Monday, September 30, 2024

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರೇ..! ಯಾವ ಪುರುಷಾರ್ಥಕ್ಕಾಗಿ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಪರೀಕ್ಷೆ?

ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮೂಲಕ ಅರ್ಹ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕ ಅಥವಾ ತತ್ಸಮಾನ ವೃಂದದ ಅಧಿಕಾರಿಗಳನ್ನು ಆಯ್ಕೆ ಮಾಡಿ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಿಯೋಜಿಸಲು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2020 ನಿಯಮ 15ರಲ್ಲಿ ಅವಕಾಸ ಕಲ್ಪಿಸಲಾಗಿರುತ್ತದೆ.

ಆದರೆ ಪ್ರಸ್ತುತ 2021-22ನೇ ಸಾಲಿನ ಮುಖ್ಯಶಿಕ್ಷಕ ಅಥವಾ ತತ್ಸಮಾನ ಗ್ರುಪ್-ಬಿ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲು 2021 ಡಿ.07 ರಂದು ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಈ ಆದೇಶದಲ್ಲಿ ಬಿ.ಆರ್.ಸಿ ,ಎ.ಡಿ.ಸಿ(ಸಮಗ್ರ ಶಿಕ್ಷಣ ಕರ್ನಾಟಕ), ವಿಷಯ ಪರಿವೀಕ್ಷಕರು ಹಾಗೂ ಸಹಾಯಕ ನಿರ್ದೇಶಕರು(ಮ.ಉ.ಯೋಜನೆ) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 20 ಷರತ್ತುಗಳನ್ನು ವಿಧಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಅರ್ಜಿ ಸಲ್ಲಿಸಲು ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು ಹಾಗೂ ತತ್ಸಮಾನ ಗ್ರುಪ್-ಬಿ ವೃಂದದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕೆಂಬ ಷರತ್ತಿದೆ.

ಆದರೆ ಕೆಲವರು ಲಿಖಿತ ಪರೀಕ್ಷೆಗೆ ಹಾಜರಾಗದೇ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಮೇಕಾತಿ ಆದೇಶಗಳನ್ನು ಆದೇಶ ಹೊರಡಿಸಿದ ದಿನಾಂಕದ ನಂತರ ಪಡೆದುಕೊಂಡಿದ್ದಾರೆ. ಇಂತಹವರಲ್ಲಿ ಕೆಲವರು ಕನಿಷ್ಠ 3 ವರ್ಷ ಅರ್ಹತಾ ಸೇವೆಯನ್ನು ಪೂರೈಯಿಸಿರುವುದಿಲ್ಲ.

ಸಾರ್ವಜನಿಕ ಶಿಕಣ ಇಲಾಖೆ ಆಯುಕ್ತರ ಆದೇಶಕ್ಕೆ ಕವಡೆ ಕಾಸಿನ ಬೆಲೆ ಇಲ್ಲದಂತೆ ಇದೇ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸದೇ ದಿನಾಂಕ:23-12-2021, 28-12-2021, 25-02-2022 ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಶಿಕ್ಷಣ ಇಲಾಖೆ(ಪ್ರೌಢ) ಇವರು ಅನೇಕರಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.

ಆದೇಶದಲ್ಲಿ ನಿಗದಿಪಡಿಸಿದಂತೆ ಅರ್ಜಿ ಸಲ್ಲಿಸಿ,ಪರೀಕ್ಷೆ ಬರೆದು, ಫಲಿತಾಂಶ ಪಟ್ಟಿ ಪ್ರಕಟಿಸಿ, ಪ್ರಕಟಿಸಿದ ಪಟ್ಟಿಗೆ ಆಕ್ಷೇಪಣೆ ಸ್ವೀಕರಿಸಲು 2022 ಫೆ.25 ರಂದು ಆದೇಶದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಮತ್ತೊಂದು ಆದೇಶವನ್ನು ಇದೆ ಫೆ.25ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಶಿಕ್ಷಣ ಇಲಾಖೆ(ಪ್ರೌಢ)ಇವರು ಸದರಿ ನಿರ್ದಿಷ್ಟ ಪಡಿಸಿದ ಹುದ್ದೆಗೆ ವರ್ಗಾವಣೆ ಆದೇಶ ನೀಡಿರುವದು ಆಕ್ಷೇಪನೀಯವಾಗಿದೆ (ಉದಾ: ವಿಜಯಪೂರದಿಂದ ಚಿಕ್ಕೋಡಿಗೆ) 

 

