Saturday, July 27, 2024

ಸಿಲಿಕಾನ್ ವ್ಯಾಲಿಯಲ್ಲಿ “ಮೋದಿ ಮೋದಿ” ಅಂತಾ ಕೂಗಿದ ಪ್ರತಿಶತ 80 ಭಾರತಿಯರು ಎಸ್ ಎಮ್ ಕೃಷ್ಣಾ ಸ್ಥಾಪಿಸಿದ ಐಟಿ ಸಾಮ್ರಜ್ಯದ ರುಣಿಗಳು …

 

ಸುದ್ದಿ ಸದ್ದು ನ್ಯೂಸ್

ಇವತ್ತು ನಮ್ಮ ದೇಶದ ಪ್ರಧಾನಿಗಳು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯ facebook, Google , Microsoft , Cisco ಅಂತಾ ಹೋಗಿದ್ದು , ಮತ್ತು ಆ ಕಂಪೆನಿಗಳ ಧಣಿಗಳು ಅವರನ್ನು ರತ್ನ ಕಂಬಳಿ ಹಾಕಿ ಸ್ವಾಗತಿಸಿದ್ದು ನಾವೆಲ್ಲಾ ನೋಡ್ತಾ ಇದ್ದೆವೆ. ಅಂದ ಹಾಗೆ ಸಂತಸ ಪಡಬೇಕಾದ ವಿಷಯವೇ ಅದು. ನಿಮ್ಗೆ ಗೊತ್ತಿರಬೇಕು ಈ ಜಗತ್ತಿನ , ಯಾವುದೇ ದೇಶದ ಪ್ರಧಾನಮಂತ್ರಿ ಅಥಾವ ಅಧ್ಯಕ್ಷರು ಸಿಲಿಕಾನ್ ವ್ಯಾಲಿಯ ಇಂತಹಾ ದಿಗ್ಗಜ “ಹೆಡ್ಡ್” ಆಪೀಸಿಗೆ ಹೊಗಬೇಕಾದ್ರೆ , ಅವರ ಕಾರ್ಯಲಯದವರು “ನಮ್ಮ ಮುಖಂಡರು ಬರ್ತಾರೆ” “ನಿಮ್ಗೆ ಈ ದಿನ , ಇಷ್ಟು ನಿಮಿಷ Appointment ಕೊಡಲು ಆಗುತ್ತಾ ಅಂತಾ ನಿವೇದನೆ ಕಳಿಸುತ್ತಾರೆ. ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳು ಕ್ಯಾಲಿಪೋರ್ನಿಯಕ್ಕೆ ಹೋಗುವ ಮೊದಲು ನವದೆಹ಼ಲಿಯ ಏಳನೇ ರೇಸ್ ಕೋರ್ಸ್ ರಸ್ತೆಯ PM ಕಾರ್ಯಲಾಯದಿಂದ ಅಂತಹುದ್ದೆ ಮನವಿ ಹೋಗಿತ್ತು …! ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶ, ಇಲ್ಲಿ ಇರುವ 130 ಕೋಟಿ ಜನ ಮಾರುಕಟ್ಟೆ ಇರುವ ದೊಡ್ಡ ದೊರೆ ಬರ್ತಾರೆ ಅಂದ್ರೆ , ಸಿಲಿಕಾನ್ ವ್ಯಾಲಿಯ ವ್ಯಾಪರಿ CEO ಗಳು ಸುಮ್ಮನೆ ಇರ್ತಾರಾ… ?

