Wednesday, September 18, 2024

ಹೆಂಡತಿ ಫೋಟೋ ಅಪ್ಲೋಡ್ ಮಾಡಿ RIP ಎಂದ ಗಂಡ, ಮಗಳ ಹುಡುಕಿ ಬಂದ ಪಾಲಕರಿಗೆ ಶಾಖ

ಸುದ್ದಿ ಸದ್ದು ನ್ಯೂಸ್

ಬೆಂಗಳೂರು: ಜನ್ಮದಿನದ ಪಾರ್ಟಿ ವಿಚಾರಕ್ಕೆ ಸತಿಪತಿ ಇಬ್ಬರ ನಡುವೆ ಜಗಳ ನಡೆದು ಮರುದಿನ ಗಂಡ ಹೆಂಡತಿಯ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿ ರಿಪ್ (RIP) ಎಂದು ಬರೆದು ಶ್ರದ್ದಾಂಜಲಿ ಸಲ್ಲಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿಯಲ್ಲಿ ನಡೆದಿದೆ. ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ ಎನ್ನುವ ವ್ಯಕ್ತಿ ತನ್ನ ಹೆಂಡತಿ ಲೀಲಾವತಿಯ ಭಾವಚಿತ್ರವನ್ನು ಹಾಕಿ ಶ್ರದ್ದಾಂಜಲಿ ಸಲ್ಲಿಸಿದ್ದಾನೆ ಎನ್ನಲಾಗಿದೆ.

ಅಳಿಯ ಹಾಕಿದ ಫೇಸ್ ಬುಕ್ ಪೋಸ್ಟ್ ನೋಡಿ ಗಾಬರಿಗೊಂಡ ಪೋಷಕರು, ಮಗಳನ್ನು ಹುಡುಕಿಕೊಂಡು ಆಕೆಯ ಗಂಡನ ಮನೆಗೆ ಬಂದಿದ್ದಾರೆ. ಈ ವೇಳೆ ಆಕೆ ನಾಪತ್ತೆಯಾಗಿರುವ ವಿಚಾರ ಗೊತ್ತಾಗುತ್ತದೆ. ಹಾಗಾಗಿ, ಅಳಿಯ ಮುನಿಕೃಷ್ಣ ನಮ್ಮ ಮಗಳನ್ನು ಕೋಲೆ ಮಾಡಿದ್ದಾನೆ. ಈಗ ನಾಪತ್ತೆಯಾಗಿದ್ದಾಳೆ ಎಂದು ನಾಟಕ ಆಡ್ತಿದ್ದಾನೆ ಎಂದು ಲೀಲಾವತಿ ಪೋಷಕರು ಕಣ್ಣೀರು ಹಾಕಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪ್ರಕರಣದ ಬಗ್ಗೆ ಮುನಿಕೃಷ್ಣ ಮನೆಯವರು ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ. ಗಂಡ – ಹೆಂಡತಿ ನಡುವೆ ಜಗಳ ನಡೆದು, ಮುನಿ ಕೃಷ್ಣಹೆಂಡತಿಗೆ ಹೊಡೆದಿದ್ದು ನಿಜ. ಆದರೆ, ಆ ಬಳಿಕ ಲೀಲಾವತಿ ಮನೆ ಬಿಟ್ಟು ಹೋಗಿದ್ದಾಳೆ. ಇದರಲ್ಲಿ ಮುನಿಕೃಷ್ಣನದ್ದು ಏನು ತಪ್ಪಿಲ್ಲ. ಅಲ್ಲದೆ, ಲೀಲಾವತಿ ಹೋಗುವಾಗ ಗಂಡನ ಮೊಬೈಲ್ ತೆಗೆದುಕೊಂಡು ಹೋಗಿದ್ದು, ಅದರಿಂದಲೇ ಆಕೆಯ ಫೋಟೋ ಹಾಕಿ ರಿಪ್ ಎಂದು ಬರೆದಿದ್ದಾಳೆ ಎನ್ನುತ್ತಿದ್ದಾರೆ. ಸದ್ಯ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯಿಂದ ಸತ್ಯಾಸತ್ಯತೆ ತಿಳಿದು ಬರಬೇಕಿದೆ.

 

ಜಿಲ್ಲೆ

ರಾಜ್ಯ

error: Content is protected !!