Friday, July 26, 2024

ಗೋಕಾಕದ ಕಾಮುಕನಿಂದ ಹಾಸ್ಟೆಲ್ ಸೂಪರಿಂಟೆಂಡೆಂಟ್ ಗೆ  ಲವ್.. ಸೆಕ್ಸ್.. ದೋಖಾ 

ಬೆಳಗಾವಿ: ಲವ್.. ಸೆಕ್ಸ್.. ದೋಖಾ ಪ್ರಕರಣವೊಂದು ಬೆಳಗಾವಿ ಜಿಲ್ಲೆ ಗೋಕಾಕಿನಲ್ಲಿ ಬಯಲಾಗಿದೆ.ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರವೆಸಗಿ, ಬಳಿಕ ಮೋಸ ಮಾಡಿದ್ದಾನೆಂದು ಯುವಕನೊಬ್ಬನ ವಿರುದ್ಧ ಸಂತ್ರಸ್ತೆ ಆರೋಪಿಸಿದ್ದಾಳೆ.

ಇದೀಗ ಯುವಕ ಬೇರೆ ಯುವತಿ ಜತೆ ಯುವಕ ಮದುವೆಯಾಗುತ್ತಿದ್ದು, ನೊಂದ ಯುವತಿ ನ್ಯಾಯಕ್ಕಾಗಿ ಬೆಳಗಾವಿ ಎಸ್‌ಪಿ ಮೊರೆ ಹೋಗಿದ್ದಾಳೆ.

ಗೋಕಾಕ್‌ನ‌ ಬಾಲಕಿಯರ ವಸತಿ ನಿಲಯವೊಂದರ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ
ನೊಂದ ಯುವತಿ, ಕಟ್ಟಡ ಮಾಲೀಕನ ಪುತ್ರ ಆದರ್ಶ ಮಾಲದಿನ್ನಿ ವಿರುದ್ಧ ದೂರು ನೀಡಿದ್ದಾಳೆ.

2016ರ ಡಿಸೆಂಬರ್ 5ರಂದು ಅತ್ಯಾಚಾರ ಮಾಡಿ ಫೋಟೋ ತಗೆದುಕೊಂಡು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್‌ಲೋಡ್ ಮಾಡೋದಾಗಿ ಬೆದರಿಸಿದ್ದಾನೆಂದು ಆಕೆ ಆರೋಪಿಸಿದ್ದಾಳೆ.

ಇದಾದ ಬಳಿಕ ಯುವತಿ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿದ್ದಂತೆ‌, ಮದುವೆಯಾಗ್ತೀನಿ ಅಂತಾ ನಂಬಿಸಿದ್ದಾನಂತೆ. ನಂಬಿಸಿ ಮೋಸ ಮಾಡಿ ಇಂದು ಬೇರೆ ಯುವತಿ ಜೊತೆ ಮದುವೆಯಾಗುತ್ತಿದ್ದಾನೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.

ಯುವಕ ಆದರ್ಶನ ತಂದೆ ತಾಯಿಗೆ ಹೇಳಿದ್ರೂ ಹಣದ ಆಮಿಷ ತೋರಿಸಿ ಬಳಿಕ ಜೀವ ಬೆದರಿಕೆ ಹಾಕಿದ್ದಾರೆ, ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಆಕೆ ಆರೋಪಿಸಿದ್ದಾಳೆ.

ಜಿಲ್ಲೆ

ರಾಜ್ಯ

error: Content is protected !!