Thursday, July 25, 2024

ಮೂಲ ಸೌಲಭ್ಯಕ್ಕೆ ಆಗ್ರಹಿಸಿ ರಸ್ತೆತಡೆದು ಪ್ರತಿಭಟನೆ.

ರಾಜ್ಯ ಹೆದ್ದಾರಿ ರಸ್ತೆ ತಡೆದು ಆಕ್ರೋಶ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಇಲ್ಲದೆ ಚರಂಡಿ ಕಾಲುವೆ ನೀರು ನಿಂತು ದುರ್ವಾಸನೆ ಸಾರ್ವಜನಿಕರಿಗೆ ತೊಂದರೆ.

ಮುದಗಲ್ಲ : ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಉಪ್ಪಾರ ಓಣಿಯಲ್ಲಿ 7 ವಾಡಿ೯ನ ನಿವಾಸಿಗಳ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಮುಂದೆ ಇರುವ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಹಳೆಯ ಚರಂಡಿ ನೀರು ರಸ್ತೆಗಳಲ್ಲಿ ಹರಿಯುತ್ತದೆ. ಮನೆಗಳಿಗೂ ನುಗ್ಗುತ್ತದೆ. ಆದ್ದರಿಂದ ತಕ್ಷಣ ಸಮರ್ಪಕ ಚರಂಡಿ ವ್ಯವಸ್ಥೆ, ರಸ್ತೆ ದುರಸ್ತಿ ಮಾಡಿಸಬೇಕೆಂದು ಎಂದು ಒತ್ತಾಯಿಸಿದರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೆಂದರಲ್ಲಿ ಹರಿಯುತ್ತಿರುವ ಒಳಚರಂಡಿ ನೀರು ದುರ್ವಾಸನೆ ಬೀರುತ್ತಿರುವ ಪರಿಣಾಮ ಮುದಗಲ್ಲ ಉಪ್ಪಾರ ಓಣಿ ಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಕಲುಷಿತ ನೀರು ಹರಿದು ಹೋಗಲು ಸಮರ್ಪಕವಾಗಿ ಒಳಚರಂಡಿ ನಿರ್ಮಾಣ ಮಾಡಿಲ್ಲ.ಸ್ವಚ್ಛತೆ ಮಾಡಲು  ಮುಂದಾಗುತ್ತಿಲ್ಲ. ಹೀಗಾಗಿ ಜನರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

ರಸ್ತೆ ಮತ್ತು ಸೂಕ್ತವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆ ಮೇಲೆ ಹರಿಯುತ್ತದೆ. ಕಚ್ಚಾ ರಸ್ತೆಯ ಮೇಲೆ ಹರಿದು ಕಸ , ಪ್ಲಾಸ್ಟಿಕ್‌ , ತ್ಯಾಜ್ಯ ಸಂಗ್ರಹಗೊಂಡು ಗಬ್ಬೆದ್ದು ನಾರುತ್ತಿದೆ. ಕೊಳಚೆ ಪ್ರದೇಶದಿಂದ ಎಲ್ಲಾ ಕಡೆಯೂ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ.

ಗಬ್ಬೆದ್ದು ನಾರುತ್ತಿರುವ ಚರಂಡಿ ನೀರಿನಲ್ಲಿ ನಿತ್ಯ ಓಡಾ ಡುವಂತಾಗಿದೆ.ಆಯತಪ್ಪಿ ಹಲವು ಕೊಚ್ಚೆ ನೀರಿನಲ್ಲಿ ಬಿದ್ದ ಘಟನೆಗಳು ನಡೆದಿವೆ.ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯು ಕೂಡ ಸಂಪೂರ್ಣವಾಗಿ ಹದಗೆಟ್ಟಿದೆ. ಮೊಣಕಾಲು ಮಟ್ಟದಷ್ಟು ತಗ್ಗು ಬಿದ್ದಿದೆ. ಅದರಲ್ಲಿ ಒಳಚರಂಡಿ ನೀರು ನಿಂತುಕೊಂಡಿದೆ.

ಇದಕ್ಕೆ ಮುಖ್ಯವಾಗಿ ರಸ್ತೆ ಕಾಮಗಾರಿ ಹಿಡಿದ ಗುತ್ತಿಗೆದಾರ ಹಾಗೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಪುರಸಭೆ ನೈಮಲ್ಯ ಅಧಿಕಾರಿಗಳ ಜೊತೆ ವಾಗ್ವಾದ ಮಾಡಿ ನಡೆಯಿತು. ನಂತರ ಮಾತನಾಡಿದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. 

ಮುದಗಲ್ಲ ಪೋಲಿಸ್ ಠಾಣೆಯಲ್ಲಿ ಪಿಎಸ್ಐ ಡಾಕೇಶ ಹಾಗೂ ಸಿಬ್ಬಂದಿ ವರ್ಗದವರು ಟ್ರಾಫಿಕ್ ಜಾಮ್ ತೆರವುಗೊಳಿಸಿದರು.

ವರದಿ: ಮಂಜುನಾಥ ಕುಂಬಾರ.

ಜಿಲ್ಲೆ

ರಾಜ್ಯ

error: Content is protected !!