ಇನ್ನೊಂದು ವಿಪರ್ಯಾಸದ ಸಂಗತಿಯಂದರೆ ಕೆಲವರು ಕನಿಷ್ಠ 03 ವರ್ಷ ಸೇವೆ ಪೂರೈಸಿದ್ದಾರೆ. ಆದರೆ ಅವರು ಲಿಖಿತ ಪರೀಕ್ಷೆ ಮೂಲಕ ಆಯ್ಕೆಯಾಗದೆ ಯಾವುದೋ ಮೂಲದಿಂದ ಬಂದು ನಿರ್ದಿಷ್ಟ ಪಡಿಸಿದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹವರು ಸದರಿ ಹುದ್ದೆಯಲ್ಲಿ ಮುಂದುವರೆಯಲು ಇಚ್ಚಿಸಿದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗೆ ಮಾತ್ರ ಪರೀಕ್ಷೆಯನ್ನು ತೆಗೆದುಕೊಂಡು ಕನಿಷ್ಠ ಉತ್ತೀರ್ಣರಾದರೆ ಸಾಕು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹುದ್ದೆ ಇವರಿಗಾಗಿಯೇ ಮೀಸಲು. ಇಂತಹವರು ಅದೇ ಹುದ್ದೆಯಲ್ಲಿ ಮುಂದುವರೆಯಬಹುದು. ಬೇರೆಯವರು ಇವರಿಗಿಂತ ಮೇರಿಟ್ ಹೆಚ್ಚಿಗಿದ್ದರೂ ಅವರಿಗೆ ಕೌನ್ಸಲಿಂಗನಲ್ಲಿ ಸದರಿಯವರ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಬರುವುದಿಲ್ಲವೆಂಬ ನಿಯಮ ಆದೇಶದಲ್ಲಿದೆ.

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತದೆ.
ಒಟ್ಟಾರೆಯಾಗಿ ಎಲ್ಲ ಇಲಾಖೆಗಳಿಗೆ ಮಾತೃ ಇಲಾಖೆಯಾದ ಶಿಕ್ಷಣ ಇಲಾಖೆಯಲ್ಲಿ ನಿಯಮ ,ಜ್ಞಾಪನ, ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ. ಇಲಾಖಾ ಮೇಲಾಧಿಕಾರಿಗಳಿಗೆ ಗೋತ್ತಿದೆಯೋ ಅಥವಾ ಗೊತ್ತಿದ್ದು ಇಲಾಖೆಗೆ ಕೆಡುಂಟು ಮಾಡುವ ಹುನ್ನಾರದಲ್ಲಿದ್ದಾರೋ ಎಂಬ ಭಾವನೆ ಪರೀಕ್ಷಾರ್ಥಿಗಳಲ್ಲಿ ಮೂಡುತ್ತಿದೆ.

ಕೂಡಲೆ  ಶಿಕ್ಷಣ ಸಚಿವರು , ಶಿಕ್ಷಕ ಮತಕ್ಷೇತ್ರಗಳಿಂದ ಆಯ್ಕೆಯಾದ ಎಲ್ಲ ವಿಧಾನ ಪರಿಷತ್ ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಗಮನಹರಿಸಿ ಎಲ್ಲ ಇಲಾಖೆಗಳಿಗೆ ಮಾತೃ ಇಲಾಖೆಯಾದ ಶಿಕ್ಷಣ ಇಲಾಖೆಯ ಗೌರವವನ್ನು ಎತ್ತಿ ಹಿಡಿಯುತ್ತಾರೆ ಎಂದು ಕಾದುನೋಡಬೇಕಾಗಿದೆ.

ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆದೇಶ ನೀಡುತ್ತಿರುವುದು ನಿಯಮ ಉಲ್ಲಂಘನೆಯಾದಂತಾಗುತ್ತದೆ ಮತ್ತು ಇಲಾಖಾ ಉನ್ನತಾಧಿಕಾರಿಗಳು ಕ್ರಮಕೈಕೊಂಡು ಮೇರಿಟ್ ಆಧಾರಿತ ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ತಿರ್ಮಾನ ತೆಗದುಕೊಳ್ಳಬೇಕು.

ಬಸವರಾಜ ಹೊರಟ್ಟಿ.
ಸಭಾಧ್ಯಕ್ಷರು. ವಿಧಾನ ಪರಿಷತ್ ಬೆಂಗಳೂರು

 

ವರದಿ:ಉಮೇಶ ಗೌರಿ (ಯರಡಾಲ)

ಜಿಲ್ಲೆ

ರಾಜ್ಯ

error: Content is protected !!