Sunday, September 8, 2024

ಪರಮನಂದ ಅಮೋಘ ಸಿದ್ದೇಶ್ವರ ಜಾತ್ರೆ ಸಂಪನ್ನ! ಇಂದು ಸಾಯಂಕಾಲ ನೂತನ ರಥೋತ್ಸವ.

ಮುದಗಲ್ಲ :ಸಮೀಪದ ಕನ್ನಾಪೂರ ಹಟ್ಟಿ ನಲ್ಲಿ ಶ್ರೀ ಪರಮನಂದ ಅಮೋಘ ಸಿದ್ದೇಶ್ವರ ಜಾತ್ರೆ ನೂತನ ರಥೋತ್ಸವ ಕಾಯ೯ಕ್ರಮ ಅದ್ದೂರಿ ಕಾರ್ಯಕ್ರಮ ನಡೆಯಿತು..

ಸಂಸ್ಕøತಿ ಎನ್ನುವುದು ಸಮೂಹ ಸಮ್ಮತ ಜೀವನ ಪದ್ದತಿಯಾಗಿದೆ. ಇಂತಹ ಸಂಸ್ಕೃತಿಯ ಪ್ರತೀಕವೇ ಆಗಿರುವ ದೇವಾಲಯಗಳು ಉತ್ಸವಗಳ ಹೆಸರಿನಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವ ಮಹತ್ಕಾರ್ಯ ಮಾಡುತ್ತಿವೆ.

ರಥಕ್ಕೂ ದೇವಾಲಯಕ್ಕೂ ತೀರಾ ಹತ್ತಿರದ ನಂಟು. ರಥವೆಂದರೆ ನಡೆದಾಡುವ ದೇಗುಲವಿದ್ದಂತೆ. ದೇವಾಲಯಗಳ ಉತ್ಸವದ ಪ್ರತೀಕವಾಗಿ ಬಳಸುವ ರಥ ದೇವರ ವಾಹನವೇ ಆಗಿರುತ್ತದೆ ಎನ್ನುವುದು ಪರಂಪರಾಗತ ನಂಬಿಕೆ.

ಅದರಂತೆ ಲಿಂಗಸೂರು ತಾಲೂಕಿನ ಮುದಗಲ್ಲ ಸಮೀಪದ ಕನ್ನಾಪೂರ ಹಟ್ಟಿ ಯ ಪ್ರಸಿದ್ದ ಹಾಗೂ ಪೌರಾಣಿಕ ತಾಣಗಳಲ್ಲಿ ಒಂದಾದ
ಶ್ರೀ ಪರಮನಂದ ಅಮೋಘ
ಶ್ರೀಸಿದ್ದೇಶ್ವರ ಸ್ವಾಮಿಯ ನೂತನ ರಥೋತ್ಸವದ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ.

ಮಾಚ೯ 1 ಕ್ಕೆ ಇಂದು ಸಂಜೆ 5 ಗಂಟೆಗೆ ಸಕಲ ವಾದ್ಯಗಳಿಂದ ನೂತನ ರಥೋತ್ಸವ ನಡೆಯಲಿದೆ.
ರಥವನ್ನು ಎಳೆಯಲಾಗುತ್ತದೆ.
ಕಲ್ಲಿನ ಗಾಲಿಗಳ ಮೇಲಿನ ಅದಿಷ್ಠಾನವು ಚೌಕಾಕಾರವಾಗಿದ್ದು, ಬಲಿಷ್ಠವಾದ, ಗಟ್ಟಿಮುಟ್ಟಾದ ಹಾಗೂ ಬೆಲೆಬಾಳುವ ಕಟ್ಟಿಗೆಯಲ್ಲಿ ನಿರ್ಮಾಣಗೊಂಡಿದೆ.