ಮನವಿ ಒಪ್ಪಿ ದಯವಿಟ್ಟು ಬನ್ನಿ ಅಂದ್ರು.ಅವ್ರಿಗೆ ಭರ್ಜರಿ ಸುಗ್ಗಿ … !!
ಆದ್ರೆ ಸುಮಾರು 15 ವರುಷಗಳ ಹಿಂದೆ , ಇಂಡಿಯಾ ದೇಶದಿಂದ ಯಾವ ಪ್ರಧಾನಿ ಸಿಲಿಕಾನ್ ವ್ಯಾಲಿಗೆ ಹೋಗ್ತಾನೆ ಇರಲಿಲ್ಲ. ಆದ್ರೂ ಆ ಸಿಲಿಕಾನ್ ಸಿಟಿಯ ತಾಂತ್ರಿಕ ದೊರೆಗಳು , ಅವತ್ತಿನ ಇಂಡಿಯಾದ ಪ್ರಧಾನಿ ಬಿಡಿ , ಜಗತ್ತಿನ ಯಾವ ಪ್ರಧಾನಿಗೂ ಸಿಗದ ಜನ ” ನಮ್ಗೆ ನಿಮ್ಮ ಬರೇ 15 ನಿಮಿಷ ಕೊಡ್ತಿರಾ ? ನಿಮ್ಮೊಟ್ಟಿಗೆ ಮಾತಡಬೇಕು , ಬೆಂಗಳೂರಿಗೆ ಬರ್ಲಾ ? Please … ! ” ಅಂತಾ ನಿವೇದನೆ ಮಾಡ್ತಾ ಇದ್ರು. ಯಾರೊಟ್ಟಿಗೆ ಗೊತ್ತಾ ? ಅದು ಸೋಮನಹಳ್ಳಿ ಮಲ್ಲಯ್ಯ ಕ್ರಷ್ಣ ಎಂಬುವರು ನಮ್ಮ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ … !! ಅವತ್ತು ಮೈಕ್ರೊಸಾಪ್ಟ್ ನಲ್ಲಿ ಇಂಡಿಯಾದ ಸತ್ಯ ನಾಡೆಲ್ಲಾ CEO ಆಗಿರಲಿಲ್ಲ , ಮೈಕ್ರೊಸಾಪ್ಟ್ ಜನಕ ಬಿಲ್ ಗೇಟ್ಸ್ ಯೇ ಇದ್ರು ! . ಇವತ್ತಿನ ಹಾಗೆ ಸುಂದರ್ ಪಿಚಾಯ್ Google ನಲ್ಲಿ ಇರಲಿಲ್ಲ , ಆದ್ರೆ Google ಜನಕ ಲ್ಯಾರಿ ಪೇಜ್ ಕೂಡಾ “ಕ್ರಷ್ಣ ಸಾರ್ , ನಮ್ಗೆ 15 ನಿಮಿಷ appointment ಕೊಡಿ ಅಂತಾ ಬೇಡ್ತಾ ಇದ್ರು. ಅವತ್ತು Facebook ಅಂತಾ ಇರಲೇ ಇಲ್ಲಾ … ! Mark Elliot Zuckerberg ಗೆ ಅವಾಗ ಮೀಸೆನೆ ಇರಲಿಲ್ಲಾ … !! ಸಿಲಿಕಾನ್ ವ್ಯಾಲಿಯ ಎಲ್ಲಾ ದೊರೆಗಳೂ ” ಕ್ರಷ್ಣ ಸಾರ್ ನಮ್ಗೆ ಸ್ವಲ್ಪ ಜಾಗ ಕೊಡಿ , ನಾವು ಬೆಂಗಳೂರಲ್ಲಿ ಅಂಗಡಿ ಹಾಕ್ತೆವೆ” ಅಂತಾ ದಂಬಾಲು ಬಿದ್ರು. ಇವತ್ತು ಬೆಂಗಳೂರಿನಲ್ಲಿ “ಇಲೆಕ್ಟ್ರಾನಿಕ್ಸ್ ಸಿಟಿ” ಮತ್ತು “ವೈಟ್ ಫೀಲ್ಡ್” ಅಂತಾ IT ಸಾಮ್ರಾಜ್ಯ ಸ್ಥಾಪಿಸಿ , ಜಗತ್ತಿನ ಮೂಲೆ ಮೂಲೆಯ IT ಕಂಪೆನಿಗಳು ಅಂಗಡಿ ತೆಗೆದು , ಇಂಡಿಯಾ ದೇಶದ , ನಾರ್ಥು , ಸೌತು , ಈಷ್ಟೂ , ವೆಸ್ಟೂ ಅಂತಾ ಎಲ್ಲಾರಿಗೂ ಉದ್ಯೋಗ ಕೊಡಿಸಿದ ಖ್ಯಾತಿ ಅಂತಾ ಇದ್ದರೆ ಅದು ಸೋಮನಹಳ್ಳಿ ಮಲ್ಲಯ್ಯ ಕ್ರಷ್ಣ ರದ್ದು … !
ಪಾಪ , ಇವತ್ತಿನ ಮಾಧ್ಯಮಗಳು ಅವರನ್ನು ಮರೆತು ಬಿಟ್ಟಿವೆ. !! ಇವತ್ತು ಆ ಸಿಲಿಕಾನ್ ವ್ಯಾಲಿಯಲ್ಲಿ “ಮೋದಿ ಮೋದಿ” ಅಂತಾ ಕೂಗಿದ 80 %ಭಾರತಿಯರು S. M. Krishna ಸ್ಥಾಪಿಸಿದ IT ಸಾಮ್ರಜ್ಯದ ರುಣಿಗಳು … ! ಅಂದ ಹಾಗೆ ಸೋಮನಹಳ್ಳಿ ಮಲ್ಲಯ್ಯ ಕ್ರಷ್ಣ ವ್ಯಾಪರಿಯಲ್ಲ. ಬಡ ರೈತ ಕುಟುಂಬದಲ್ಲಿ , ಕ್ರಷಿಕನಾಗಿ ಈ ಮಟ್ಟಕ್ಕೆ ಬೆಳೆದದ್ದು. ವ್ಯಾಪರಿಗಳೆಂದವರು ಕೆಲವೊಮ್ಮೆ , ವಿಪರೀತವಾಗಿ ಇರ್ತಾರೆ. But ಕಲಿಯುಗದ ಕ್ರಷ್ಣ ಹಾಗಲ್ಲಾ …

ಜಿಲ್ಲೆ

ರಾಜ್ಯ

error: Content is protected !!