Thursday, July 25, 2024

ಶರಣರ ವಚನಗಳನ್ನು ಪಾಲಿಸಿದರೆ ಸಾಮಾಜಿಕ ಬದಲಾವಣೆ ಸಾಧ್ಯ:ಬಸವರಾಜ ಬಂಕದಮನೆ.

ಮುದಗಲ್ಲ:ಕಾಯಕ ಶರಣರಾದ ಮೇದಾರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ್ ಕಕ್ಕಯ್ಯ, ಉರಿಲಿಂಗ ಪೆದ್ದಿ,  ಹರಳಯ್ಯ ಅವರ ಜಯಂತಿಯನ್ನು  ಮುದಗಲ್ಲ ಪುರಸಭೆಯಲ್ಲಿ ಇಂದು ಸರಳವಾಗಿ ಆಚರಿಸಲಾಯಿತು..

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಬಂಕದಮನೆ ಅವರು ಶರಣರು ತಮ್ಮ ವಚನದ ಮೂಲಕ ಸಾಹಿತ್ಯವನ್ನು ಸರಳ ಕನ್ನಡದಲ್ಲಿ ಸಮಾನ್ಯ ಜನರಿಗೆ ಅರ್ಥವಾಗುವ ರೀತಿ ತಿಳಿಸಿದ್ದಾರೆ. ಕಾಯಕದಲ್ಲಿ ಸ್ವರ್ಗ ಕಾಣಬಹುದು. ಕಾಯಕವೇ ದೇವರು ಎಂದು ತಿಳಿಸಿಕೊಟ್ಟಿದ್ದಾರೆ. ನಡೆ ಮತ್ತು ನುಡಿ ಒಂದೇ ರೀತಿಯಲ್ಲಿ ಇರಬೇಕು. ಎಂದು ಶರಣರು ವಚನಗಳ ಮೂಲಕ ತಿಳಿಸಿದ್ದಾರೆ.
ಶರಣರ ವಚನಗಳನ್ನು ಪಾಲಿಸಿದರೆ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳು, ಪುರಸಭೆ ಸದಸ್ಯರು ಕರಿಯಪ್ಪ,ಮುಖಂಡರಾದ ಸೈಯದ್ ಸಾಬ, ನಾಗರಾಜ್ ತಳವಾರ, ಮುನ್ನಾ
ಕಾಂಗ್ರೆಸ್ ಯುವ ಅಧ್ಯಕ್ಷರು ಮುದಗಲ್ ಹಾಗೂ ಸಿಬ್ಬಂದಿ ವರ್ಗ ಸೈಯದ್ ನಿಸಾರ್ ಅಲಿ, ಬಿ.ಬಿ. ಹಯಾತ್‌, ಜಯ ಬೀಮ್ ಯುವ ಘಜನೆ ಸೇನೆ ಸೇವಾ ಟ್ರಸ್ಟ್, ಅಧ್ಯಕ್ಷ ಪೂರ್ಣಾನಂದ ಉಪಾಧ್ಯಕ್ಷ ಮಂಜುನಾಥ ,ರವಿ,ಗೋಪಾಲ್ ಬಸವರಾಜ ಬಂಕದಮನೆ, ವೆಂಕಟೇಶ್ ಹಿರೇಮನಿ ಹುಸೇನಪ್ಪ ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!