ಈ ರಥವು ಅವರ ಕಲ್ಪನೆ, ಪ್ರತಿಭಾಸಾಮಥ್ರ್ಯ ಹಾಗೂ ಸತತ ಪರಿಶ್ರಮಗಳ ದ್ಯೋತಕವಾಗಿದೆ.
ವೈವಿಧ್ಯಮಯ ಕೆತ್ತನೆ: ಅಧಿಷ್ಠಾನದ ಮೇಲಿನ ನಡುಪಟ್ಟಿ ಭಾಗದಲ್ಲಿ ಅನೇಕ ಚಿತ್ರಗಳನ್ನು ಕೆತ್ತಲಾಗಿದ್ದು, ಇಡೀ ರಥಕ್ಕೆ ಶೋಭೆಯನ್ನು ತಂದಿವೆ.

ಕನ್ನಡನಾಡು ಅಸಂಖ್ಯ ರಥಗಳ ನಾಡಾದಂತೆ ಹೊಸ ಹೊಸ ರಥಶಿಲ್ಪಿಗಳನ್ನು ಸೃಷ್ಟಿಸುವ ನೆಲೆಬೀಡೂ ಆಗಿರುವುದು ಸಂತೋಷದ ಸಂಗತಿ.

ಬೆಳಿಗ್ಗೆ 11 ಗಂಟೆಗೆ
100 ಹೆಚ್ಚು ಸಾಮುಹಿಕ ವಿವಾಹ ಗಳು ನಡೆದವು ಅದ್ದೂರಿ ಜಾತ್ರೆ ನಡೆಯುತ್ತದೆ. ರಥೋತ್ಸವ ಮತ್ತು ಅಪಾರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆ ನೀಡಿದ್ದಾರೆ.

ಕಾಯ೯ಕ್ರಮದಲ್ಲಿ ..ಗಣ್ಯರಿಗೆ ಗೌರವ ಹಾಗೂ ಸನ್ಮಾನ.‌ ಗಜದಂಡ ಮಹಾ ಸ್ವಾಮಿಗಳು ಲಿಂಗಸೂರು ನ ಶಾಸಕಾದ ಡಿ.ಎಸ್ ಹುಲಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವೂದ್, ಜೆಡಿಎಸ್ ಪಕ್ಷದ ಮುಖಂಡ,ಸಿದ್ದು Y ಬಂಡಿ, ಮಹಾಂತೇಶ ಪಾಟೀಲ್, ಬಿಜೆಪಿಯ ಯುವ ಮುಖಂಡರಾದ ಈಸ್ವರ್ ವಜ್ಜಲ್ ,ಎಸ್ ಆರ್ .ರಸೂಲ್ ಸಾಬ ,‌ರಾಘವೇಂದ್ರ ಗುಮಾಸ್ತೆ ಹಾಗೂ ಗಣ್ಯರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಗಜದಂಡ ಶ್ರೀಗಳು ಮಹಾ ಸ್ವಾಮಿ ಗಳು ,ಲಿಂಗಸೂರುನ ಶಾಸಕರಾದ ಡಿ.ಎಸ್,ಹುಲಿಗೇರಿ ಮುದಗಲ್ಲನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವೂದ್, ಜೆಡಿಎಸ್ ಪಕ್ಷದ ಮುಖಂಡ,ಸಿದ್ದು Y ಬಂಡಿ, ಮಹಾಂತೇಶ ಪಾಟೀಲ್, ಬಿಜೆಪಿಯ ಯುವ ಮುಖಂಡ ರಾದ ಈಶ್ವರ್ ವಜ್ಜಲ್,ಶರಣಯ್ಯ ಒಡೆಯರ್,ಎಸ್ ಆರ್ ರಸೂಲ್ ಪರಮೇಶ ಎಸ್ ಗೋರ್ ಚಂದ್ರಶೇಖರ್, ಹಾಗೂ ಊರಿನ ಹಿರಿಯ ಗಣ್ಯರು ವ್ಯಕ್ತಿಗಳು ಉಪಸ್ಥಿತರಿದ್ದರು..

ವರದಿ : ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!