Saturday, June 15, 2024

ಅಕ್ಷಿತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಲ್ಯಾಪ್ ಟ್ಯಾಪ್, ಪ್ರಾಜೆಕ್ಟರ್ ಕೊಡುಗೆ ; ಅಧ್ಯಕ್ಷ ಎಸ್ ಆರ್ ಎಸ್ ದೇವರಾಜ್

ಚಿಕ್ಕಬಳ್ಳಾಪುರ : ನಗರದ ಬಿಬಿ ರಸ್ತೆಯಲ್ಲಿರುವ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅಕ್ಷತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಧ್ಯಕ್ಷ ಎಸ್ ಆರ್ ಎಸ್ ದೇವರಾಜ್ ಅವರು ಕೊಡುಗೆಯಾಗಿ ನೀಡಿದ್ದರು.

ಅಕ್ಷಿತ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ಎಸ್ ದೇವರಾಜು ಮಾತನಾಡಿ ನಮ್ಮ ಟ್ರಸ್ಟ್ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲು ಆರಂಭಿಸಿದ್ದೇವೆ ನಿಟ್ಟಿನಲ್ಲಿ ಮುಂದುವರಿದ ಭಾಗವಾಗಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಕರ್ನಾಟಕ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿ ಯವರೆಗೂ ವಿದ್ಯಾಭ್ಯಾಸ ಮಾಡುತ್ತಿರುವ 370 ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂದು ನಮ್ಮ ಟ್ರಸ್ಟ್ ವತಿಯಿಂದ ಲ್ಯಾಪ್ ಟ್ಯಾಪ್ ಹಾಗೂ ಪ್ರೋಜೆಕ್ಟರ್ ಕೊಡುಗೆ ನೀಡಿ ಶೈಕ್ಷಣಿಕ ವಿಷಯದ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದ್ದರು.

ಮತ್ತು ಇತರೆ ಮುಂದುವರಿದ ದೇಶಗಳಿಗಿಂತ ಇನ್ನೂ ಭಿನ್ನವಾಗಿ ಭಾರತ ದೇಶವು ಡಿಜಿಟಲ್ ವ್ಯವಸ್ಥೆಯಲ್ಲಿ ಅಭಿವೃದ್ಧಿ ಮಾಡಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಾಗಿರುತ್ತದೆ ಆ ಕನಸನ್ನು ನನಸು ಮಾಡಲು ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸೌಲತ್ತುಗಳು ಕಡಿಮೆ ಇರುವ ಕಾರಣ ಅಕ್ಷಿತಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಲ್ಯಾಪ್ ಟ್ಯಾಪ್ ಹಾಗೂ ಪ್ರಾಜೆಕ್ಟರ್ ಕೊಡುಗೆ ನೀಡುವ ಮೂಲಕ ಮಕ್ಕಳಲ್ಲಿ ಹೆಚ್ಚಿನದಾಗಿ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಹಾಗೂ ಮುಂದಿನ ಯುವ ಪೀಳಿಗೆಗೆ ಮಾದರಿಯಾಗುವ ನಿಟ್ಟಿನಲ್ಲಿ ಇಂತಹ ಮಹತ್ವವಾದ ಕಾರ್ಯಕ್ಕೆ ಗಮನ ಹರಿಸಲಾಗುತ್ತಿದೆ ಅದರೆ, ಇನ್ನೂ ಮುಂದಿನ ದಿನಗಳಲ್ಲಿ ಇಂತಹ ಸಾರ್ವಜನಿಕ ಸೇವೆಗಳನ್ನು ಗುರುತಿಸಿ ನನ್ನಿಂದಾಗುವಷ್ಟು ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಲ್ಯಾಪ್ ಟ್ಯಾಪ್ ಮತ್ತು ಪ್ರಾಜೆಕ್ಟರ್ ವಿತರಣೆ ಮಾಡಿದ ಕಾರ್ಯಕ್ರಮದ ಮುಖೇನ ಅಕ್ಷತಾ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಎಸ್ ಸರ್ ಎಸ್ ದೇವರಾಜು ಅವರನ್ನು ಶಾಲಾ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಅಭಿನಂದಿಸಲಾಯಿತು.

*ಹಲವು ಸಾಮಾಜಿಕ ಕಾರ್ಯಕ್ರಮಗಳು :
ರಕ್ಷಿತಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ಎಸ್ ದೇವರಾಜು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ ನಮ್ಮ ಟ್ರಸ್ಟ್ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಲು ಆರಂಭಿಸಿದ್ದೇವೆ ಅದೇ ರೀತಿಯಲ್ಲಿ ಪ್ರಮುಖವಾಗಿ ಯಮ ಸ್ವರೂಪಿ ಮಹಾಮಾರಿ ಕೊರೊನಾ ವೈರಸ್ ಒಂದನೇ ಮತ್ತು ಎರಡನೇ ಅಲೆ ದೇಶಾದ್ಯಂತ ವ್ಯಾಪಿಸಿರುವ ವೈರಸ್ಸನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಹಗಲಿರುಳು ಎಗ್ಗಿಲ್ಲದೆ ಮನೆ ಮಠ ಮಕ್ಕಳು ಸಂಸಾರವನ್ನು ತ್ಯಜಿಸಿದ ಪೊಲೀಸರಿಗೆ ಕಾರ್ಮಿಕರಿಗೆ ಆಟೋ ಡ್ರೈವರ್ ಗಳಿಗೆ ಮತ್ತು ಆರೋಗ್ಯ ಸಿಬ್ಬಂದಿ ಮತ್ತು ಪೌರ ಕಾರ್ಮಿಕ ವರ್ಗದವರು ಹಗಲಿರುಳು ಕೆಲಸ ನಿರ್ವಹಿಸಿದರು ಆ ನಿಟ್ಟಿನಲ್ಲಿ ಎಲ್ಲ ವರ್ಗದ ಶ್ರಮಿಕರನ್ನು ಗುರುತಿಸಿ ತರಕಾರಿ, ಆಹಾರ ಪೊಟ್ಟಣ ಹಾಗೂ ದಿನಸಿ ಕಿಟ್ಟುಗಳನ್ನು ವಿತರಣೆ ಮಾಡಿ ಅವರನ್ನು ಉತ್ತೇಜಿಸುವ ಸಲುವಾಗಿ ಸನ್ಮಾನ ಕಾರ್ಯಕ್ರಮವನ್ನು ಸಹ ಮಾಡಲಾಗಿದ್ದು ಹಾಗೂ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅವರನ್ನು ಉತ್ತೇಜಿಸುವ ಸಲುವಾಗಿ ಹತ್ತು ಹಲವು ಬಗೆಯ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಸ್ಮರಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಶೋಭಾ, ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ, ಸಿ ಆರ್ ಪಿ ಶ್ರೀನಿವಾಸ್, ಪಿಯು ಕಾಲೇಜು ಉಪನ್ಯಾಸಕ ಮೋಹನ್ ಕುಮಾರ್, ಟ್ರಸ್ಟಿನ ಸದಸ್ಯರಾದ ಕಿರಣ್, ಮಧು, ಅಶೋಕ್, ಸುನೀಲ್, ಮಹಾಂತೇಶ ಹಾಗೂ ಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಇದ್ದರು

ವರದಿ : ಎ ಧನಂಜಯ್ .ಚಿಕ್ಕಬಳ್ಳಾಪುರ

ಜಿಲ್ಲೆ

ರಾಜ್ಯ

error: Content is protected !!