Monday, September 16, 2024

ಚಂದವಾದ ಚಿತ್ರಗಳಿಂದ ಅಂದವಾಗಿ ಕಾಣುತ್ತಿರುವ ಹೊಸ ಕಾದರವಳ್ಳಿ ಸರಕಾರಿ ಪ್ರಾಥಮಿಕ ಶಾಲೆ

ಸುದ್ದಿ ಸದ್ದು ನ್ಯೂಸ್

ಲೇಖನ: ಬಸವರಾಜ ಚಿನಗುಡಿ

ಚನ್ನಮ್ಮನ ಕಿತ್ತೂರು: ತಾಲೂಕಿನ ಶಾಲೆಗಳಿಗೆ ಶುಕ್ರದೆಶೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಇಂದು ಗುಣಮಟ್ಟದ ಶಿಕ್ಷಣದ ಜೊತೆಗೆ ಆಕರ್ಷಣೀಯ ತಾಣಗಳಾಗುತ್ತಿವೆ. ಶಾಲೆಯ ಘಂಟೆ ಭಾರಿಸುವುದೆ ತಡ ಮಕ್ಕಳು ಆಸಕ್ತಿಯಿಂದ ಶಾಲೆಯತ್ತ ಓಡೋಡಿ ಬರುತ್ತಾರೆ. ಕೋವಿಡ್-19 ಸಂಕಟದಿಂದ ಹೊರಬಂದ ಗ್ರಾಮೀಣ ಮಕ್ಕಳಿಗೆ ಈಗ ಆಟ ಪಾಠಗಳ ಜೊತೆಯಾಗುತ್ತಿವೆ.‌ ಸರ್ಕಾರದ ಮಹತ್ವಕ್ಕಾಂಕ್ಷೆಯ ಯೋಜನೆಯಾದ ನರೇಗಾದ ಅಡಿಯಲ್ಲಿ ಇಂದು ಕಿತ್ತೂರು ಕ್ಷೇತ್ರದ ಬಹುತೇಕ ಶಾಲೆಗಳು ಶಾಲೆಯ ಮೈದಾನ ಶೌಚಾಲಯ, ಕ್ರೀಡಾಂಗಣಗಳು, ಗ್ರಂಥಾಲಯಗಳು ಮಕ್ಕಳ ಕಲಿಕೆ ಪೂರಕವಾಗುತ್ತಿವೆ ಇದರ ಜೊತೆಗೆ ಎಸ್.ಡಿ.ಎಮ್.ಸಿ ಸಹಕಾರದಿಂದ ಶಾಲೆಗಳಿಗೆ ಮೂಲಸೌಕರ್ಯಗಳು ದೊರೆಯುತ್ತಿವೆ ಇಂತಹ ಸೌಲಭ್ಯಗಳನ್ನು ಪಡೆದು ಸರಿಯಾದ ಮಾರ್ಗದಲ್ಲಿ ಅನುಷ್ಟಾನ ಗೊಳಿಸುತ್ತಿರುವ ಶಾಲೆಯೇ ೈತಿಹಾಸಿಕ ಕಿತ್ತೂರು ತಾಲೂಕಿನ ಹೊಸ ಕಾದರವಳ್ಳಿಯ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ಪ್ರಸ್ತುತ 190 ಮಕ್ಕಳು ಓದುತ್ತಿದ್ದು 6 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆ ಹೊಸ ಕಾದರವಳ್ಳಿಯಲ್ಲಿ ಈ ವರ್ಷದಲ್ಲಿ ಪ್ರಾರಂಭವಾಗಿದ್ದು ಇಂದು ತನ್ನದೇ ಆದ ಗುಣಮಟ್ಟದ ಶಿಕ್ಷಣದಿಂದ ಈ ಶಾಲೆಯಲ್ಲಿ ಕಲಿತ ಅನೇಕ ವಿಧ್ಯಾರ್ಥಿಗಳು ನೌಕರಿ ಮತ್ತು ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡು ತಮ್ಮ ಬದಕು ಕಟ್ಟಿಕೊಂಡಿದ್ದಾರೆ,

ಶಾಲೆ ಗೋಡೆಯ ಮೇಲೆ ಅಂದವಾದ ಚಿತ್ರ ಬಿಡಿಸಿದ್ದು

ಬೆಳಗಾವಿ ಜಿಲ್ಲಾ ಪಂಚಾಯತ ಸಿ.ಇ.ಓ ಅವರು ಮುತವರ್ಜಿಯಿಂದ ಇಂದು ಇಂತಹ ಅನೇಕ ಶಾಲೆಗಳಿಗೆ ಮೆರಗು ಬಂದಿದೆ. ನಿತ್ಯ ವಚನ ನಾಣ್ಣುಡಿಗಳ ಆಲಾಪ ಇಲ್ಲಿಯ ಮಕ್ಕಳಿಗೆ ಸಂಸ್ಕಾರವನ್ನು ನೀಡುವ ನಿಟ್ಟಿನಲ್ಲಿ ಪ್ರಾರ್ಥನಾ ಸಮಯದಲ್ಲಿ ವಚನ ನಾಣ್ಣುಡಿ ಜೊತೆಗೆ ರಾಷ್ಟ್ರದ ಮಹಾನ ನಾಯಕರ ಜೀವನಗಾಥೆಗಳನ್ನು ಮಕ್ಕಳ ಮನಸ್ಸಿಗೆ ಮುಟ್ಟಿಸಲು ಸಾರ್ವಜನಿಕರ ಸಹಕಾರದಿಂದ ಧ್ವನಿ ವರ್ಧಕದ ಮೂಲಕ ಭೋದನೆ ಮಾಡಲಾಗುತ್ತದೆ. ಜೊತಗೆ ಊಟದ ಸಮಯದಲ್ಲಿ ನಲಿಕಲಿ ಪದ್ಯಗಳು ಹಾಗೂ ಇತರ ತರಗತಿಯ ಪದ್ಯಗಳನ್ನು ಆಲಿಸುತ್ತಾರೆ.

