ಈ ದಾಳಿಯಲ್ಲಿ ಐವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, 2ನೇ ಮಹಾಯುದ್ಧ ಕಾಲದಲ್ಲಿ ಸಾಮೂಹಿಕ ಹತ್ಯೆಯಾಗಿದ್ದ ಯಹೂದಿಗಳ ಸ್ಮರಣಾರ್ಥ ನಿರ್ಮಿಸಿದ್ದ ಸ್ಮಾರಕ ಕೇಂದ್ರಕ್ಕೂ ಹಾನಿಯಾಗಿದೆ.  ದಾಳಿಗೂ ಮೊದಲು ರಷ್ಯಾ ಎಚ್ಚರಿಕೆಯೊಂದನ್ನು ನೀಡಿತ್ತು. ಕೀವ್​​ನಲ್ಲಿರುವ ಭದ್ರತಾ ಸೇವೆಯ ಪ್ರಧಾನ ಕಚೇರಿ ಮೇಲೆ ಹೆಚ್ಚು ಪ್ರಭಾವ ಇರುವ ಶಸ್ತ್ರಗಳಿಂದ ದಾಳಿ ನಡೆಸುತ್ತೇವೆ. ಇಲ್ಲಿ ಸಮೀಪದಲ್ಲಿ ವಾಸವಾಗುತ್ತಿರುವ ಜನರು ಸ್ಥಳಾಂತರಗೊಳ್ಳುವಂತೆ ಹೇಳಿತ್ತು. ಅಷ್ಟೇ ಅಲ್ಲ, ಯುದ್ಧದ ಬಗ್ಗೆ ಮಾಹಿತಿ ಸಿಗದಂತೆ ಮಾಡುವುದಕ್ಕೋಸ್ಕರ್​, ಉಕ್ರೇನ್​ ರಾಜಧಾನಿ ಕೀವ್​​ನಲ್ಲಿರುವ ಇನ್​ಫಾರ್ಮೇಶನ್​ ಮತ್ತು ಸೈಕಾಲಜಿಕಲ್​ ಸೆಂಟರ್​ ಮೇಲೆ ಕೂಡ ಆಕ್ರಮಣ ಮಾಡುವುದಾಗಿ ಹೇಳಿತ್ತು.

ಉಕ್ರೇನ್​​ನ ಎರಡನೇ ದೊಡ್ಡ ನಗರವಾದ ಖಾರ್ಕೀವ್​​ನಲ್ಲಿ ರಷ್ಯಾ ನಿರಂತರವಾಗಿ ಶೆಲ್, ರಾಕೆಟ್​​ ದಾಳಿ ನಡೆಸಿದೆ. ಅದರಲ್ಲಿ ಸುಮಾರು 11 ಮಂದಿ ಮೃತಪಟ್ಟಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಯುಎಸ್​​ ತಂತ್ರಜ್ಞಾನ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಸೋಮವಾರ ಉಪಗ್ರಹಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ರಷ್ಯಾದ ಮಿಲಿಟರಿ ಪಡೆ ಕೈವ್​​ನತ್ತ ಹೋಗುತ್ತಿರುವುದು ಕಂಡುಬಂದಿತ್ತು. ಸುಮಾರು 64 ಕಿಮೀ ಉದ್ದದವರೆಗ ಈ ಮಿಲಿಟರಿ ಬೆಂಗಾವಲು ಪಡೆ ವ್ಯಾಪಿಸಿಕೊಂಡಿದ್ದನ್ನು ಉಪಗ್ರಹ ಚಿತ್ರ ತೋರಿಸಿತ್ತು.

ಇಂದು ಎರಡನೇ ಸುತ್ತಿನ ಮಾತುಕತೆ

ರಷ್ಯಾ ಮತ್ತು ಉಕ್ರೇನ್​ ನಡುವೆ ಇಂದು ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ. ಸೋಮವಾರ ಬೆಲಾರಸ್​​​ನ ಗೋಮೆಲ್​​ನಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಇದರಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಹೊರಬೀಳದ ಕಾರಣ ಇಂದು ಮತ್ತೊಮ್ಮೆ ರಷ್ಯಾ-ಉಕ್ರೇನ್​ ಮಾತುಕತೆ ನಡೆಯಲಿದೆ. ಮೊದಲ ಸುತ್ತಿನ ಮಾತುಕತೆ ಸುಮಾರು 3.5 ತಾಸು ನಡೆದಿತ್ತು.

ಜಿಲ್ಲೆ

ರಾಜ್ಯ

error: Content is protected !!