Tuesday, May 28, 2024

ಭಕ್ತಿಭಾವದ ಬಸವತೀರ್ಥ ಸಿದ್ದಬಸವೇಶ್ವರ ಜಾತ್ರೆ ಸಂಪನ್ನ.

ಬೀದರ್: ಜಿಲ್ಲೆಯ ಹುಮನಾಬಾದ್ ತಾಲ್ಲೂಕು ಬಸವತೀರ್ಥದಲ್ಲಿ ಸಿದ್ದಬಸವೇಶ್ವರ ಜಾತ್ರೆ ಸೋಮವಾರ ಭಕ್ತಿಭಾವದ ಮಧ್ಯ ನೆರವೇರಿತು.ಮಾಜಿ ಸಚಿವರೂ ಆದ ಕ್ಷೇತ್ರದ  ರಾಜಶೇಖರ ಬಿ.ಪಾಟೀಲ ಮಾತನಾಡಿ, ಸ್ವಾರ್ಥಿಗಳಾಗಿದ್ದರೇ ನಮ್ಮ ಪರಿವಾರಕ್ಕೆ ಸೇರಿದ್ದ ಈ ಆಸ್ತಿ ನಾವೇ ಉಳಿಸಿಕೊಳ್ಳಬಹುದಿತ್ತು. ಹಾಗೆ ಮಾಡದೇ ಮಾಜಿ ಸಚಿವ ದಿ.ಬಸವದಾಜ ಪಾಟೀಲರ ಮಾರ್ಗದರ್ಶನದಲ್ಲಿ ಧರ್ಮಕ್ಕಾಗಿ ಶ್ರಮಿಸುವ ಮಠಕ್ಕಾಗಿ ಉದಾರವಾಗಿ ಹಸ್ತಾಂತರಿಸಲಾಗಿದೆ ಎಂದರು.

ದಿವ್ಯ ಸಾನಿಧ್ಯವಹಿಸಿದ್ದ ಡಾ.ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಖಿಕ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಸದಲಾಪುರದ ಸಿದ್ಧಲಿಂಗ ಸ್ವಾಮೀಜಿ, ಖೇಳ್ಗಿಯ ವಿರಕ್ತ ಮಠದ ಪೂಜ್ಯ ಶಿವಲಿಂಗೇಶ್ವರ ಸ್ವಾಮೀಜಿ, ಪೂಜ್ಯ ವಿಶ್ವನಾಥ ದೇವರು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ಹಿರಿಯ ಸಾಹಿತಿಗಳಾದ ಡಾ.ಸೋಮನಾಥ ಯಾಳವಾರ, ನಿವೃತ್ತ ಪ್ರಾಚಾರ್ಯ, ವೈ.ಆರ್.ನಂದಿಹಳ್ಳಿ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಸಂಚಾರಿ ಠಾಣೆ ಪಿ.ಎಸ್.ಐ ಬಸವರಾಜ ಶ್ರೀಮಠದ ಭಕ್ತಾದಿಗಳಾದ ಕಾಶಿನಾಥ ಗಿರಿಮಲ್, ಪ್ರಭುರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಸ್ವಾಮಿಜಿಗಳು ಪ್ರಸಾದ ಬಡಿಸುತ್ತಿರುವುದು.

ಬೀದರದ ರಾಣಿ ಸತ್ಯಮೂರ್ತಿ ನೃತ್ಯಾಲಯ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ವಚನನೃತ್ಯ ನೆರೆದ ಪ್ರೇಕ್ಷಕರ ಮನಸೂರೆಗೊಂಡಿತು.

ಜಿಲ್ಲೆ

ರಾಜ್ಯ

error: Content is protected !!