ಶಾಲೆಯ ಗೋಡೆಯ ಮೇಲೆ ಚಿತ್ರ ರಚನೆ ಮಾಡಿದ ಬಾವಚಿತ್ರ

ಶಾಲೆಯ ಆವರಣವನ್ನು ಇತ್ತೀಚೆಗೆ ನರೇಗಾ ಅಡಿಯಲ್ಲಿ ಸಮತಟ್ಟು ಮಾಡಲಾಗುತ್ತಿದೆ. ಹಾಗೂ ಶಾಲೆಯ ಎಲ್ಲ ಗೋಡೆಗಳು ಮನಮೋಹಕ ಚಿತ್ರಗಳಿಂದ ಮಕ್ಕಳನ್ನು ಆಕರ್ಷಿಸುತ್ತಿವೆ. ಈ ಶಾಲೆಯ ಮಕ್ಕಳು ರಾಷ್ಟೀಯ ಮತ್ತು  ಸಾಂಸ್ಕ್ರತಿಕ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳಲ್ಲಿ ಮಕ್ಕಳು ಆಸಕ್ತಿಯಂದ ಭಾಗಿಯಾಗುತ್ತಾರೆ.

ಶಾಲೆಯ ಗೋಡೆಗಳ ಮೇಲೆ ಅಂದವಾದ ಚಿತ್ರ ರಚನೆ

ʻʻನಮ್ಮ ಶಾಲೆಯಲ್ಲಿ ಇಂದು ಹಲವು ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣದ ಜೊತೆಗೆ ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಮ್ಮ ಶಾಲೆಯ ಮಕ್ಕಳ ಸಂಖ್ಯೆ 200 ಗಡಿಗೆ ಬಂದು ನಿಂತಿದೆ. ನಮ್ಮ ಶಾಲೆಯ ಸಹ ಶಿಕ್ಷಕರ ಹಾಗೂ ಎಸ್‌ಡಿಎಮ್‌ಸಿ ಅವರ ಸಹಕಾರದಿಂದ ಶಾಲೆಯು ಅಭಿವೃಧ್ಧಿಯತ್ತ ದಾಪುಗಾಲು ಹಾಕುತ್ತಿದೆ”. ಹೂವಪ್ಪ ಬೋಗುರು, ಮುಖ್ಯೋಪಾದ್ಯಾಯರು ಹಿರಿಯ ಪ್ರಾಥಮಿಕ ಶಾಲೆ ಹೊಸ ಕಾದರವಳ್ಳಿ.

ಹೂವಪ್ಪ ಬೋಗುರು, ಮುಖ್ಯೋಪಾದ್ಯಾಯರು ಹಿರಿಯ ಪ್ರಾಥಮಿಕ ಶಾಲೆ ಹೊಸ ಕಾದರವಳ್ಳಿ.

 

ʻʻ ಗ್ರಾಮ ಪಂಚಾಯತ, ಎಸ್‌ಡಿಎಮ್‌ಸಿ ಹಾಗೂ ಗ್ರಾಮಸ್ಥರು ಸರಕಾರಿ ಶಾಲೆಗಳತ್ತ ಬಹಳಷ್ಟು ಆಸಕ್ತಿ ಹೊಂದಿ ಶಾಲೆಗಳನ್ನು ಭೌದ್ಧಿಕ ಸೌಂದರ್ಯಗೊಳಿಸಿದ್ದಾರೆ. ಅದರ ಜೊತೆಗೆ ಮಕ್ಕಳ ಕಲಿಕೆಯು ಕೂಡಾ ಅದ್ಭುತವಾಗಿ ನಡೆಯಬೇಕು ಎಂದು ನನ್ನ ಮನದಾಸೆಯಾಗಿದೆ”. ರವೀಂದ್ರ ಬಳಿಗಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಿತ್ತೂರು.

ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ

 

ʻʻನಮ್ಮ ಶಾಲೆಯಲ್ಲಿ ಮಕ್ಕಳ ನೈಜ ಕಲಿಕೆಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗಿದ್ದುಇಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಕಾರ್ಯ ಇತರರಿಗೆ ಮಾದರಿಯಾಗಿದೆ, ಮುಂಬರುವ ದಿನಗಳಲ್ಲಿ ಶಾಲೆಯ ಬರುವ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಶುದ್ಧ ಕುಡಿಯುವ ನೀರು, ಓಳ್ಳೊಳ್ಳೆ ಆಟದ ಸಾಮಗ್ರಿ ಇತರೆ ಕಲಿಕೆಗೆ ಬೇಕಾಗುವ ಎಲ್ಲ ತರಹದ ಸೌಕರ್ಯಗಳನ್ನು ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ”. ರಾಜು ಗಾಣಗೇರ ಎಸ್‌ಡಿಎಮ್‌ಸಿ ಅಧ್ಯಕ್ಷರು ಹೊಸ ಕಾದರವಳ್ಳಿ

ರಾಜು ಗಾಣಗೇರ ಎಸ್ಡಿಎಮ್ಸಿ ಅಧ್ಯಕ್ಷರು ಹೊಸ ಕಾದರವಳ್ಳಿ

 

ಜಿಲ್ಲೆ

ರಾಜ್ಯ

error: Content is protected !!