Saturday, July 27, 2024

ಅತಿ ವೇಗವಾಗಿ ಚಲಿಸುವ ವಾಹನಗಳಿಂದ ಜನ ಹೈರಾಣ!ರಸ್ತೆಯಲ್ಲಿ ರೋಡ್ ಬ್ರೇಕಿಂಗ್ ವ್ಯವಸ್ಥೆ ಇಲ್ಲದರಿಂದ ಸಾರ್ವಜನಿಕರ ಪರದಾಟ

ಮುದಗಲ್ಲ: ಜನದಟ್ಟಣೆ ಮತ್ತು ಅಪಘಾತ ವಲಯಗಳಲ್ಲಿ, ಶಾಲೆಗಳಿರುವ ರಸ್ತೆಯಲ್ಲಿ ವಾಹನಗಳ ವೇಗವನ್ನು ಕುಗ್ಗಿಸಲು ಸಾಮಾನ್ಯವಾಗಿ ರಸ್ತೆ ಉಬ್ಬುಗಳನ್ನು (ರೋಡ್ ಬ್ರೇಕ) ನಿರ್ಮಿಸಲಾಗುತ್ತದೆ. ಈ ರೀತಿಯ ಉಬ್ಬುಗಳು ಜನರಿಗೆ ಒಂದು ರೀತಿಯಲ್ಲಿ ಸುರಕ್ಷತೆ ತಂದೊಡ್ಡುವಲ್ಲಿ ಯಶಸ್ವಿಯಾಗಿದೆ.

ಆದರೆ ಮುದಗಲ್ಲನ ಹೂಗಾರ ಓಣಿ ಇಂದ ಹಳೆಯ ಪೇಟೆ ವರೆಗಿನ ರಸ್ತೆಯಲ್ಲಿ ಯಾವುದೇ “ರೋಡ್ ಹಂಪ್”ಗಳು ಇಲ್ಲದ ಕಾರಣ ಸಣ್ಣ ಮಕ್ಕಳ ಹಾಗೂ ವೃದರ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ.

ಓಣಿ ಯಲ್ಲಿ ಅತಿ ವೇಗವಾಗಿ ಬೈಕ್  ಹಾಗೂ ಕಾರು ಸವಾರರು ಓಡಿಸುತ್ತಿದ್ದಾರೆ. . ಸಣ್ಣ ಮಕ್ಕಳು ರಸ್ತೆಯಲ್ಲಿ ಇದ್ದಾರೆ ಎಂದು ನೋಡದೆ ಅತಿ ವೇಗವಾಗಿ ಬೈಕ್ ಚಲಾಯಿಸುತ್ತಿರೆ.

ಈ ರಸ್ತೆಯಲ್ಲಿ ಮಾರ್ಗದಲ್ಲಿ ಅಪಘಾತಗಳು ಹೊಸದೇನೂ ಅಲ್ಲ, ಆಗಾಗ್ಗೆ ಇಂತಹ ಘಟನೆಗಳು ಸಂಭವಿಸುತ್ತವೆ. ಮುಖ್ಯ ಕಾರಣ ರೋಡ್ ಗಳಿಗೆ ಹಂಪ್ ಗಳು ಇಲ್ಲದೆ ಇರುವುದು ಮತ್ತು ವೇಗವಾಗಿ ಬೈಕ್ ಹಾಗೂ ಆಟೋ ಕಾರು ಗಳು ಸವಾರ ಅತಿ ವೇಗವಾಗಿ ಓಡಾಡುವ ಮಾಹಿತಿ ಕೇಳಿಬರುತ್ತಿದೆ.

ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಜನರು ಹಾಗೂ ಮಕ್ಕಳ ಪಾಲಕರು  ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!