Wednesday, July 24, 2024

ಬೊಮ್ಮಾಯಿ ಬಜೆಟ್ ನಲ್ಲಾದರೂ ಹಡಪದ ಸಮುದಾಯಕ್ಕೆ ನ್ಯಾಯ ದೊರಕುತ್ತಾ.? ಸಮಾಜದ ಬೇಡಿಕೆಗಳಿಗಾಗಿ ಸರ್ಕಾರವನ್ನು ಒತ್ತಾಯಿಸಿದ;ಸಂತೋಷ ಹಡಪದ.

ಬೈಲಹೊಂಗಲ: ಕನ್ನಡ ನೆಲ,ಜಲ, ಭಾಷೆ ಸಾಹಿತ್ಯ-ಸಂಸ್ಕೃತಿ ತಳಹದಿಯ ಮೇಲೆ 12ನೇ ಶತಮಾನಕ್ಕಿಂತ ಪೂರ್ವದಿಂದ ಕ್ಷೌರಿಕ ಕಾಯಕ ಮಾಡಿಕೊಂಡು ಸಮಾಜದ ಸೇವೆ ಮಾಡುತ್ತಿರುವ ಹಡಪದ ಸಮುದಾಯಕ್ಕೆ ಈ ಬಾರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಬಜೆಟ್ ನಲ್ಲಿ ಹಡಪದ ಸಮುದಾಯದ ಬೇಡಿಕೆಗಳು ಈಡೇರಬಹುದಾ ಎಂದು ಶಬರಿ ರಾಮನಿಗೆ ಕಾದು ಕುಳಿತಂತೆ ಸಮುದಾಯದ ಜನ ಕಾಯುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು 2017ರಲ್ಲಿ ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ 24 ಗಂಟೆಯೊಳಗಾಗಿ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಅದು ಇಂದಿಗೂ ಕನಸಾಗಿಯೇ ಉಳಿದಿದೆ ಈಗಿನ ಮುಖ್ಯಮಂತ್ರಿಗಳು ಈಡೇರಿಸುತ್ತಾರಾ? ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಎಂದು ಬೆಳಗಾವಿ ಜಿಲ್ಲೆಯ ಹಡಪದ ಸಮಾಜದ ಕಾರ್ಯಧ್ಯಕ್ಷ ಸಂತೋಷ ಹಡಪದ ಮಾಧ್ಯಮಯೊಂದಕ್ಕೆ ಹೇಳಿದ್ದಾರೆ.

ಬೈಲಹೊಂಗಲದಲ್ಲಿ ಮಾಧ್ಯಮಯೊಂದಿಗೆ ಮಾತನಾಡಿದ ಅವರು ಶಬರಿಗೆ ರಾಮನ ದರ್ಶನ ಹೇಗಾಯಿತು ನಮ್ಮ ಸಮುದಾಯಕ್ಕೆ ನಮ್ಮ ಭಾಗದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಕೃಪಾಕಟಾಕ್ಷದಿಂದ ಬೇಡಿಕೆಗಳು ಈಡೇರಬಹುದು ಎಂಬ ಭರವಸೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನಮ್ಮ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮಾಜದ ಅರ್ಹ ವ್ಯಕ್ತಿಗಳಿಗೆ ನಿಗಮದಲ್ಲಿ ಸೂಕ್ತಸ್ಥಾನಮಾನ ದೊರಕಿಸಿಕೊಡಬೇಕು. ಸಮುದಾಯದ ಜಾತಿ ನ್ಯೂನ್ಯತೆಯನ್ನು ಸರಿಪಡಿಸಿ ಎಲ್ಲರಿಗೂ ಒಂದೇ ರೀತಿಯ ಜಾತಿ ಪ್ರಮಾಣಪತ್ರ ದೊರಕುವಂತಾಗಬೇಕು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ತಂಗಡಗಿಯ  ಹಡಪದ ಅಪ್ಪಣ್ಣ ಪೀಠಕ್ಕೆ ವಿಶೇಷ ಅನುದಾನದ ದೊರಕಿಸಿ ಸುಸಜ್ಜಿತವಾದ ಶಾಲೆ, ವಸತಿ ನಿಲಯ, ಜೊತೆಗೆ ಶ್ರೀಮಠದ ಅಭಿವೃದ್ಧಿಗೆ ನೆರವಾಗುವುದು. ಸಮುದಾಯದ ವೃತ್ತಿನಿರತ ವ್ಯಕ್ತಿಗೆ ಸರ್ಕಾರದಿಂದ ವಿಶೇಷ ವಿಮಾ ಯೋಜನೆ ಕಲ್ಪಿಸುವುದು ಇದರಿಂದ ಸಾಂಕ್ರಾಮಿಕ ರೋಗ ಹೊಂದಿರುವ ವ್ಯಕ್ತಿಯ ಸೇವೆ ಮಾಡಿದಾಗ ಆ ರೋಗವು ವೃತ್ತಿದಾರನಿಗೆ ಅಂಟಿಕೊಳ್ಳುವುದರಿಂದ ಅವನ ಜೀವನದ ಆಧಾರಸ್ತಂಭ ಕಳಚಿ ಬಿದ್ದಂತಾಗುತ್ತದೆ ಹಾಗಾಗಿ ವಿಮಾ ಸೌಲಭ್ಯ ದೊರಕಿಸಿಕೊಡುವುದು. ಸರ್ಕಾರದಿಂದ ಘೋಷಣೆಯಾಗುವ ಮೀಸಲಾತಿ ಯೋಜನೆಗಳಲ್ಲಿ ನಮ್ಮ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿಯನ್ನು ದೊರಕಿಸಿಕೊಡಬೇಕು. ಅನ್ಯ ರಾಜ್ಯದಿಂದ ಬಂದು ಇಲ್ಲಿ ವೃತ್ತಿ ಮಾಡುತ್ತಿರುವವರಿಗೆ ಸರ್ಕಾರದ ಸೌಲಭ್ಯಗಳು ಅತಿ ಸಲೀಸಾಗಿ ದೊರೆಯುತ್ತಿವೆ ಆದರೆ ಕರ್ನಾಟಕದ ಮೂಲ ನಿವಾಸಿಗಳಾದ ನಮಗೆ ಇದುವರೆಗೆ ಸೌಲಭ್ಯಗಳು ಸರಿಯಾಗಿ ಸಿಗದಿರುವುದು ನಮ್ಮ ದುರಾದೃಷ್ಟ ಎಂದು ಸಂತೋಷ ಹಡಪದ ಮಾದ್ಯಮ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!